ವಿಕ್ರಾಂತ್ರೋಣ ಮನರಂಜನೆಗಳ ವೈಭವ
೨೦೨೧ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ವಿಕ್ರಾಂತ್‌ರೋಣ’ ಸಿನಿಮಾದಕಾರ್ಯಕ್ರಮವುಕಳೆದವಾರ ವಿಶ್ವದಎತ್ತರದ ಬುರ್ಜ್‌ಖಲೀಫಾಕಟ್ಟಡದಲ್ಲಿ ಶೀರ್ಷಿಕೆ ಅನಾವರಣಗೊಂಡಿತ್ತು. ಭಾನುವಾರದಂದು ನಾಯಕ ಸುದೀಪ್‌ಚಿತ್ರರಂಗದಲ್ಲಿಇಪ್ಪತ್ತೈದು ವರ್ಷ ಪಯಣ ಮಾಡಿದ್ದರಿಂದ ಮಾದ್ಯಮ ಮಿತ್ರರಿಗೆ ಸಣ್ಣದೊಂದುಔತಣಕೂಟ ಏರ್ಪಡಿಸಿದ್ದರು. ೧೯೯೬ ರಿಂದ ಇಂದಿನವರೆಗಿನ ಬಣ್ಣದ ಬದುಕುನಲ್ಲಿ ಬೆಳೆದು ಬಂದದಾರಿಯನ್ನುರಿವೈಂಡ್ ಮಾಡಿಕೊಂಡುಒಂದಷ್ಟು ಪ್ರಶ್ನೆಗಳಿಗೆ ನಯವಾಗಿಉತ್ತರ ನೀಡಿದರು.ಹಾಗೆ ಚಿತ್ರದಕುರಿತಂತೆ ಕೆಲವೊಂದು ಮಾಹಿತಿಗಳನ್ನು ಬಹಿರಂಗ ಪಡಿಸಿದರು.ನೋಡುಗರನ್ನು ಖುಷಿ ಪಡಿಸಲು ೩ಡಿ ತಂತ್ರಜ್ಘಾನದಲ್ಲಿ ಬರುತ್ತಿದೆ.ಕೋವಿಡ್-೧೯ ಸಮಯದಲ್ಲಿ ನಿರ್ಮಾಪಕಜಾಕ್‌ಮಂಜುಧೈರ್ಯ ಮಾಡಿಚಿತ್ರೀಕರಣವನ್ನುರಾಮೋಜಿರಾವ್ ಸ್ಟುಡಿಯೋದಲ್ಲಿ ಶುರು ಮಾಡಿ ಯಶಸ್ವಿಯಾದರು.
ಚಿತ್ರವನ್ನು ವಿಂಗಡಣೆ ಮಾಡುವುದಾದರೆ ಶೇಕಡ ೫೦ ಜಾಕ್‌ಮಂಜು, ೩೦ ಪರ್ಸೆಂಟ್ ನಿರ್ದೇಶಕಅನೂಪ್‌ಭಂಡಾರಿ, ೧೦ತಂತ್ರಜ್ಘರು, ೮ ಕಲಾವಿದರು ಉಳಿದ ೨ ಪರ್ಸೆಂಟ್‌ನ್ನು ನಾನು ತೆಗೆದುಕೊಳ್ಳುತ್ತೇನೆಎಂದರು.ಕಲಾವಿದರುಗಳಾದ ನಿರೂಪ್‌ಭಂಡಾರಿ, ನೀತಾಅಶೋಕ್, ಸಂಗೀತ ಸಂಯೋಜಕಅಜನೀಶ್‌ಲೋಕನಾಥ್, ಸಂಕಲನಕಾರ ಆಶಿತ್‌ಬಾಬು ಮುಂತಾದವರು ಉಪಸ್ತಿತರಿದ್ದು ಸಂತಸವನ್ನು ಹಂಚಿಕೊಂಡರು.ಅಂದಿನ ಸುಂದರ ಸಮಾರಂಭಕೊನೆಯಲ್ಲಿ ಸುದೀಪ್‌ಕೇಕ್ ಕತ್ತರಿಸಿ ಎಲ್ಲರಿಗೂ ನೀಡಿದರು.ಇದಕ್ಕೂ ಮುನ್ನ ಪ್ರಾರಂಭದಲ್ಲಿ ಮೇಕಿಂಗ್‌ಆಫ್ ಮ್ಯೂಸಿಕ್, ತುಣುಕುಗಳು ಬಿತ್ತರಗೊಂಡಿತು.