ಆಸ್ಪತ್ರೆಯಲ್ಲಿ ಉಗ್ರಾವತಾರ ಚಿತ್ರೀಕರಣ
ರಕ್ತದ ಕಲೆಗಳಿಂದ ಗಾಯಗೊಂಡಿರುವ ವಿದ್ಯಾರ್ಥಿಯೊಬ್ಬಳನ್ನು ಸ್ಟ್ರೆಚರ್‌ದಲ್ಲಿ ಐಸಿಯುಗೆ ಕರೆದುಕೊಂಡು ಬರಲಾಗುತ್ತದೆ. ಆಕೆಯು ನನ್ನನ್ನು ಕಾಪಾಡಿ, ಕಾಪಾಡಿ ಎಂದು ಅರಚುತ್ತಾ ಪ್ರಾಣ ಬಿಡುತ್ತಾಳೆ. ವೈದ್ಯರು ಬೇಸರದಿಂದ ಅವಳನ್ನು ನೋಡುತ್ತಿರುವಾಗ ಇನ್ಸ್‌ಪೆಕ್ಟರ್ ಆಗಮನವಾಗುತ್ತದೆ. ಇವಳದು ರೇಪ್ & ಮರ್ಡರ್ ಕೇಸೆಂದು ಡಾಕ್ಟರ್ ಹೇಳುತ್ತಾರೆ. ಬೇಗನೆ ವರದಿ ಕೊಡಿರೆಂದು ಅಧಿಕಾರಿಯು ಹೇಳಿ ಹೊರಡುವಷ್ಟರಲ್ಲಿ, ಮೇಡಂ ಇಂತಹ ಅಪರಾಧಗಳಿಗೆ ಕಡಿವಾಣ ಹಾಕಲು ತಮ್ಮಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ನಾನು ಆದಷ್ಟು ಪ್ರಯತ್ನ ಪಡುತ್ತೇನೆಂದು ಹೇಳಿದಾಗ ಕಟ್ ಎನ್ನುವ ಶಬ್ದ ಬಂದು ಅಂದಿನ ಚಿತ್ರೀಕರಣ ಪ್ಯಾಕ್‌ಅಪ್ ಆಗುತ್ತದೆ.
ಲಕ್ಷೀಪುರದಲ್ಲಿರುವ ’ರಾಜಲಕ್ಷೀ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್’ದಲ್ಲಿ ’ಉಗ್ರಾವತಾರ’ ಶೂಟಿಂಗ್ ಕಳೆದ ಮೂರು ದಿನಗಳಿಂದ ನಡೆಯುತ್ತಿತ್ತು. ಸ್ಥಳಕ್ಕೆ ಮಾದ್ಯಮದವರು ಭೇಟಿ ನೀಡಿದಾಗ ಮೇಲಿನ ಸನ್ನಿವೇಶಗಳನ್ನು ಛಾಯಾಗ್ರಾಹಕ ಸಿ.ನಂದಕುಮಾರ್ ಸೆರೆ ಹಿಡಿಯುತ್ತಿದ್ದರು. ಖಡಕ್ ಇನ್ಷ್‌ಪೆಕ್ಟರ್ ಆಗಿ ಪ್ರಿಯಾಂಕಉಪೇಂದ್ರ, ವೈದ್ಯರಾಗಿ ಪವಿತ್ರಾಲೋಕೇಶ್, ವಿದ್ಯಾರ್ಥಿ ಪಾತ್ರದಲ್ಲಿ ಶೋಭ. ಮತ್ತೋಂದು ಕಡೆ ಸಣ್ಣ ಸೀನ್‌ದಲ್ಲಿ ’ಮನಸು ಮಲ್ಲಿಗೆ’ ಚಿತ್ರದ ನಾಯಕ ನಟರಾಜ್ ಪಾಲ್ಗೋಂಡಿದ್ದರು.
ನಿರ್ದೇಶಕ ಗುರುಮೂರ್ತಿ ಹೇಳುವಂತೆ ಒಂದು ಕ್ಲೈಮಾಕ್ಸ್ ಫೈಟ್ ಮಾಡಿದರೆ ಕುಂಬಳಕಾಯಿ ಒಡೆಯಲಾಗುತ್ತದೆ. ಇದಕ್ಕಾಗಿ ನೆಲಮಂಗಲ ಬಳಿ ಇರುವ ರೆಸಾರ್ಟ್‌ದಲ್ಲಿ ಸೆಟ್ ಹಾಕಲಾಗುತ್ತಿದೆ. ಪ್ರಸಕ್ತ ಸಾಮಾಜಿಕ ವಿಷಯಗಳು, ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ, ಅಪರಾಧ ಜೊತೆಗೆ ಗಂಭೀರ ವಿಷಯಗಳನ್ನು ಸನ್ನಿವೇಶಗಳ ಮೂಲಕ ಹೇಳಲಾಗುತ್ತಿದೆ. ಮೇಡಂ ಪ್ರಾರಂಭದಿಂದಲೂ ಸಹಕಾರ ನೀಡುತ್ತಿದ್ದಾರೆಂದು ಅವರ ಕೆಲಸವನ್ನು ಶ್ಲಾಘಿಸಿದರು.
ನಿರ್ಮಾಪಕ ಸತೀಶ್ ಗೈರು ಹಾಜರಿ ಇತ್ತು. ಮೊದಲಬಾರಿ ಇನ್ಸ್‌ಪೆಕ್ಟರ್ ಡ್ರೆಸ್‌ದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಡ್ಯೂಪ್ ಬಳಸದೆ ಫೈಟ್ ಮಾಡಿದ್ದೇನೆ. ಇದಕ್ಕಾಗಿ ತರಬೇತಿ ಪಡೆಯಬೇಕಾಯಿತು. ಮಹಿಳೆಯರ ಮೇಲಿನ ಸಮಸ್ಯೆಗಳನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಲಾಗುತ್ತಿದೆ. ೧೯೮೦, ಲೈಫ್ ಈಸ್ ಬ್ಯೂಟಿಫುಲ್ ರೆಡಿಯಾಗಿದೆ. ಮುಂದೆ ನಮ್ಮದೆ ಪ್ರೊಡಕ್ಷನ್ ಹೌಸ್‌ದಿಂದ ಚಿತ್ರ ನಿರ್ಮಾಣ ಮಾಡುವ ಯೋಜನೆ ಇದೆ. ಎಲ್ಲವನ್ನು ನಂತರ ತಿಳಿಸುವುದಾಗಿ ಪ್ರಿಯಾಂಕಉಪೇಂದ್ರ ಹೇಳಿದರು.