ಸೆಟ್ಟೇರಿತು ‘ಟಕೀಲಾ’ ಕಿಕ್ಕೋ ಕಿಕ್ಕು ಕನ್ನಡ ಸಿನಿಮಾ
ಬೆಂಗಳೂರಿನ ಸುಸಜ್ಜಿತವಾದ ಹೊಟೇಲ್ ಶೆರಾಟನ್ ಗ್ರಾಂಡ್ ನಾಲ್ಕನೇ ಮಹಡಿಯಲ್ಲಿ ಕನ್ನಡ
ಸಿನಿಮಾ ‘ಟಕೀಲಾ’ ಕಿಕ್ಕೋ ಕಿಕ್ಕು ಎಂಬ ಅಡಿಬರಹ ಇರುವ ಚಿತ್ರ ಪ್ರವೀಣ್ ನಾಯಕ್
ನಿರ್ದೇಶನದಲ್ಲಿ ಹಾಗೂ ಮರಡಿಹಳ್ಳಿ ನಾಗಚಂದ್ರ ನಿರ್ಮಾಣದಲ್ಲಿ ಸೆಟ್ಟೇರಿದೆ.
ಬಹಳ ವರ್ಷಗಳ ಬಳಿಕ ‘ಜೆಡ್’ ‘ಮೀಸೆ ಚಿಗುರಿದಾಗ’, ಹೂ ಅಂತೀಯಾ ಊಹೂ ಅಂತೀಯಾ’
ಸಿನಿಮಾಗಳ ನಿರ್ದೇಶಕ ಮೂಲತಃ ಛಾಯಾಚಿತ್ರ ಪತ್ರಕರ್ತ ಪ್ರವೀಣ್ ನಾಯಕ್ ನಿರ್ದೇಶನಕ್ಕೆ
ತಮ್ಮದೇ ಆದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದೊಂದಿಗೆ ವಾಪಸ್ ಆಗಿದ್ದಾರೆ.
ಪ್ರವೀಣ್ ನಾಯಕ್ ಇಂದಿನ ಸ್ಥಿತಿಗತಿ ಸಾಮಾಜಿಕ ಜೀವನದಲ್ಲಿ ಇಟ್ಟುಕೊಳ್ಳುವುದೇ ಅಲ್ಲದೆ
ಯಾವುದು ‘ನಶೆ’ ಎಂದು ವಿಸ್ತಾರವಾಗಿ ಹೇಳ ಹೊರಟಿದ್ದಾರೆ. ಮಧ್ಯಪಾನ, ಡ್ರಗ್ಸ್,
ತೀವ್ರವಾದ ಸಂಬಂದವೆ ನಶೆಯ ಎಂದು ವ್ಯಾಖ್ಯಾನ ಮಾಡುತ್ತಾ. ಅತಿಯಾದ ‘ಅಡ್ಡಿಕ್ಷನ್’ ಸಹ
ದೊಡ್ಡ ನಶೆ ಜೀವನದಲ್ಲಿ ಎಂದು ಹೇಳಲಿದ್ದಾರೆ. ಇದರ ಜೊತೆಗೆ ಪಶು ಭಾವ, ವೀರಭಾವ ಸಹ
ಚಿತ್ರಕತೆಯಲ್ಲಿ ಬೆರಸಿದ್ದಾರೆ. ಜೀವನದಲ್ಲಿ ದುಡ್ಡು ಬಹಳ ಮುಖ್ಯ ಅಲ್ಲ ಎನ್ನುವುದು
ಇವರ ಚಿತ್ರದ ಗುರಿ ಹಾಗೂ ಉದ್ದೇಶ. ಕೆಲವು ಕಡೆ ಮಾನಶಾಸ್ತ್ರದ ಛಾಯೆ ಸಹ ಚಿತ್ರದಲ್ಲಿ
ಕಂಡು ಬರುವುದು ನಿರ್ದೇಶಕ ಪ್ರವೀಣ್ ನಾಯಕ್ ಅವರು ಜೀವನದಲ್ಲಿ ಕಂಡಿರುವುದನ್ನೇ ಹೇಳಲು
ಹೊರಟಿದ್ದಾರೆ.
ಈ ಹಿಂದೆ ‘ಜನ್ ಧನ್’ ಕನ್ನಡ ಸಿನಿಮಾ ನಿರ್ದೇಶನ ಮಾಡಿದ ಮರಡಿಹಳ್ಳಿ ನಾಗಚಂದ್ರ ಈ
ಚಿತ್ರದ ನಿರ್ಮಾಪಕರು. 30 ದಿವಸಗಳ ಕಾಲ ಬೆಂಗಳೂರು, ಸಕಲೆಶಪುರ ಸ್ಥಳಗಳಲ್ಲಿ
ಚಿತ್ರೀಕರಣ ಮಾಡಲಿದ್ದಾರೆ. ಇದೊಂದು ತಂತ್ರಜ್ಞರೆಲ್ಲ ಸೇರಿಕೊಂಡು ಮಾಡುತ್ತಿರುವ
ಸಿನಿಮಾ ಎಂದು ಹೇಳುತ್ತಾರೆ ನಾಗಚಂದ್ರ.
ಈ ಚಿತ್ರದ ಕಥಾ ನಾಯಕ ಧರ್ಮ ಕೀರ್ತಿರಾಜ್. ಅನುಭವಿಗಳ ಜೊತೆ ಕೆಲಸ ಮಾಡುವುದು ಖುಷಿಯ
ವಿಚಾರ. ಇದೊಂದು ಕ್ರೈಂ ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಸಹ ಒಳಗೊಂಡಿದೆ. 12 ವರ್ಷಗಳ
ಬಳಿಕ ಸ್ನೇಹಿತ ನಾಗೇಂದ್ರ ಅರಸ್ ಜೊತೆ (ನವಗ್ರಹ ನಂತರ) ಜೊತೆ ಸಿನಿಮಾದಲ್ಲಿ
ಮಾಡುತ್ತಿರುವುದು ಮತ್ತೊಂದು ಖುಷಿ ಧರ್ಮ ಕೀರ್ತಿರಾಜ್ ಅವರಿಗೆ.
ಸಂಕಲನಕಾರ, ನಿರ್ದೇಶಕ ಹಾಗೂ ನಟ ನಾಗೇಂದ್ರ ಅರಸ್ (ಹಿರಿಯ ನಟ ಸುಂದರಕೃಷ್ಣ ಅರಸ್
ಪುತ್ರ) ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಅಭಿನಯ ಮಾಡುತ್ತಿದ್ದಾರೆ. ಇತ್ತೀಚಿಗೆ
ಜಿಮ್ ವ್ಯಾಯಾಮ ಮಾಡಿದ್ದು ಈ ಪಾತ್ರಕ್ಕೆ ಹೊಂದಿಕೊಳ್ಳುವಂತೆ ಆಯಿತು ಎಂದು
ಹೇಳಿಕೊಂಡರು.
ಚಿತ್ರದ ಕಥಾ ನಾಯಕಿ ನಿಖಿತಾ ಸ್ವಾಮಿ. ಶೀರ್ಷಿಕೆಯಲ್ಲಿ ಒಂದು ಕಿಕ್ ಎಂದು ಹೇಳುವ
ನಿಕಿತ ಸ್ವಾಮಿ ಇಲ್ಲಿ ಅಭಿನಯಕ್ಕೆ ಬಹಳ ಅವಕಾಶವಿದೆ. ಒಳ್ಳೆಯ ಸಸ್ಪೆನ್ಸ್ ಸಹ
ಒಳಗೊಂಡಿದೆ ಎಂದು ಹೇಳಿಕೊಂಡರು. ಸುಮನ್, ಅಂಕಿತ ಬಾಲ, ಕೋಟೆ ಪ್ರಭಾಕರ್
ಶ್ರೀ ಸಿದ್ದಿವಿನಾಯಕ ಫಿಲ್ಮ್ಸ್ ಅಡಿಯಲ್ಲಿ ತಾಯರಾಗುತ್ತಿರುವ ಈ ಸಿನಿಮಾಕ್ಕೆ ಪಿ ಕೆ
ಎಚ್ ದಾಸ್ ಅವರ ಛಾಯಾಗ್ರಹಣವಿದೆ, ಟಾಪ್ ಸ್ಟಾರ್ ರೇಣು ಅವರು ನಾಲ್ಕನೇ ಸಂಗೀತ
ನಿರ್ದೇಶನದಲ್ಲಿ ಮೂರು ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ.