ಗೋರಿ ಹಾಡು ಬಿಡುಗಡೆ
‘ಗೋರಿ’ ಚಿತ್ರ . ಪ್ರೀತಿಯ ಸಮಾಧಿಅಂತ ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿರುವ ಬಹುತೇಕತಂಡವುಉತ್ತರಕರ್ನಾಟಕದವರೇಆಗಿರುವುದು ವಿಶೇಷ. ವಾಹಿನಿಯ ಸಿನಿಮಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಕಿರಣ್‌ಹಾವೇರಿ ನಾಯಕ, ಪ್ರೀತಿ ಮತ್ತು ಸ್ನೇಹದಕುರಿತಾದಕತೆಯಲ್ಲಿಜಾತಿ ಮತ್ತುಧರ್ಮಕ್ಕಿಂತ ಮಿಗಿಲಾದುದು ಸ್ನೇಹ,ಪ್ರೀತಿ. ಇವರೆಡಕ್ಕಿಂತಲೂ ಮಿಗಿಲಾದುದು ಮಾನವಿಯತೆ.ಮೂರು ವ್ಯಕ್ತಿಗಳು ಒಂದೇಕತೆಯನ್ನು ಹೇಳುತ್ತಾರೆ.ಪ್ರತಿಯೊಂದುಗೋರಿಯಲ್ಲಿಒಂದೊಂದುಗಾಥೆಇರುತ್ತದೆ.ಆ ಗೋರಿಗಳಲ್ಲಿ ಒಂದುಕತೆಯು ಪಾತ್ರಗಳ ಮುಖಾಂತರ ತೆರೆದುಕೊಳ್ಳುತ್ತಾ ಹೋಗುತ್ತದೆ. ಆ ಒಂದುಗೋರಿಯಾರು, ಏತಕ್ಕಾಗಿ ಹೀಗಾಯಿತುಎಂಬುದನ್ನುಚಿತ್ರಮಂದಿರದಲ್ಲಿ ತಿಳಿದುಕೊಳ್ಳಬೇಕೆಂದು ನಿರ್ದೇಶಕ ಗೋಪಾಲಕೃಷ್ಣ ಗೌಪ್ಯತೆಕಾಪಾಡಿದರು.
ಅಂಶಕಾಲಿಕ ಸಮಯದಲ್ಲಿ ನಟಿಸಿರುವ ಕಿರಣ್‌ಹಾವೇರಿಗೆಮೊದಲ ಅನುಭವ. ಕಾಲೇಜು ಹುಡುಗಿಯಾಗಿ ಸ್ಮಿತಾ ನಾಯಕಿ.ಐಟಂ ಹಾಡಿಗೆ ಹೆಜ್ಜೆ ಹಾಕಿರುವುದು ಶ್ರಿಯಾಅಂಜುಶ್ರೀ.ನಾಲ್ಕು ಹಾಡುಗಳಿಗೆ ವಿನುಮನಸು ಸಂಗೀತವಿದೆ. ಈ ಪೈಕಿ ಚುಟುಚುಟುಗೀತೆಗೆ ಸಾಹಿತ್ಯ ರಚಿಸಿರುವ ಶಿವುಬರ್ಗಿ, ಗಾಯಕರವೀಂದ್ರಸೊರಗಾವಿ ಹಾಡಿಗೆ ಕೆಲಸ ಮಾಡಿದ್ದಾರೆ. ಛಾಯಾಗ್ರಹಣ ಮಂಜುನಾಥಹೆಗಡೆ, ಸಂಕಲನ ಸತೀಶ್‌ಚಂದ್ರಯ್ಯ, ನೃತ್ಯ ಸ್ನೇಹ, ಸಾಹಸ ಅಲ್ಟಿಮೇಟ್‌ಶಿವು ಅವರದಾಗಿದೆ. ಪರಮೇಶ್ವರಪ್ಪಪೂಜಾರ್ ಹೊಳಲು, ಪ್ರಕಾಶ್‌ಜವಳಿ ಅವರೊಂದಿಗೆ ಸ್ನೇಹಿತರು ಸೇರಿಕೊಂಡುಹಾವೇರಿಟಾಕೀಸ್ ಮುಖಾಂತರನಿರ್ಮಾಣ ಮಾಡಿರುವುದುಪ್ರಥಮ ಪ್ರಯತ್ನ.ಪ್ರಚಾರದ ಸಲುವಾಗಿ ಎಂ.ಹೆಚ್.ಜಗ್ಗೀನ್ ಬರೆದಿರುವ ‘ಹೃದಯದ ಪರಿಚಯಕೆ’ ಹಾಡನ್ನು ಮಾದ್ಯಮದವರಿಗೆತೋರಿಸಲಾಯಿತು.