ಸುದೀಪ್ @ ೨೫
‘ತಾಯವ್ವ’ ಚಿತ್ರದ ಮೂಲಕ ಬಣ್ಣ ಹಚ್ಚಿದ ಸುದೀಪ್ಇಂದುದೇಶ,ವಿದೇಶಗಳಲ್ಲಿ ಹೆಸರು, ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರ ಸುದೀರ್ಘ ಪಯಣಕ್ಕೆಇಪ್ಪತ್ತೈದು ವರ್ಷತುಂಬಿದೆ.ಮೊನ್ನೆ ‘ವಿಕ್ರಾಂತ್ರೋಣ’ ಚಿತ್ರದಟೈಟಲ್ ಲೋಗೋ ಬಿಡುಗಡೆಕಾರ್ಯಕ್ರಮವುವಿಶ್ವದಅತೀಎತ್ತರದಕಟ್ಟಡ ಬುರ್ಜ್ಖಲೀಫಾದಲ್ಲಿಅದ್ದೂರಿಯಾಗಿ ನಡೆದಿದ್ದು, ದಾಖಲೆ ಸೃಷ್ಟಿಸಿತು.ಇದಕ್ಕೂ ಮುನ್ನದಿನ ಲೈವ್ದಲ್ಲಿ ಮಾದ್ಯಮದವರೊಂದಿಗೆ ಮಾತನಾಡುತ್ತಾತಾನು ಬೆಳದು ಬಂದದಾರಿಯ ನೆನಪುಗಳನ್ನು ಹರಿಬಿಟ್ಟರು.ಅವರಾಡಿದ ಮಾತುಗಳು ಅಕ್ಷರರೂಪದಲ್ಲಿತಮ್ಮ ಮುಂದೆ ಬಿತ್ತರಿಸಲಾಗುತ್ತಿದೆ.
##ಇಷ್ಟು ವರ್ಷದ ಪಯಣವನ್ನುರಿವೈಂಡ್ ಮಾಡಿ ನೋಡಿದಾಗಎಲ್ಲವು ಮೊನ್ನೆ ನಡೆದಂತಿದೆ. ಮೊದಲು ಬಣ್ಣ ಹಚ್ಚಿದಗುರುಇವತ್ತು ನನಗೆ ಮೇಕಪ್ ಮಾಡುತ್ತಿದ್ದಾರೆ.‘ಹುಚ್ಚ’ ಸಿನಿಮಾ ಪ್ರಾರಂಭದಲ್ಲಿ ಗಳಿಕೆ ಕಂಡುಬಂತು. ಮುಂದೆಅದರಯಶಸ್ಸುಎಲ್ಲಿಗೋಕರೆದುಕೊಂಡು ಹೋಯಿತು. ಅಂತಹಸುಂದರಕ್ಷಣ ಹತ್ತು ಸಾವಿರ ಬುರ್ಜ್ಖಲೀಫ ನೀಡಿದರೂ ಸಿಗುವುದಿಲ್ಲ.
## ಅಪ್ಪನ ಆಸ್ತಿ ಮಾರಿ ‘ಮೈ ಆಟೋಗ್ರಾಫ್’ ನಿರ್ದೇಶನ, ನಿರ್ಮಾಣ ಮಾಡಿದೆ. ಬಿಡುಗಡೆ ದಿನ ದುಗಡದಲ್ಲಿರುವುದನ್ನುಕಂಡ ಪತ್ನಿ ಪ್ರಿಯಾ ಒಳ್ಳೆ ಸಿನಿಮಾ ಮಾಡಿದ್ದೀರಾ.ನಾವು ಎಲ್ಲಿಯೂ ಹೋಗಬೇಕಿಲ್ಲವೆಂದುಧೈರ್ಯ ತುಂಬಿದಳು.ಅದರಿಂದ ನನ್ನಆಟೋಗ್ರಾಫ್ಎತ್ತರಕ್ಕೆ ಬಂದು ನಿಂತುಕೊಂಡಿತು.
## ಸಣ್ಣದೊಂದುಕಟ್ಔಟ್ ಬಂದರೆ ಸಾಕು ಅಂದುಕೊಂಡಿದ್ದೆ.ಅಭಿಮಾನಿ ಬಳಗ ಶುರುವಾಗಿ ಬೃಹದಕಾರದ ಪರಿವರ್ತನೆಯಾಯಿತು.ಮತ್ತಷ್ಟು ಶ್ರಮ ಹಾಕಲು ಮನಸ್ಸು ಮಾಡಿದ್ದೆ, ಪರಭಾಷೆಗಳಿಂದ ಅವಕಾಶಗಳು ಒದಗಿಬಂದವು.ನಿರ್ದೇಶಕ ರಾಜಮೌಳಿ ಅವರನ್ನುಖಂಡಿತ ನೆನಪಿಸಲೇ ಬೇಕು.
## ‘ವಾಲಿ’ಯಲ್ಲಿ ಖಳನಾಯಕ, ‘ಸ್ವಾತಿಮುತ್ತು’ದಲ್ಲಿ ವೃದ್ದ, ಹೀಗೆ ತರಹವಾರಿ ಪಾತ್ರಗಳು ಅರಸಿಬಂದವು. ಸಿನಿಮಾ, ವೈಯಕ್ತಿಕ ವಿಚಾರವಾಗಲಿ ಯಾವುದನ್ನು ಪ್ಲಾನ್ ಮಾಡಿಕೊಂಡಿಲ್ಲ. ಇತ್ತೀಚಿನ ಬೆಳವಣಿಗೆಯಿಂದ ಚಿತ್ರದ ಬಗ್ಗೆ ಪ್ಲಾನಿಂಗ್ ನಡೆಯುತ್ತಿದೆ. ‘ವಿಕ್ರಾಂತ್ರೋಣ’ ಚಿತ್ರವುಚೆನ್ನಾಗಿ ಮೂಡಿಬರಲು ನಿರ್ಮಾಪಕಜಾಕ್ಮಂಜುಕಾರಣರಾಗಿರುತ್ತಾರೆ.