ಧರ್ಮಗಿರಿ ಮಂಜುನಾಥನ ಸನ್ನಿಧಿಯಲ್ಲಿ "ವರ್ಣತರಂಗ" ಕ್ಕೆ ಚಾಲನೆ
ಶ್ರೀ ಪಾಷಾಣಮೂರ್ತಿ ಸಿನಿ ಕ್ರಿಯೇಷನ್ಸ್ ಮೂಲಕ ಯುವ ಪಡೆಗಳು ಸೇರಿಕೊಂಡು ನಿರ್ಮಿಸುತಿರುವಂತಹ ಚಿತ್ರ "ವರ್ಣತರoಗ" ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ ಬಹಳ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು , ದಿಯಾ ಚಿತ್ರದ ನಿರ್ಮಾಪಕರಾದ ಕೃಷ್ಣ ಚೈತನ್ಯ ಕ್ಲಾಪ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸ್ನೇಹಿತರು , ಕುಟುಂಬದ ಹಿತೈಷಿಗಳು ಕೂಡ ಹಾಜರಿದ್ದರು. ಕಿರುತೆರೆಯಲ್ಲಿ ಧಾರಾವಾಹಿ ನಿರ್ದೇಶಿಸಿದ ತೀರ್ಥೇಶ್.ಕೆ. ಪ್ರಪ್ರಥಮ ಬಾರಿಗೆ ಬೆಳ್ಳಿ ಪರದೆಗೆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರ ತಂಡ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು , ಚಿತ್ರದ ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಮುಂದಾಗಿದ್ದು ಚಿತ್ರದ ಕುರಿತು ನಿರ್ದೇಶಕ ತೀರ್ಥೇಶ್. ಕೆ . ಮಾತನಾಡುತ್ತಾ , ವರ್ಣತರಂಗ ಎಂದರೆ ಬಣ್ಣಗಳ ಅಲೆಗಳು ಎಂಬ ಅರ್ಥ ಬರುತ್ತದೆ , ಒಬ್ಬೊಬ್ಬ ಮನುಷ್ಯನಲ್ಲಿಯೂ ಒಂದೊಂದು ರೀತಿಯ ವರ್ಣಗಳು ಇರುತ್ತದೆ. ಅವನ ಆಲೋಚನೆ ಮನಸ್ಥಿತಿ ಎಲ್ಲವೂ ಒಳಗೊಂಡಿರುತ್ತದೆ. ಹಾಗಾಗಿಯೇ ಈ ಶೀರ್ಷಿಕೆ ನಮ್ಮ ಚಿತ್ರಕ್ಕೆ ಹೋಲುತ್ತದೆ ,
ಅಡಿಬರಹದಲ್ಲಿ ಎ ಲಾಸ್ಟ್ ಫೇಸ್ ಎಂದು ಕೂಡ ಹಾಕಿದ್ದೇವೆ. ಇದೊಂದು ಕ್ರೈಂ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿದೆ. ಪ್ರತಿ ಹಂತದಲ್ಲೂ ಏರಿಳಿತಗಳು ಕೂಡಿದೆ. ಈ ಚಿತ್ರದ ಮತ್ತೊಂದು ವಿಶೇಷ ಏನೆಂದರೆ , 1865 ರ ಕಾಲಘಟ್ಟದ ಎಳೆಯು ಕೊಡ ಕಾಣಸಿಗಲಿದೆಯಂತೆ. ಬ್ರಿಟಿಷರ ವಿರುದ್ಧ ಗುರೂಜಿಯೊಬ್ಬರು ಹೋರಾಡುವ ಅಂಶ ಚಿತ್ರದ ಹೈಲೈಟ್ ಆಗಲಿದೆ. ಇದಕ್ಕಾಗಿ ಸಿ.ಜಿ. ವರ್ಕ್ ಹಾಗೂ ಎಫೆಕ್ಟ್ ಕೆಲಸಗಳು ಮಾಡುತ್ತಿದ್ದೇವೆ. ಚಿತ್ರದಲ್ಲಿ ಸುಮಾರು 20% ರಷ್ಟು ಗ್ರಾಫಿಕ್ ಅಂಶವು ಕಾಣುತ್ತದೆ. 4 ಹಂತದಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದು , ಸದ್ಯ ಕಂಠೀರವ ಸ್ಟುಡಿಯೋದಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭಿಸಲಿದೇವೆ. ನಾನು ಮೂಲತಃ ತ್ರಿಡಿ ಅನಿಮೇಟರ್ ಹಾಗೂ ಗ್ರಾಫಿಕ್ ಡಿಸೈನರ್ ಆಗಿರುವದರಿoದ ಬಹಳ ಸೂಕ್ಷ್ಮವಾಗಿ ಚಿತ್ರವನ್ನು ತೆರೆಗೆ ತರುವ ಆಲೋಚನೆ ಇದೆ. ನಾವು ಪೂರ್ವ ತಯಾರಿಯೊಂದಿಗೆ ಮುನ್ನುಗ್ಗಿದ್ದು , ಇಂದು ಮುಹೂರ್ತ ವನ್ನು ಆಚರಿಸಿಕೊಂಡಿದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.
ಇನ್ನೂ ಈ ಚಿತ್ರದ ಪ್ರಮುಖ ಪಾತ್ರಧಾರಿ ತಿಲಕ್ ಮಾತನಾಡುತ್ತಾ ಇದೊಂದು ವಿಭಿನ್ನ ಚಿತ್ರವಾಗಲಿದೆ , ನಿರ್ದೇಶಕರು ಉತ್ತಮವಾಗಿ ಕತೆಯನ್ನ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರದಲ್ಲಿ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಇದು ಕ್ರೈo ಹಾಗೂ ಸಸ್ಪೆನ್ಸ್ ಸುತ್ತ ನಡೆಯೋ ಕಥೆ. ಹೊಸ ಟೀo ಆದ್ರೂ ಪ್ಲನ್ ಚೆನ್ನಾಗಿ ಮಾಡಿಕೊಂಡಿದ್ದಾರೆ ನಮ್ಮ ತಂಡಕ್ಕೆ ಬೆoಬಲ ನೀಡಿ ಎoದರು.
ಮತ್ತೊಬ್ಬ ಯುವ ನಟ ವರ್ಧನ್ ಮಾತನಾಡುತ್ತಾ ಈ ಚಿತ್ರದಲ್ಲಿ ನನಗೆ ವಿಭಿನ್ನ ಪಾತ್ರವನ್ನು ನೀಡಿದ್ದಾರೆ ಎoದರು. ಇವರದ್ದು ಸೈಕ್ಯಟ್ರಿಸ್ಟ್ ಪಾತ್ರ ನಿರ್ವಹಿಸಲಿದ್ದಾರೆ ಎoದು ನಿರ್ದೇಶಕರು ಹೇಳಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯಾಗಿ ಯುವ ನಟಿ ಮೇಘನಾ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ವಿಶೇಷವಾದ ಪಾತ್ರವಾಗಿದ್ದು , ಚಿತ್ರದಲ್ಲಿ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಉಳಿದoತೆ ಅನುಭವಿ ಹಾಗೂ ಹೊಸ ಪ್ರತಿಭೆಗಳು ಕೂಡ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರoತೆ. ಶಿವಕುಮಾರ್ .ಬಿ. ರವರ ನಿರ್ಮಾಣದ ಈ ಚಿತ್ರಕ್ಕೆ ರಮೇಶ್ ರಾಜ್ ಛಾಯಾಗ್ರಹಣ , ವಿಜಯ್ ಯಾರ್ಡ್ಲಿ ಸಂಗೀತ ನೀಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ತಂಡ ಹಂತ ಹಂತವಾಗಿ ನೀಡಲಿದೆಯಂತೆ.