ಎರಡು ಕಾಲಗಳ ಮಿಶ್ರಣ
‘ಮೈ ಆಟೋಗ್ರಾಫ್’, ‘ಚಾರ್ಮಿನಾರ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಶಾಲೆ, ಕಾಲೇಜು, ಯೌವ್ವನ, ಜೀವನಕುರಿತಂತೆ ಕತೆಗಳು ಇದ್ದವು.ಅದರ ಸಾಲಿಗೆ ‘ಅಂದೊಂದಿತ್ತು ಕಾಲ’ ಎನ್ನುವ ಸಿನಿಮಾವೊಂದು ಸೋಮವಾರ ಮಹೂರ್ತ ಆಚರಿಸಿಕೊಂಡಿದೆ.ಪುನೀತ್‌ರಾಜ್‌ಕುಮಾರ್ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರು. ಈ ಸಂದರ್ಭದಲ್ಲಿರಾಘವೇಂದ್ರರಾಜ್‌ಕುಮಾರ್,ಜೋಗಿಪ್ರೇಮ್‌ಇತರರು ಹಾಜರಿದ್ದರು. ನಂತರ ಮಾಧ್ಯಮದವದೊಂದಿಗೆ ಮಾತನಾಡಿದನಿರ್ದೇಶಕಕೀರ್ತಿ ಈ ಹಿಂದೆಆರ್.ಚಂದ್ರು, ಪಿ.ಎನ್.ಸತ್ಯ, ಅರಸುಅಂತಾರೆಅವರ ಬಳಿ ಕೆಲಸ ಕಲಿತಿರುವೆ. ಶೀರ್ಷಿಕೆ ಹೇಳುವಂತೆ ಎರಡು ಕಾಲಗಳ ಮಿಶ್ರಣವನ್ನುತೋರಿಸುವ ಪ್ರಯತ್ನ ಮಾqಲಾಗುತ್ತಿದೆ.೧೯೯೦ರಲ್ಲಿ ತಂತ್ರಜ್ಘಾನಅಭಿವೃದ್ದಿ ಹೊಂದಿಲ್ಲದಿದ್ದರೂ, ಸಂಬಂದಗಳು ಚೆನ್ನಾಗಿರುತ್ತಿತ್ತು.ಟೆಕ್ನಾಲಜಿ ಬೆಳೆದಂತೆ ವಾತಾವರಣ ಹಿಂದಿನಂತೆಇಲ್ಲ. ಶಾಲೆ, ಕಾಲೇಜು, ಜೀವನಎಲ್ಲವು ಬಂದು ಹೋಗುತ್ತದೆ.
ಇದರಲ್ಲಿಯಾವುದುಉತ್ತಮವೆಂದು ನೋಡುಗರಿಗೆ ಬಿಡಲಾಗಿದೆ.ಒಬ್ಬ ವ್ಯಕ್ತಿಯಾದವನು ಶ್ರಮ ಪಟ್ಟರೆ ಏನು ಬೇಕಾದರೂ ಸಾಧನೆ ಮಾಡಬಹುದುಅಂತ ಹೇಳಲಾಗಿದೆ.ಅರುಣಬಾಲರಾಜ್, ಮೋಹನ್‌ಜುನೆಜ, ಗೋಪಾಲಕೃಷ್ಣದೇಶಪಾಂಡೆ ಮುಂತಾದವರು ನಟಿಸುತ್ತಿದ್ದಾರೆ.ತೀರ್ಥಹಳ್ಳಿ, ಬೆಂಗಳೂರು ಸುತ್ತಮುತ್ತಚಿತ್ರೀಕರಣ ನಡೆಸಲುಯೋಜನೆರೂಪಿಸಲಾಗಿದೆಎಂದು ಮಾಹಿತಿತೆರೆದಿಟ್ಟರು.
ನಿರ್ದೇಶಕನ ಪಾತ್ರ, ೯೦ ರಿಂದ ೨೦೧೫ರ ವರೆಗಿನ ಪಯಣವು ಬರುತ್ತದೆ.ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆನೆಂದು ನಾಯಕ ವಿನಯ್‌ರಾಜ್‌ಕುಮಾರ್ ಹೇಳಿದರು. ಮಿತಭಾಷಿಯಾಗಿದ್ದರೂ, ಕಣ್ಣುಗಳಲ್ಲೆ ಭಾವನೆಗಳನ್ನು ತೋರಿಸುತ್ತೇನೆಂದು ನಾಯಕಿಅದಿತಿಪ್ರಭುದೇವ ನಕ್ಕರು.‘ಗಟ್ಟಿಮೇಳ’ ಧಾರವಾಹಿ ಖ್ಯಾತಿಯ ನಿಶಾ ಉಪನಾಯಕಿಯಾಗಿ ಹೆಚ್ಚೇನು ಹೇಳಲಿಲ್ಲ. ಸಂಪಂಗಿಯಾಗಿ ಪಾತ್ರದ ವಿವರ ತಿಳಿಸಲಿಲ್ಲ ಕಡ್ಡಿಪುಡಿಚಂದ್ರು.ಛಾಯಾಗ್ರಹಣಅಭಿಷೇಕ್‌ಕಾಸರಗೂಡುಅವರದಾಗಿದೆ. ಚಿತ್ರೀಕರಣಕ್ಕೆ ಸಾಮಗ್ರಿಗಳನ್ನು ಸರಬರಾಜು ಮಾಡುವ ಲೋಕೇಶ್‌ಅವರು ಭುವನ್ ಸಿನಿಮಾಸ್ ಬ್ಯಾನರ್‌ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ.