ಶ್ರೀ ಜಗನ್ನಾಥದಾಸರಜೀವನಚರಿತ್ರೆ
ಹರಿಕಥಾಮೃತಸಾರವೆಂಬ ಮೇರುಕೃತಿಯನ್ನು ಬರೆದಿರುವ ‘ಶ್ರೀ ಜಗನ್ನಾಥದಾಸರು’ ಕುರಿತಚಿತ್ರವೊಂದುತೆರೆಗೆ ಬರಲು ಸಜ್ಜಾಗಿದೆ. ಮಧುಸೂದನ್ ಹವಲ್ದಾರ್ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.ಪ್ರಚಾರದ ಸಲುವಾಗಿ ಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವುಕಲಾವಿದರ ಸಂಘದಲ್ಲಿ ನಡೆಯಿತು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥರುಹಾಡುಗಳನ್ನು ಲೋಕಾರ್ಪಣೆ ಮಾಡಿಮಾತನಾಡುತ್ತಾ, ಮನುಷ್ಯ ಹಾಗೂ ದೇವರ ನಡುವಿನ ಕೊಂಡಿಅಂದರೆಅದು ಭಕ್ತಿ.
ಅಂತಹ ಪರಿಶುದ್ದ ಭಕ್ತಿಯಿದ್ದರೆ ಮಾತ್ರದೇವರುಒಲಿಯುತ್ತಾನೆ. ನಮಗೆ ಅಂತಹ ಪರಿಶುದ್ದ ಭಕ್ತಿಯನ್ನುದೇವರ ಬಳಿ ನಿವೇದಿಸುವುದು ಹೇಗೆ ಎಂಬುದನ್ನುಕೃತಿಯಲ್ಲಿ ತಿಳಿಸಿದ್ದರು.ಇಂತಹದಾಸಶ್ರೇಷ್ಟರಜೀವನಚರಿತ್ತೆ ಸಿನಿಮಾಆಗುತ್ತಿರುವುದು ಶ್ಲಾಘನೀಯವಾಗಿದೆ.ದಾಸರ ಮೂಲಕ ಭಗವಂತನಅನುಗ್ರಹವಾಗಲಿ ಎಂದು ಶ್ರೀಗಳು ತಂಡಕ್ಕೆ ಆಶೀರ್ವಚನ ನೀಡಿದರು.
ಹೈದರಬಾದ್ ಮೂಲದ ಶರತ್‌ಜೋಷಿ ಅವರುಜಗನ್ನಾಥದಾಸರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯದಾಸರಾಗಿತ್ರಿವಿಕ್ರಮಜೋಷಿ, ಉಳಿದಂತೆ ಪ್ರಭಂಜನದೇಶಪಾಂಡೆ, ಸುರೇಶ್‌ಕಾರ್ಣೇಕರ ಮುಂತಾದವರು ನಟಿಸಿದ್ದಾರೆ. ಸಂಗೀತ ವಿಜಯ್‌ಕೃಷ್ಣಅವರದಾಗಿದೆ. ಮತಾಂಬುಜಾ ಮೂವೀಸ್ ಮುಖಾಂತರ ಸಿದ್ದಗೊಂಡಿರುವ ಚಿತ್ರಕ್ಕೆ ವಿ.ವಿ.ಜೋಷಿ ಮತ್ತು ಡಿ.ಶ್ರೀನಾಥ್‌ರಾವ್ ಸಹ ನಿರ್ಮಾಪಕರು. ಸಮಾರಂಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷಉಮೇಶ್‌ಬಣಕರ್, ಬಾ.ಮ.ಹರೀಶ್ ಸೇರಿದಂತೆ ಹಲವು ಗಣ್ಯರು ಉಪಸ್ತಿತರಿದ್ದರು. ಇದಕ್ಕೂ ಮುನ್ನ ಹಾಡುಗಳು ಮತ್ತು ತುಣುಕುಗಳನ್ನು ತೋರಿಸಲಯಿತು.