Karnataka Chalanachitra Academy.

Wednesday, February 03, 2021

284

ವಾರ್ತಾ ಇಲಾಖೆ ಆಯುಕ್ತ ಡಾ ಪಿ ಎಸ್ ಹರ್ಷ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೇಟಿ

ಕರ್ನಾಟಕದ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಆಯುಕ್ತರಾದ ಡಾ ಪಿ ಎಸ್ ಹರ್ಷ ಅವರು ಬುದವಾರ ಸಂಜೆ ಕರ್ನಾಟಕ ಚನಲಚಿತ್ರ ಅಕಾಡೆಮಿ ಕಚೇರಿಗೆ ಬೇಟಿ ನೀಡಿ 13ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವ ಆಯೋಜನೆ ಬಗ್ಗೆ ಮಾಹಿತಿ ಪಡೆದು ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕ ಸರ್ಕಾರದ ವಾರ್ತ ಮಂತ್ರಿ ಶ್ರೀ ಸಿ ಸಿ ಪಾಟೀಲ್ ಅವರು ಕೆಲಸದ ಒತ್ತಡದಿಂದ ಹಾಜರಾಗದ ಕಾರಣ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಾರ್ತ ಇಲಾಖೆ ಆಯುಕ್ತ ಡಾ ಪಿ ಎಸ್ ಎಸ್ ಹರ್ಷ ಅವರು ಏಪ್ರಿಲ್ ಮೊದಲ ವಾರದಲ್ಲಿ ಸಜ್ಜಾಗಿರುವ 13 ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾನಿಕ್ ಅವರಿಗೆ ಅಶ್ವಮೇದ ಯಾಗ ರೀತಿ ಉತ್ಸಾಹ ಇಂದ ಇದ್ದಾರೆ. ವಾರ್ ಫೂಟಿಂಗ್ ಅಲ್ಲಿ ಜಾಗತಿಕ ಮಟ್ಟದಲ್ಲಿ ಪಸರಿಸುವತೆ ಯೋಜನೆ ಹಾಕಿಕೊಂಡಿರುವುದಕ್ಕೆ ಶ್ಲಾಘಿಸುತ್ತಾ ವಾರ್ತಾ ಇಲಾಖೆ ಆಯುಕ್ತ ಡಾ ಪಿ ಎಸ್ ಹರ್ಷ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಹ ಆಸ್ಥೆಯಿಂದ ಈ ಕಾರ್ಯಕ್ರಮಕ್ಕೆ ಉತ್ಸಾಹ ತೋರಿದ್ದಾರೆ. ಕೋರೋನಾ ಹಿನ್ನಲೆಯಲ್ಲಿ ಈ 13 ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಸಿನಿಮಾ ಕ್ಷೇತ್ರಕ್ಕೆ ಒಂದು ಪುನರ್ಜೀವ ನೀಡಿದಂತೆ ಆಗುತ್ತದೆ.ಇದು ಚಿತ್ರೋದ್ರ್ಯಮದ ಹಬ್ಬ ಸಹ ಆಗಿದೆ. ಇದು ಭರವಸೆಯ ಬೆಳಕಾಗಿ ನಾಂದಿ ಹಾಡುವುದಿದೆ. ಡಾ ರಾಜ್, ಡಾ ವಿಷ್ಣು, ಡಾ ಅಂಬರೀಶ್ ಅಂತಹ ವ್ಯಕ್ತಿಗಳು ಸಿನಿಮಾ ಕೊಡುಗೆ ಅಪಾರ ಎಂದು ಸ್ಮರಿಸಿದ ವಾರ್ತ ಇಲಾಖೆ ಆಯುಕ್ತರು ಈ 13ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಶೇಷ ಶಕ್ತಿ ದೊರಕಲಿ. ರಾಜ್ಯ ಮಟ್ಟದ ಈ ಸಿನಿಮಾ ಹಬ್ಬ ಜಾಗತಿಕ ಮಟ್ಟದಲ್ಲಿ ಇಂತಹ ವಿಭಿನ್ನ ಕಾಲಘಟ್ಟದಲ್ಲಿ ಹೆಮ್ಮೆ ಪಡುವಂತೆ ಆಗಲಿ ಎಂದು ಹರಸಿದರು.

 ವಾರ್ತ ಇಲಾಖೆಯ ಆಯುಕ್ತರಾದವರು ಇದೆ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಗಮಿಸಿ ಉತ್ಸಾಹದಿಂದ ಸಹಕರಿಸುವುದನ್ನು ಗಮನಿಸಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಶ್ರೀ ಸುನೀಲ್ ಪುರಾಣಿಕ್ ಈ ಸಂದರ್ಭದಲ್ಲಿ ಮಾತನಾಡುತ್ತಾ ಈ 13ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಿತ್ರೋತ್ಸವ ಏಪ್ರಿಲ್ ಮೊದಲ ವಾರದಲ್ಲಿ ಎಂಟು ದಿವಸ ನಡೆಯಲಿದೆ. ಈಗಾಗಲೇ ಏಶಿಯನ್, ಭಾರತೀಯ ಹಾಗೂ ಕನ್ನಡ ಚಿತ್ರಗಳನ್ನು ಸ್ವೀಕರಿಸಲಾಗುತ್ತಿದೆ. ಫೆಬ್ರವರಿ 8 ರಂದು ಸ್ಪರ್ಧೆಗೆ ಸಲ್ಲಿಸುವುದಕ್ಕೆ ಕಡೆಯ ದಿವಸ. ಈ ಭಾರಿ 15 ವಿಶೇಷ ಬಗೆ 13 ನೇ ಚಲನಚಿತ್ರೋತ್ಸವ ನಡೆಯಲಿದೆ. ಅದರಲ್ಲಿ ಡಾ ಎಸ್ ಪಿ ಬಿ ನೆನಪು, ಡಾ ಸತ್ಯಜಿತ್ ರೇ 100 ನೇ ವರ್ಷದ ನೆನಪು ಸಹ ಒಳಗೊಂಡಿದೆ. ಕಳೆದ ವರ್ಷ ನಡೆದ ಚಿತ್ರೋತ್ಸವಕ್ಕೆ ನಾವೇ ಬೆಂಚ್ ಮಾರ್ಕ್ ಹಾಕಿದ್ದು ಅದನ್ನು ಹೆಚ್ಚಿನ  ಪ್ರಗತಿಯತ್ತ ತೆಗೆದುಕೊಂಡು ಹೋಗಬೇಕಿದೆ.

ಮುಂದಿನ ದಿವಸಗಳಲ್ಲಿ ಚಿತ್ರೋತ್ಸವವನ್ನು ಶಿವಮೊಗ್ಗ, ಮಂಗಳೂರು ಹಾಗೂ ಮಡಿಕೇರಿಯಲ್ಲಿ ಕನ್ನಡ, ತುಳು, ಕೊಡವ, ಕೊಂಕಣಿ, ಬ್ಯಾರಿ ಭಾಷೆಯ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಮಾಡುವ ಚಿಂತನೆ ಇದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಇಂದ ಚಲನಚಿತ್ರ ಭಂಡಾರ, ಪೂಣೆ ಫಿಲ್ಮ್ ಇನ್ಸ್ಟಿಟ್ಯೂಟ್ ರೀತಿಯಲ್ಲಿ ಸಿನೆಮಾ ತರಬೇತಿ, ಕಾರ್ಯಾಗಾರ, ಮ್ಯೂಸಿಯಮ್ ಸಹ ಸ್ಥಾಪನೆ ಮಾಡುವ ಯೋಚನೆಯನ್ನು ವ್ಯಕ್ತ ಮಾಡಿದರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಶ್ರೀ ಸುನೀಲ್ ಪುರಾಣಿಕ್.

ಇದೆ ಸಮಯದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಚಿತ್ರಮಂದಿರಗಳಲ್ಲಿ 100 ರಷ್ಟು ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿಯನ್ನು ಸಹ ಸಲ್ಲಿಸಲಾಯಿತು.

ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹಿಮಂತ್ ರಾಜ್ ಅಕಾಡೆಮಿ ಸದಸ್ಯರುಗಳಾದ ಶ್ರೀಮತಿ ತುಂಗಾ ರೇಣುಕ, ಪಾಲ್ ಸುದರ್ಶನ್, ಅಶೋಕ್ ಕಶ್ಯಪ್, ಉಮೇಶ್ ನಾಯಕ್ ಹಾಗೂ ಸೋನು ಗೌಡ ಅವರನ್ನು ವಾರ್ತ ಇಲಾಖೆಯ ಆಯುಕ್ತ ಡಾ ಹರ್ಷ ಅವರಿಗೆ ಪರಿಚಯ ಮಾಡಿಕೊಟ್ಟರು.

ಈ ಸಭೆಯಲ್ಲಿ ಮುಖ್ಯ ಸಮನ್ವಯ ಅಧಿಕಾರಿ ಶ್ರೀ ಬಿ ಎಸ್ ಲಿಂಗದೇವರು ಹಾಗೂ ಶ್ರೀ ಎನ್ ವಿಧ್ಯಾಶಂಕರ್ ಕಲಾತ್ಮಕ ನಿರ್ದೇಶಕ ಸಹ ಉಪಸ್ಥಿತರಿದ್ದರು.

 

 

Copyright@2018 Chitralahari | All Rights Reserved. Photo Journalist K.S. Mokshendra,