ಸಾಹಿತ್ಯ ದಲ್ಲಿ ಕಾವ್ಯ ಇದ್ದಂತೆ ಕಿರುಚಿತ್ರ
ಪ್ರಗುಣಿ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕ ಪಿ. ಶೇಷಾದ್ರಿ ಅಭಿಪ್ರಾಯ
ನಾಗೇಂದ್ರ ಶಾ, ಬಿಂಬಶ್ರೀ ಅತ್ಯುತ್ತಮ ನಟ-ನಟಿ
..
ಪ್ರಗುಣಿ ವೆಂ ಚರ್ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ವರ್ಣರಂಜಿತವಾಗಿ ನಡೆಯಿತು. ನಗರದ ಚೌಡಯ್ಯ ಮೆಮೋರಿಯಲ್ ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಶಸ್ತಿ ವಿತರಣೆ ಮೂಲಕ ವಿಭಿನ್ನವಾಗಿ ಕಂಡಿತು.ಪ್ರಗುಣಿ ಒಟಿಟಿ ವೆಂಚರ್ ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಗೆ ಸಾಕಷ್ಟು ಕಿರುಚಿತ್ರ ಗಳು ಬಂದಿದ್ದವು.ಅದರಲ್ಲಿ ಪ್ರೇಕ್ಷಕರ ಆಯ್ಕೆಯಾಗಿ ಆಕಾಂಕ್ಷ. ಕಿರುಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಅತ್ಯುತ್ತಮ ನಟಿಯಾಗಿ ಬಿಂಬಶ್ರೀ ಅವರು ಪ್ರಶಸ್ತಿ ಸ್ವೀಕರಿಸಿದರೆ, ನಟ ನಾಗೇಂದ್ರ ಶಾ ಪ್ರಗುಣಿ ಅತ್ಯುತ್ತಮ ನಟ ಪ್ರಶಸ್ತಿ ಗೆ ಪಾತ್ರರಾದರು. ನಿರ್ದೇಶಕ ಟಿ. ಎನ್. ಸೀತಾರಾಂ ಸಮಾರಂಭ ಉದ್ಘಾಟಿಸಿದರೆ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮತ್ತು ಕನ್ನಡ ಪ್ರಭ ಪುರವಣಿ ಸಂಪಾದಕ ಜೋಗಿ ಅವರು ಪ್ರಶಸ್ತಿ ವಿಜೇತ ರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಪ್ರಶಸ್ತಿ ವಿತರಣೆಗೂ ಮುನ್ನ ಸಮಾರಂಭವನ್ಜು ಉದ್ದೇಶಿಸಿ ಮಾತನಾಡಿದ ಕನ್ನಡದ ಹೆಸರಾಂತ ನಿರ್ದೇಶಕ ಪಿ. ಶೇಷಾದ್ರಿ, ಸಿನಿಮಾ ಕೂಡ ಸಾಹಿತ್ಯವೇ. ಸಾಹಿತ್ಯದಲ್ಲಿ ಹೇಗೆ ಕಾದಂಬರಿ, ಕಾವ್ಯ, ಗದ್ಯ ಅಂತೆಲ್ಲ ವಿಭಾಗಗಳಿವೆಯೋ ಹಾಗೆಯೇ ಸಿನಿಮಾ ಕೂಡ. ನನ್ನ ಪ್ರಕಾರ ಕಿರುಚಿತ್ರ ಅಂದರೆ ಕಾವ್ಯ ಇದ್ದ ಹಾಗೆ. ಕಡಿಮೆ ಅವದಿಯ ಕಾವ್ಯದಲ್ಲಿ ಹೇಗೆ ವಿಶಾಲ ಅರ್ಥವನ್ನು ಕಟ್ಟಿಕೊಡಲು ಸಾಧ್ಯವೋ ಹಾಗೆಯೇ ಕಿರುಚಿತ್ರ ವೊಂದು ಕಡಿಮೆ ಅವದಿಯಲ್ಲಿ ತನ್ನ ಕತೆಯನ್ನು ಜನರಿಗೆ ಮನಸಿಗೆ ನಾಟುವಂತೆ ಕಟ್ಟಿಕೊಡಬಲ್ಲದು ಎಂದು ಅಲಿಪ್ರಾಯ ಪಟ್ಟರು.
ಸಮಾರಂಭ ಉದ್ಘಾಟಿಸಿದ ಹಿರಿಯ ನಿರ್ದೇಶಕ ಟಿ. ಎನ್. ಸೀತಾರಾಂ ಕೂಡ ಇದೇ ಅಭಿಪ್ರಾಯ ಪಟ್ಟರು. ಸಾಹಿತ್ಯದೊಳಗಿನ ಕಾವ್ಯದ ರೂಪವೇ ಕಿರುಚಿತ್ರ ಎಂದರು. ಕಿರುಚಿತ್ರ ಸ್ಪರ್ಧೆಯ ತೀರ್ಪು ಗಾರರೂ ಆಗಿದ್ದ ಸಾಹಿತಿ ಹಾಗೂ ಪತ್ರಕರ್ತ ಜೋಗಿ ಮಾತನಾಡಿ, ಕಿರುಚಿತ್ರ ಅಂದ್ರೆ, ಕಡಿಮೆ ಸಮಯದಲ್ಲಿ ಹೆಚ್ಚು ವಿಷಯ ಹೇಳುವ ಪರಿ. ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಅದರ ವೇಗ ಕೂಡ ಅಷ್ಟೇ ವೇಗವಾಗಿರಬೇಕು. ಆದರೆ ಇಲ್ಲಿ ನಾನಿಗೆ ಗೊತ್ತಾಗಿದ್ದು ಬಹಳಷ್ಟು ಚಿತ್ರಗಳಲ್ಲಿ ಕತೆಯೇ ಇರಲಿಲ್ಲ.ಕತೆ ಕೂಡಮುಖ್ಯ ಎನ್ನುವುದು ಕಿರುಚಿತ್ರ ನಿರ್ದೇಶಿಸಿರುವವರು ಅರ್ಥಮಾಡಿಕೊಳ್ಳಬೇಕಿದೆ. ಯಾಕಂದ್ರೆ, ಕಿರುಚಿತ್ರ ನಿರ್ದೇಶನ ದೊಡ್ಡ ಚಿತ್ರಗಳ ನಿರ್ದೆಶನದ ಮೊದಲ ಮೆಟ್ಟಿಲು ಎಂದು ಅಲ್ಲಿ ನೆರೆದಿದ್ದ ಕಿರುಚಿತ್ರ ನಿರ್ದೇಶಕರು, ನಿರ್ಮಾಪಕರಿಗೆ ಕಿವಿಮಾತು ಹೇಳಿದರು.
ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಮಾತನಾಡಿ, ಕಲೆಮತ್ತು ವಾಣಿಜ್ಯದ ನಡುವೆ ಅಂತರ ಮುಖ್ಯ. ಆದರೆ ಇತ್ತೀಚೆಗೆ ಅವರೆಡು ಬೆಸೆದುಕೊಂಡ ಪರಿಣಾಮ ಕಲಾಕ್ಷೇತ್ರದಲ್ಲಿನ ಸಣ್ಣಪುಟ್ಟವರನ್ನು ಪ್ರಶಸ್ತಿಗೆ ಗುರುತಿಸಲಾಗದಂತೆ ಆಗಿದೆ ಎಂದರು. ಸಂಗೀತ ನಿರ್ದೆಶಕ ವಿ.ಮನೋಹರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಹಾಡು, ನೃತ್ಯಗಳ ಮೂಲಕ ಪ್ರಗುಣಿ ಪ್ರಶಸ್ತಿ ಪ್ರದಾನಸಮಾರಂಭ ವರ್ಣರಂಜಿತವಾಗಿ ನಡೆಯಿತು.
...