ವಿಜ್ಘಾನಿಯ ವಿಜ್ಘಾನದಕತೆ
ವೃತ್ತಿಯಲ್ಲಿ ವಿಜ್ಘಾನಿ, ಆದರೂ ಬಣ್ಣದ ಲೋಕದ ಸೆಳೆತದಿಂದ ಅಂಶಕಾಲಿಕ ಸಮಯದಲ್ಲಿ ‘ರಿವೈಂಡ್’ ಚಿತ್ರಕ್ಕೆರಚನೆ, ನಿರ್ದೇಶನ, ಪತ್ರತರ್ಕನ ಪಾತ್ರದಲ್ಲಿ ನಾಯಕಜೊತೆಗೆ ವಿನೋಧ್ ಹೆಸರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಪ್ರಾರಂಭದಿಂದ ಶುರುಅಂತಇಂಗ್ಲೀಷ್ನಲ್ಲಿಅಡಿಬರಹವಿದೆ.
ಭೂತಕಾಲ-ವರ್ತಮಾನಕಾಲದ ನಡುವಿನ ಕತೆಯಲ್ಲಿ ಭಾವನೆಗಳು, ಪ್ರೀತಿ, ಸಂಬಂದಗಳ ಮೌಲ್ಯಗಳು ಇವುಗಳ ಜೊತೆಗೆ ವಿಜ್ಘಾನ ಸೇರಿದಾಗಏನಾಗುತ್ತದೆಎಂಬುದನ್ನುಕಾಲ್ಪನಿಕವಾಗಿ ಹೇಳಲು ಹೂರಟಿದ್ದಾರೆ.ಪ್ರತಿಯೊಬ್ಬರಿಗೂಅವರ ಬದುಕಿನಲ್ಲಿಒಂದುಘಟನೆ ನಡೆದಿರುತ್ತದೆ.ಬಹುಶ: ದೇವರುಅಂತಹಘಟನೆಯನ್ನು ಮರುಕಳಿಸಿದಾಗ ನಾವು ಏನು ಮಾಡುತ್ತೇವೆ. ಮತ್ತು ವರ್ತಮಾನದಲ್ಲಿಒಂದು ವಿಷಯವನ್ನುತೆಗೆದುಕೊಂಡುಅದನ್ನು ಹೇಗೆ ಬಗೆಹರಿಸಲಾಗುತ್ತದೆ. ಹೀಗೆ ಎರಡು ಕಾಲವನ್ನು ಮಿಶ್ರಣ ಮಾಡಿರುವ ಸನ್ನಿವೇಶಗಳು ಬರಲಿದೆ. ಯುರೋಪ್, ಫ್ಲಾಂಕ್ಫೋರ್ಟ್, ಬೆಂಗಳೂರು ಸುತ್ತಮುತ್ತಚಿತ್ರೀಕರಣ ನಡೆದಿದೆ.
ಚಂದನರಾಘವೇಂದ್ರ ಪತ್ನಿಯಾಗಿನಾಯಕಿ.ತಾರಬಳಗದಲ್ಲಿ ಸುಂದರರಾಜ್,ಧರ್ಮ, ಮಂಡ್ಯಾರವಿ,ಕಿರಣ್ಬಿರದಾರ್, ಸಂಪತ್ಕುಮಾರ್, ಆನಂದ್, ಸಂದೀಪ್ಮಲಾನಿ, ವಿಕಾಸ್ಗೌಡ ಮತ್ತುಚೈನಾದ ಖಳನಟ ಅಭಿನಯವಿದೆ. ಡಾ.ನಾಗೇಂದ್ರಪ್ರಸಾದ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಸಬೀಶ್ಸಾಲೋಮನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪ್ರೇಮ್, ಸಂಕಲನ ವಿನೋಧ್ಬಸವರಾಜ್, ನೃತ್ಯ ನಾಗಿ, ಸಾಹಸ ಸೆಲ್ವಂ, ಹಿನ್ನಲೆ ಶಬ್ದ ದರ್ರೆಲ್ಮಾಸ್ಕರೆನಾಸ್ಅವರದಾಗಿದೆ. ಪ್ರಚಾರದ ಸಲುವಾಗಿ ಮೊನ್ನೆಟೀಸರ್ನ್ನು ಮಾದ್ಯಮದವರಿಗೆತೋರಿಸಲಯಿತು.ಅಂದಹಾಗೆಚಿತ್ರವುಏಪ್ರಿಲ್ ೧೬ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.