Nord Shiva.Album Song.

Tuesday, February 02, 2021

348

 

"ನೋಡು ಶಿವ" ಅದ್ದೂರಿ ಆಲ್ಬಂ ಸಾಂಗ್.

ಸುಮಿತ್ ಹಾಗೂ ಮೇಘ ಶೆಟ್ಟಿ ಜೊತೆ ಹೆಜ್ಜೆಹಾಕಿದ ಚಂದನ್ ಶೆಟ್ಟಿ.

 

ಕನ್ನಡದಲ್ಲಿ ಸಾಕಷ್ಟು ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಆದರೆ ಅಪಾರ ವೆಚ್ಚ ಹಾಗೂ ಅದ್ದೂರಿ ತಾರಾಗಣದಲ್ಲಿ "ನೋಡು ಶಿವ" ಆಲ್ಬಂ ಸಾಂಗ್ ನಿರ್ಮಾಣವಾಗಿದ್ದು, ಸುಮಿತ್ ಎಂ.ಕೆ ಹಾಗೂ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ.  ಅತಿಥಿ ಪಾತ್ರದಲ್ಲಿ ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಈ ಆಲ್ಬಂ ನಲ್ಲಿ ನಟಿಸಿರುವ ಸುಮಿತ್ ಎಂ.ಕೆ ಈ ಹಿಂದೆ "ಪರಾರಿ" ಚಿತ್ರ ನಿರ್ಮಿಸಿದ್ದರು.‌

ಸುಮಿತ್ ಅವರೆ ಗೀತ ರಚನೆ ಮಾಡಿದ್ದು,  ಚಂದನ್ ಶೆಟ್ಟಿ ಸಂಗೀತ ನೀಡಿ, ಇಂಪಾಗಿ ಹಾಡಿದ್ದಾರೆ.

ಸುಮಾರು ‌‌‍60 ನೃತ್ಯ ಕಲಾವಿದರು ಹಾಗೂ 150ಕ್ಕೂ ಅಧಿಕ ಸಹಕಲಾವಿದರು ಈ‌ ಆಲ್ಬಂ ‌ಸಾಂಗ್ ನಲ್ಲಿ ಅಭಿನಯಿಸಿದ್ದು,‌ ಕನ್ನಡದ ಮಟ್ಟಿಗೆ ಇಷ್ಟು ಅದ್ದೂರಿಯಾಗಿ‌ ಮೂಡಿಬಂದಿರುವ ಮೊದಲ‌‌ ಆಲ್ಬಂ ಸಾಂಗ್ ಇದು ಅಂದರೆ ತಪ್ಪಾಗಲಾರದು.

ಇತ್ತೀಚೆಗೆ ಬನ್ನೇರುಘಟ್ಟ ‌ರಸ್ತೆಯ ಎ.ಎಂ.ಸಿ ಇಂಜನಿಯರಿಂಗ್ ಕಾಲೇಜ್ ಆವರಣದಲ್ಲಿ ಈ ಹಾಡಿನ‌ ಚಿತ್ರೀಕರಣ ನಡೆದಿದೆ.

ಎಂ.ಕೆ‌ ಆರ್ಟ್ಸ್ ಲಾಂಛನದಲ್ಲಿ ಮೋನಿಕಾ‌ ಕಲ್ಲುರಿ ಅವರು  ಈ ಆಲ್ಬಂ ಸಾಂಗ್ ನಿರ್ಮಾಣ‌ ಮಾಡಿದ್ದು, ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ.‌ ಹೆಬ್ಬುಲಿ ಖ್ಯಾತಿಯ ಕರುಣಾಕರ್ ಅವರ ಛಾಯಾಗ್ರಹಣ ಈ ಆಲ್ಬಂ ಸಾಂಗ್ ನ ಅಂದ ಮತ್ತಷ್ಟು ಹೆಚ್ಚಿಸಿದೆ.

ಮೂರುವರೆ ನಿಮಿಷಗಳ‌ ಅವಧಿಯ ಈ ಆಲ್ಬಂ ಸಾಂಗ್ ಇದೇ ತಿಂಗಳಲ್ಲಿ ‌ಆನಂದ್ ಆಡಿಯೋ‌ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,