Public Toilet.Short Film Press Meet.

Saturday, February 06, 2021

273

ಅಸಹಾಯಕ ಮಹಿಳೆಯ ಕಷ್ಟಕಾರ್ಪಣ್ಯಗಳು

ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಮಹಿಳೆಯರು ಏನೆಲ್ಲಾ ಅನಾಹುತಗಳಿಗೆ ತುತ್ತಾಗುತ್ತಾರೆ. ಪ್ರಸಕ್ತ ಪುರುಷ ಸಮಾಜದಲ್ಲಿ ಹೆಣ್ಣಿನ ಶೋಷಣೆ, ಅವರನ್ನು ಹೇಗೆ ದುರ್ಬಳಿಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಮನಮುಟ್ಟುವಂತೆ ‘ಪಬ್ಲಿಕ್‌ಟಾಯ್ಲೆಟ್’ ಎನ್ನುವಕಿರುಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ. ನಾಗೇಶ್‌ಹೆಬ್ಬೂರ್‌ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ. ಇವರ ಪ್ರಯತ್ನಕ್ಕೆಟೀಮ್ ವೇಣುಗೋಪಾಲ್ ಹಾಗೂ ಟೀಮ್‌ಜಾನವಿ ಕ್ಯಾಪ್ಚರ್ ಬಂಡವಾಳ ಹೂಡಿದ್ದಾರೆ. 

ಹರ್ಷವರ್ಧನ್‌ರಾಜ್ ಸಂಗೀತದಲ್ಲಿಅಭಿಷೇಕ್.ಜಿ.ಕಾಸರಗೂಡುಛಾಯಾಗ್ರಹಣವಿದೆ. ತಾರಗಣದಲ್ಲಿ ಸಂಪತ್‌ಮೈತ್ರಿಯಾ, ಶ್ವೇತಾಶ್ರೀನಿವಾಸ್, ಮಹಂತೇಶ್‌ಹಿರೇಮಠ್, ಕಾರ್ತಿಸೌದರಂ, ನಾಗರಾಜ್‌ಮಂಡ್ಯ, ಶ್ರೀಕಾಂತ್.ಜಿ.ಕಷ್ಯಪ್ ಮುಂತಾದವರು ನಟಿಸಿದ್ದಾರೆ.

ಮೊನ್ನೆಯಷ್ಟೇಗಣ್ಯರಿಗೆಂದು ವಿಶೇಷ ಪ್ರದರ್ಶನಏರ್ಪಾಟು ಮಾಡಲಾಗಿತ್ತು.ಸೈಬರ್‌ಕ್ರೈಂಇನ್ಸ್‌ಪೆಕ್ಟರ್‌ರೇಣುಕಾಜಯರಾಂ ಮಾತನಾಡಿಇದೊಂದು ಸಣ್ಣತುಣುಕಷ್ಟೇ.ಈಗ ಎಲ್ಲರ ಕೈಲೂ ಸ್ಮಾರ್ಟ್ ಫೋನ್‌ಇದೆ.ಶೇಕಡ ೯೫ರಷ್ಟು ಸೈಬರ್ ಅಪರಾಧಗಳೇ ನಡೆಯುತ್ತಿದೆ.ಇದನ್ನು ಮಟ್ಟ ಹಾಕಲು ಇಲಾಖೆಯು ಶ್ರಮಿಸುತ್ತಿದೆಎಂದರು.ಮನುಷ್ಯತ್ವದಜಾನರ್ ಸಿನಿಮಾಎನ್ನಬಹುದು.ರಸ್ತೆಯಲ್ಲಿಅಪಘಾತವಾದಾಗ ಮಾನವಿಯತೆ ಮರೆತುಕ್ಯಾಮಾರಆನ್ ಮಾಡಿರೆಕಾರ್ಡ್ ಮಾಡುವುದರಲ್ಲೆತಲ್ಲೀನರಾಗಿರುತ್ತಾರೆಂದು ಸಂಭಾಷಣೆಗಾರ ಮಾಸ್ತಿ ವಿಷಾದ ವ್ಯಕ್ತಪಡಿಸಿದರು.ಮಜಾಟಾಕೀಸ್‌ನ ಶರಣಯ್ಯ, ಕನ್ನಡಪರ ಹೋರಾಟಗಾರರೂಪೇಶ್.ಜಿ.ರಾಜಣ್ಣ, ನಟ ಸೂರಜ್ ಮುಂತಾದವರು ಹಾಜರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,