Kasturi Nivasa.50 Years.

Friday, January 29, 2021

294

ಕಸ್ತೂರಿ ನಿವಾಸ ಸುವರ್ಣ ಸಂಭ್ರಮ

೧೯೭೧ರಲ್ಲಿ ಬಿಡುಗಡೆಗೊಂಡು ಸೂಪರ್ ಹಿಟ್‌ಆಗಿದ್ದ ‘ಕಸ್ತೂರಿ ನಿವಾಸ’ ಚಿತ್ರವುಜನವರಿ ೨೯, ೨೦೨೧ಕ್ಕೆ ಸರಿಯಾಗಿಐವತ್ತು ವರ್ಷಗಳು ಆಗಿದ್ದರೂ, ಇಂದಿಗೂ ಎಲ್ಲರುಇಷ್ಟಪಡುತ್ತಾರೆ.ಈ ನಿಟ್ಟಿನಲ್ಲಿಡಾ.ರಾಜ್‌ಕುಮಾರ್ ಮತ್ತು ಡಾ.ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘದವರುಅದೇ ದಿನದಂದು ‘ಸುವರ್ಣ ಸಂಭ್ರಮ’ ಕಾರ್ಯಕ್ರಮವನ್ನುಡಾ.ರಾಜ್ ಪುಣ್ಯಭೂಮಿ ಸಮೀಪ ಏರ್ಪಾಟು ಮಾಡಿದ್ದರು.ಇದೇ ಸಂದರ್ಭದಲ್ಲಿ ನಿರ್ದೇಶಕ ಭಗವಾನ್, ನಿರ್ಮಾಣ ಮಾಡಿದ್ದ ಕೆ.ಸಿ.ಎನ್.ಗೌಡರ ಪುತ್ರ ಕೆ.ಸಿ.ಎನ್.ಮೋಹನ್ ಮತ್ತು ಪಾರ್ವತಮ್ಮರಾಜ್‌ಕುಮಾರ್ ಸಹೋದರಎಸ್.ಎ.ಗೋವಿಂದರಾಜ್ ಅವರುಗಳನ್ನು ಗೌರವಿಸಲಾಯಿತು. ನಂತರ ಮಾತನಾಡಿದ ಭಗವಾನ್ ಹಲವು ರೋಚಕ ಸಂಗತಿಗಳನ್ನು ತೆರೆದಿಟ್ಟರು.

ಸಿನಿಮಾವುಐವತ್ತು ವರ್ಷತುಂಬಿದ್ದಕ್ಕೆಕನಕಾಭಿಷೇಕ ಮಾಡಬೇಕಾಗಿದೆ.ಎರಡು ದಿನಗಳು ಶುಕ್ರವಾರ ಬಂದಿರುವುದು ಕಾಕತಾಳಿಯವಾಗಿದೆ.ಇದೇಜಾಗದಲ್ಲಿಚಿತ್ರೀಕರಣ ನಡೆಸಲಾಗಿ, ಈಗ ಸಂತೋಷವನ್ನು ಆಚರಿಸಿಕೊಳ್ಳುತ್ತಿರುವುದು ಹಾಗೂ ಅಣ್ಣಾವ್ರರ ಪುಣ್ಯಭೂಮಿಎದುರು ನಾವೆಲ್ಲರೂ ಸೇರಿಕೊಂಡಿರುವುದು ಸಂತಸದ ಸಂಗತಿ. ಹತ್ತೋಂಬತ್ತು ದಿನಗಳಲ್ಲಿ ಶೂಟಿಂಗ್ ನಡೆಸಲಾಗಿ, ಆ ಕಾಲಕ್ಕೆ ಮೂರು ಮುಕ್ಕಾಲು ಲಕ್ಷದಲ್ಲಿ ಮೊದಲ ಪ್ರಿಂಟ್ ಹೊರ ಬಂದಿತ್ತು. ಇದರಲ್ಲಿ ಬೃಹದಕಾರದ ಸೆಟ್‌ಗೆಒಂದೂಕಾಲು ಲಕ್ಷಖರ್ಚುಆಗಿತ್ತು.ಕತೆಯಲ್ಲಿ  ನಾಯಕ ಸಾವಿಗೆ ಶರಣಾಗುವುದರಿಂದ ಮೊದಲು ಕೇಳಿದ್ದ ಶಿವಾಜಿಗಣೇಶನ್ ತಿರಸ್ಕಾರ ಮಾಡಿದ್ದರು. ಅದರಂತೆಡಾ.ರಾಜ್ ಸಹ ಇಷ್ಟಪಟ್ಟಿರಲಿಲ್ಲ. ಕೊನೆಗೆ ಡಾ.ರಾಜ್ ಸೋದರ ವರದಪ್ಪ ಸಲಹೆ ಮೇರೆಗೆ ನಟಿಸಿದ್ದು, ಇಂದುಚರಿತ್ರೆ ಸೃಷ್ಟಿಸಿದೆ.ಮುಂದೆಅದೇ ಶಿವಾಜಿರವರು ಕತೆಯ ಹಕ್ಕುಗಳನ್ನು ಎರಡು ಲಕ್ಷಕ್ಕೆತೆಗೆದುಕೊಂಡರೆ, ಹಿಂದಿಗೆ ನಾಲ್ಕು ಲಕ್ಷಕ್ಕೆ ಮಾರಾಟವಾಯಿತು. ಮೂರನೇ ದಿವಸ  ಶೂಟಿಂಗ್ ಮಾಡುತ್ತಿರುವಾಗ, ಕೆ.ಸಿ.ಎನ್.ಗೌಡ ಸೆಟ್‌ಗೆ ಆಗಮಿಸಿ, ಇದನ್ನು ನಿಲ್ಲಿಸಿ ಕಲರ್‌ದಲ್ಲಿ ಮಾಡೋಣ, ಎಷ್ಟು ಖರ್ಚುಆದರೂ ಪರವಾಗಿಲ್ಲವೆಂದು ಹೇಳಿದ್ದರು. ಅಂತಿಮವಾಗಿಅಣ್ಣಾವ್ರರ ಮಧ್ಯಸ್ತಿಕೆಯಿಂದ ಕಪ್ಪುಬಿಳುಪುದಲ್ಲಿ ತಯಾರಾಯಿತು.ಸಿನಿಮಾ ಪೂರ್ತಿಅವರು ಸೂಟ್‌ದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಚಿತ್ರದ ಸಕ್ಸಸ್‌ಗೆ ಅಭಿಮಾನಿದೇವರುಕಾರಣ.ಅಣ್ಣಾವ್ರುಎರಡು ವಿಷಯಗಳಿಗೆ ಮನಸ್ಸಿನಲ್ಲಿ ಪೂಜೆ ಮಾಡುತ್ತಿದ್ದರು.ಒಂದೆನಯದಾಗಿ ಅಭಿಮಾನಿಗಳಲ್ಲಿ ದೇವರನ್ನುಕಾಣುತ್ತಿದ್ದರು.ಎರಡನೆಯದಾಗಿಅನ್ನದಾತ ನಿರ್ಮಾಪಕರು.ಕೊನೆಯವರೆಗೂಇದನ್ನು ಪಾಲಿಸಿಕೊಂಡು, ಯಾರಿಗೂ ನೋವುಂಟುಮಾಡಿರಲಿಲ್ಲ. ಇವತ್ತುಅವರ ಹೆಸರಿನಲ್ಲಿ ನಾವೆಲ್ಲರೂ ನಿಂತಿದ್ದೇವೆ. ಅದರಿಂದಲೇಡಾ.ರಾಜ್‌ಎಂದೆಂದಿಗೂಅಮರ,ಅಜರಾಮರ, ಅನಂತ, ಅನಂತಾನಂತಎಂದರು.

ತಂದೆಯ ಬಯಕೆಯಂತೆಚಿತ್ರವನ್ನುಎರಡುಕೋಟಿ ವೆಚ್ಚದೊಂದಿಗೆ ಬಣ್ಣದಲ್ಲಿ ಮರುಸೃಷ್ಟಿ ಮಾಡಿಸಿ, ಬಿಡುಗಡೆ ಮಾಡಲಾಗಿ, ಅದುಕೂಡ ಬಂಡವಾಳ ವಾಪಸ್ಸುತಂದುಕೊಟ್ಟಿತುಎನ್ನುತ್ತಾರೆ ಕೆ.ಸಿ.ಎನ್.ಮೋಹನ್.

 

Copyright@2018 Chitralahari | All Rights Reserved. Photo Journalist K.S. Mokshendra,