ಶ್ಯಾಡೋರಾಂಗ್ರಿಲೀಸ್ ವಿನೋದ್ಪ್ರಭಾಕರ್ ಬೇಸರ
ನಿಜಕ್ಕೂ ಒಳ್ಳೆಯ ಸಿನಿಮಾ.ಆದರೆರಾಂಗ್‌ಟೈಮ್‌ದಲ್ಲಿ ಬಿಡುಗಡೆ ಮಾಡಿದ್ದರಿಂದಚಿತ್ರವುಜನರಿಗೆತಲುಪಲಿಲ್ಲ. ಹೀಗೆ ಬೇಸರ, ಕೋಪದ ಮಾತನ್ನು ವಿನೋದ್‌ಪ್ರಭಾಕರ್ ಹೊರಹಾಕಿದರು.ಅವರಅಭಿನಯದ ‘ಶ್ಯಾಡೋ’ ಶುಕ್ರವಾರದಂದು ಬಿಡುಗಡೆಗೊಂಡಿತ್ತು.ಇದರಕುರಿತಂತೆ ಮಾದ್ಯಮದ ಮುಂದೆ ಮಾತನಾಡುತ್ತಿದ್ದರು.ಕರೋನಕಾರಣದಿಂದ ವರ್ಷಕಾದಿದ್ದೇವೆ. ನಿರ್ಮಾಪಕರುಒಂದಷ್ಟು ಸಮಯ ಕಳೆದು ಬಿಡುಗಡೆ ಮಾಡಿದ್ದರೆ, ಖಂಡಿತಕಲೆಕ್ಷನ್‌ಚೆನ್ನಾಗಿಆಗುತ್ತಿತ್ತು.
ಈಗ ರಿಲೀಸ್ ಮಾಡುವುದು ಬೇಡ.ಪ್ರಮೋಷನ್ ಸರಿಯಾಗಿ ಮಾಡಿಲ್ಲ. ಆದರೂ ನನಗೆ ಒಂದು ಮಾತು ಹೇಳದೆ ಈ ಸಮಯದಲ್ಲಿನಿರ್ಣಯತೆಗೆದುಕೊಂಡಿದ್ದಾರೆ.ಇದರಿಂದ ನನ್ನ ಸಿನಿಮಾಕೆರಿಯರ್‌ನಲ್ಲಿ ಹಿನ್ನಡೆಯಾಗಿದೆ.ಸೋಲಿನ ಹೊಣೆಯನ್ನು ನಾನೇ ಹೊರಬೇಕಾಗುತ್ತದೆ.ಯಾರೋಒಬ್ಬರು ಈ ರೀತಿ ಮಾಡುವುದರಿಂದ ನನ್ನಂಥವನಿಗೆಕಪ್ಪು ಚುಕ್ಕೆ ಇಟ್ಟಂತೆಆಗಿದೆ.
ಸಿನಿಮಾಚಿತ್ರಮಂದಿರಕ್ಕೆ ಬರುವ ದಿನಾಂಕ ಕೊನೆ ಘಳಿಗೆಯಲ್ಲಿ ಗೊತ್ತಾಯಿತು.ಆ ಪರಿಸ್ಥಿತಿಯಲ್ಲಿ ಏನು ಮಾಡಲಿಕ್ಕೆ ಆಗಲಿಲ್ಲ. ಹಕ್ಕುಗಳು ಮೊದಲೇ ಸೇಲ್‌ಆಗಿದ್ದರಿಂದಅವರು ಸೇಫ್‌ಆಗಿದ್ದಾರೆ.ಮಹಾಮಾರಿಯಿಂದಜನರ ಬಳಿ ಹಣವಿಲ್ಲ. ಈ ಪರಿಸ್ಥಿತಿಯಲ್ಲಿ ಹೇಗೆ ಟಿಕೆಟ್‌ಖರೀದಿ ಮಾಡುತ್ತಾರೆ.ಇನ್ನು ಕೆಲವು ಸಮಯಕಾದಿದ್ದರೆಎಲ್ಲವು ಸುಲಭವಾಗುತ್ತಿತ್ತುಎಂದು ಮರಿಟೈಗರ್ ಬೇಸರದಿಂದ ಹೇಳುತ್ತಾ ಹೋದರು. ನಿರ್ದೇಶಕರವಿಗೌಡಈ ಸಂದರ್ಭದಲ್ಲಿ ಉಪಸ್ತಿತರಿದ್ದರು.