ಕಲಿವೀರಟ್ರೈಲರ್ ಬಿಡುಗಡೆ
ಉತ್ತರಕರ್ನಾಟಕದಆಧುನಿಕ ಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್‌ಆರ್ಟ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಬೆಣ್ಣೆಯಲ್ಲಿಕೂದಲುತೆಗೆಯುವಂತೆ ಪ್ರದರ್ಶಿಸುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ.ಪ್ರಚಾರದ ಸಲುವಾಗಿ ಟ್ರೈಲರ್ ಬಿಡುಗಡೆ ಸಮಾರಂಭಕಲಾವಿದರ ಸಂಘದಲ್ಲಿಅದ್ದೂರಿಯಾಗಿ ನಡೆಯಿತು. ನಿರ್ದೇಶಕ ಅವಿಮಾತನಾಡಿಆದಿಜನಾಂಗದ ಸಲುವಾಗಿ ಹೋರಾಡುವಕತೆಯಲ್ಲಿ ಪ್ರೀತಿಯ ಸನ್ನಿವೇಶಗಳು ಬರಲಿದೆ. ಜೊತೆಗೆಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು ಸಿದ್ದಪಡಿಸಿರುವುದು ವಿಶೇಷ ಎಂದರು.
ರಿಯಲ್,ರೀಲ್‌ದಲ್ಲಿಅನಾಥನಾಗಿರುವ ನಾಯಕಕಾಡಿನ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಚಿರಶ್ರೀಅಂಚನ್ ನಾಯಕಿ.ವಕೀಲೆಯಾಗಿ ಪಾವನಗೌಡ, ಭ್ರಷ್ಟ ಪೋಲೀಸ್‌ಅಧಿಕಾರಿಯಾಗಿ ನೀನಾಸಂಅಶ್ವಥ್, ನಾಯಕನಂತಯೇಇರುವತಬಲನಾಣಿ ಪ್ರೋತ್ಸಾಹ, ಸಲಹೆ ನೀಡುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ದಾಂಡೇಲಿ ಅರಣ್ಯ ಪ್ರದೇಶಗಳು, ಶಿವಮೊಗ್ಗ, ಕನಕಪುರ, ಬೆಂಗಳೂರು ಹಾಗೂ ಮುತ್ತ್ತೆತ್ತಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡಾ.ನಾಗೇಂದ್ರಪ್ರಸಾದ್, ಅರಸುಅಂತಾರೆ ಸಾಹಿತ್ಯದ ಗೀತೆಗಳಿಗೆ ವಿ.ಮನೋಹರ್ ಸಂಗೀತದಜೊತೆಗೆ ಹಾಡಿಗೆ ಲೇಖನಿ ಹಿಡಿದಿದ್ದಾರೆ. ಛಾಯಾಗ್ರಹಣ ಹಾಲೇಶ್.ಎಸ್. ಸಾಹಸ ಡಿಫರೆಂಟ್‌ಡ್ಯಾನಿ, ಸಂಕಲನ ಎ.ಆರ್.ಕೃಷ್ಣ, ನೃತ್ಯ ಮುರಳಿ ನಿರ್ವಹಿಸಿದ್ದಾರೆ. ಹುಡುಗನ ಪ್ರದರ್ಶನ ನೋಡಿದ ನಾಲ್ವರು ಸಮಾನಮನಸ್ಕರಾಗಿರುವರಾಣೆಬೆನ್ನೂರಿನ ಶ್ರೀನಿವಾಸ್ ಮತ್ತು ಗೆಳಯರು ಸೇರಿಕೊಂಡುಜ್ಯೋತಿಆರ್ಟ್ಸ್ ಮುಖಾಂತರ ಬಂಡವಾಳ ಹೂಡಿರುವುದು ಹೊಸ ಅನುಭವ. ತಂಡಕ್ಕೆ ಶುಭ ಹಾರೈಸಲುಉಮೇಶ್‌ಬಣಕಾರ್ ಹಾಗೂ ಕರ್ನಾಟಕದ ನಾನಾ ಭಾಗಗಳ ಆಟೋಚಾಲಕರು ಗೆಳಯನಿಗೆ ವಿಶ್ ಮಾಡಲು ಆಗಮಿಸಿದ್ದರು. ಲಹರಿ ಸಂಸ್ಥೆಯು ಹಾಡುಗಳ ಹಕ್ಕನ್ನು ಪಡೆದುಕೊಂಡಿದೆ.ಕನ್ನಡ ಸೇರಿದಂತೆತೆಲುಗು, ಹಿಂದಿ, ತಮಿಳು ಮತ್ತುಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ.