Purushotthama.Film Pooja Press Meet.

Sunday, February 14, 2021

429

ಪುರುಷೋತ್ತಮನಾಗಿಜಿಮ್ರವಿ

ರಾಜ್ಯ, ರಾಷ್ಟ್ರ ಮತ್ತುಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಎ.ವಿ.ರವಿ ಅವರನ್ನುಅಭಿಮಾನದಿಂದಜಿಮ್‌ರವಿ ಎಂದುಕರೆಯುತ್ತಾರೆ. ಇವರುಕನ್ನಡ ಸೇರಿದಂತೆ ಸೌತ್‌ಇಂಡಿಯನ್ ಭಾಷೆಯಲ್ಲಿ ೧೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟನೆ ಮಾಡಿದ್ದಾರೆ.ಜೊತೆಗೆ ‘ರವಿ ಜಿಮ್’ ತರಭೇತಿ ಶಾಲೆ ಆರಂಭಿಸಿ ಕಳೆದ ೩೦ ವರ್ಷಗಳಿಂದ ಅಂದಾಜು ೭೦೦೦೦ ವಿದ್ಯಾರ್ಥಿಗಳು ಪ್ರಯೋಗ ಪಡೆದುಕೊಂಡಿದ್ದಾರೆ. ಇದೆಲ್ಲಾ ಅನುಭವಗಳಿಂದ ಈಗ ‘ಪುರುಷೋತ್ತಮ’ ಚಿತ್ರಕ್ಕೆ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ್ದು, ರವಿಸ್ ಜಿಮ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.ಪ್ರೇಮಿಗಳ ದಿನದಂದುಅದ್ದೂರಿಯಾಗಿಶಾಲೆಯಆವರಣದಲ್ಲಿಮಹೂರ್ತ ಸಮಾರಂಭ ನಡೆಯಿತು.

ಕಲಾಸಾಮ್ರಾಟ್‌ಎಸ್.ನಾರಾಯಣ್ ಪ್ರಥಮದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದರು. ಜೈಜಗದೀಶ್, ವಿಜಯಲಕ್ಷೀಸಿಂಗ್, ತುರುವೆಕೆರೆ ಶಾಸಕ ಮಸಾಲೆಜಯರಾಂ ಮುಂತಾದ ಗಣ್ಯರುಗಳು ಆಗಮಿಸಿದ್ದರು. ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕಎಸ್.ವಿ.ಅಮರನಾಥ್ ಸಿನಿಮಾಕ್ಕೆಚಿತ್ರಕತೆ,ಸಂಭಾಷಣೆಯಜವಬ್ದಾರಿಯನ್ನು ಹೊತ್ತುಕೊಂಡಿದ್ದೇನೆ. ರವಿ ಅವರನ್ನುಇಲ್ಲಿಯವರೆಗೂಕ್ರೀಡಾಪಟು, ಕಲಾವಿದನಾಗಿ ನೋಡಿದ್ದೀರಾ. ಈಗ ಅವರಲ್ಲಿರುವಕಲಾವಿದನನ್ನು ಬೇರೆತರಹ ಪರದೆ ಮೇಲೆ ತೋರಿಸವ ಪ್ರಯತ್ನ ಮಾಡಲಾಗುವುದು.ಅಂದರೆಕ್ರೀಡೆ, ಆಕ್ಷನ್‌ಖಂಡಿತಇರೋದಿಲ್ಲ. ಪೂರ್ಣ ಪ್ರಮಾಣದ ಹಾಸ್ಯದ ಏಳೆಯಲ್ಲಿ ಕತೆಯು ಸಾಗುತ್ತದೆ.ಮಧ್ಯಮ ವರ್ಗದಕುಟುಂಬದವರು ಪ್ರತಿ ನಿತ್ಯಏನಾದರೂ ಸಮಸ್ಯೆಯನ್ನುಎದುರಿಸುತ್ತಿರುತ್ತಾರೆ.ಆ ತರಹದದೊಡ್ಡದಾದಛಾಲೆಂಜ್‌ಇವರಜೀವನದಲ್ಲಿ ಬಂದಾಗ, ಅದನ್ನು ಹೇಗೆ ನಿಭಾಯಿಸುತ್ತಾರೆ.ಇಲ್ಲಿ ನಾಯಕದೇಹಶಕ್ತಿಯನ್ನು ಪ್ರದರ್ಶಿಸದೆ, 

ಕೇವಲ ಬುದ್ದಿಶಕ್ತಿಯಿಂದ ಹೇಗೆಲ್ಲಾಅವಘಡಗಳನ್ನು ಸರಿಪಡಿಸಿಕೊಳ್ಳುತ್ತಾನೆ ಎಂಬುದುಚಿತ್ರದ ಸಾರಾಂಶವಾಗಿದೆ.ಬೆಂಗಳೂರು ಹಾಗೂ ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲುಯೋಜನೆರೂಪಿಸಲಾಗಿದೆ.ನಿರ್ಮಾಪಕರುಯಾವದಕ್ಕೂರಾಜಿಆಗಿಲ್ಲ. ನಾಯಕಿಇನ್ನಿತರಆಯ್ಕೆ ಪ್ರಕ್ರಿಯೆ ಸದ್ಯದಲ್ಲೆ ಮುಗಿಯಲಿದೆಎಂದರು.

ಡಾ.ರಾಜ್‌ಕುಮಾರ್‌ಅಭಿಮಾನಿಯಾಗಿ, ಅಣ್ಣಾವ್ರು ಹೇಳಿದ ಒಂದು ಮಾತನ್ನು ಇಂದಿಗೂ ಉಳಿಸಿಕೊಂಡಿದ್ದೇನೆ. ನಾಯಕನಿಂದಒದೆ ತಿನ್ನಿಸಿಕೊಳ್ಳುತ್ತಿರುವ ದೃಶ್ಯಗಳನ್ನು ನೋಡಿತ್ತಿದ್ದ ಹಿತೈಷಿಗಳು, ನೀವು ಯಾವಾಗ ಹೀರೋಆಗೋದುಅಂತ ಹತ್ತು ವರ್ಷದಿಂದ ಕೇಳುತ್ತಿದ್ದರು.ಅದಕ್ಕೆ ಈ ದಿನ ಕಾಲ ಕೂಡಿಬಂತು.ಒಂದಷ್ಟುಕಡೆ ನೋವಿನ ಸಂಗತಿ ನಡೆಯಿತು.ಅದೆಲ್ಲಾವನ್ನು ಸ್ಪೂರ್ತಿಯಾಗಿ ಪಡೆದುಕೊಂಡಿದ್ದೆ.ನಿರ್ದೇಶಕರುಯಾವುದೇರೋಲ್‌ಕೊಟ್ಟರೂ ಶ್ರದ್ದೆವಹಿಸಿ ನಟಿಸುತ್ತಿದ್ದೆ. ಹಣದ ಹಿಂದೆಯಾವತ್ತು ಹೋಗಿರಲಿಲ್ಲ. ಪಾತ್ರದ ಸಲುವಾಗಿ ಹದಿನೆಂಟುಕೆ.ಜಿತೂಕಕಡಿಮೆ ಮಾಡಿಕೊಂಡಿದ್ದೇನೆ. ದಯವಿಟ್ಟು ಮಾದ್ಯಮದ ಸಹಕಾರಬೇಕೆಂದುಜಿಮ್‌ರವಿ  ಅವಲತ್ತು ಮಾಡಿಕೊಂಡರು.

ಆನಂದ್‌ಪ್ರಿಯಾ, ಪ್ರಮೋದ್‌ಮರವಂತೆ, ನಿರ್ದೇಶಕರು ಬರೆದಿರುವ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದೇನೆಎಂದು ಸಂಗೀತ ಸಂಯೋಜಕ ಶ್ರೀಧರ್.ವಿ.ಸಂಭ್ರಮ್ ಮಾಹಿತಿ ನೀಡಿದರು.ಗೊಷ್ಟಿಯಲ್ಲಿ ಸಂಕಲನಕಾರಅರ್ಜುನ್‌ಕಿಟ್ಟು, ಬೇಬಿ ಅಂಕಿತಮೂರ್ತಿ ಮುಂತಾದವರು ಉಪಸ್ತಿತರಿದ್ದರು. ಗುರುಗಳಿಗೆ ಶುಭಹಾರೈಸಲುರಾಜ್ಯದ ನಾನಾ ಕಡೆಗಳಿಂದ ತಂಡೋಪತಂಡವಾಗಿಒಂದುಕಡೆ, ಸ್ನೇಹಿತರು, ಸಂಬಂದಿಗಳು ಮತ್ತೋಂದು ಭಾಗದಲ್ಲಿ ಬರುತ್ತಿದ್ದು, ಇವರೆಲ್ಲರಿಂದಮಾದ್ಯಮದವರುತಪ್ಪಿಸಿಕೊಂಡು ಹೊರಬರಲುಕಷ್ಟಪಡಬೇಕಾಯಿತು.

 

Copyright@2018 Chitralahari | All Rights Reserved. Photo Journalist K.S. Mokshendra,