ಕಾಶ್ಮೀರದಲ್ಲಿ *"ನಿನದೇ ನೆನಪು".*
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ *ವಾಸುಕಿ ವೈಭವ್* ಹಾಡಿರುವ ಈ ಆಲ್ಬಂ ಸಾಂಗ್.
ಜನಪ್ರಿಯ ಗೀತರಚನೆಕಾರ *ಗೌಸ್ ಫಿರ್* ಬರೆದಿರುವ *" ಹೃದಯಕ್ಕೆ ಹೃದಯವೇ ಕಡು ವೈರಿ"* ಎಂದು ಆರಂಭವಾಗುವ *"ನಿನದೇ ನೆನಪು"* ಎಂಬ ಶೀರ್ಷಿಕೆ ಯುಳ್ಳ ಈ ಆಲ್ಬಂ ಸಾಂಗ್ *ಸ್ವತಂತ್ರ ದಿನಾಚರಣೆಯ* ದಿನ ಬಿಡುಗಡೆಯಾಗಿದೆ.
ಈ ಆಲ್ಬಂ ಕನ್ನಡದ ಬಹು ಅದ್ದೂರಿ ನಿರ್ಮಾಣ ಎಂದೇ ಹೇಳಬಹುದು, ಯಾಕೆಂದರೆ ಇದರ ಚಿತ್ರೀಕರಣ ಕಾಶ್ಮೀರ ಮತ್ತು ಲೇಹ್ ನಲ್ಲಿ ನಡೆದಿದೆ ಎಂದರೆ ಈ ಆಲ್ಬಂ ಹಾಡಿನ ನಿರ್ಮಾಣದ ವೈಭವವನ್ನು ಹೇಳಬಹುದು.
*ಸರವಣ್* ಮತ್ತು *ಪ್ರತಿಮಾ* ಈ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ.
*ಸರವಣ್* ಈಗಾಗಲೇ *ಸಬ್ ವೇ* ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರ ಬಿಡುಗಡೆ ಹಂತದಲ್ಲಿದೆ.
ಟಿಕ್ ಟಾಕ್ ಮೂಲಕ ಮನೆಮಾತಾಗಿರುವ ಪ್ರತಿಮ ಈಗಾಗಲೇ ಕೆಲವು ಆಲ್ಬಂ ಗಳಲ್ಲಿ ನಟಿಸಿದ್ದಾರೆ.
ಈ ಆಲ್ಬಂ ನಿರ್ಮಾಣ ಮಾಡಿದವರು *ಆಂಜಿ ಬಾಬು* ಎಂಬುವವರು, ಅವರಿಗೆ ಬೆಂಬಲವಾಗಿ ನಿಂತವರು *ಫೈಯಿಂಗ್ ಕಿಂಗ್ ಮಂಜು* ಎಂಬುವವರು.
ಈ ಮೊದಲು *ಮಯೂರ್ ಪಟೇಲ್* ಅಭಿನಯದ *ರಾಜೀವ* ಚಿತ್ರವನ್ನೂ *ಮಂಜು* ನಿರ್ದೇಶಿಸಿದ್ದಾರೆ.
ಈ ಹಾಡನ್ನು ನಿರ್ದೇಶಿಸಿರುವವರು *ಎಂ. ವೈ. ಕೃಷ್ಣ,* ಇವರಿಗೆ ನಿರ್ದೇಶನದ ಅನುಭವವೂ ಇದೆ, ಅವರು ಮುಂದಿನ ದಿನಗಳಲ್ಲಿ ಸ್ವತಂತ್ರ ನಿರ್ದೇಶಕನಾಗುವ ಕನಸೂ ಇದೆ, ಅದರ ಮೊದಲ ಹೆಜ್ಜೆಯಾಗಿ ಈ ಆಲ್ಬಂ ಹಾಡನ್ನು ನಿರ್ದೇಶಿಸಿದ್ದಾರೆ. ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದಾರೆ, ಹಾಡಿನಲ್ಲಿ ಕಾಶ್ಮೀರದ ಮನಮೋಹಕ ಸನ್ನಿವೇಶಗಳು ಕಣ್ಣಿಗೆ ಮುದ ನೀಡುತ್ತಲೇ ಸಾಗುತ್ತದೆ. ಈ ಹಾಡಿನ ಮತ್ತೊಂದು ಹೆಚ್ಚುಗಾರಿಕೆ ಎಂದರೆ *ವಾಸುಕಿ ವೈಭವ್* ಅವರ ಸುಮಧುರ ಗಾಯನ ಹಾಗೂ *ರೋಹಿತ್ ಸೊವಾರ್* ಅವರ ಸಂಗೀತ ನಿರ್ದೇಶನ.
ಹಾಡಿನ ಛಾಯಾಗ್ರಹಣ ಮಾಡಿದವರು *ಕಾರ್ತಿಕ್* . ಈ ಹಾಡನ್ನು ನಿರ್ಮಾಣ ಮಾಡಿದ್ದು *ಚಾಣಕ್ಯ* ಪಿಲಂಸ್.
ಆಲ್ಬಂ ಬಿಡುಗಡೆಗೆ ರಾಜಕಾರಣಿ *ನರೇಂದ್ರ ಬಾಬು* , ನಿರ್ಮಾಪಕ *ಸಯ್ಯದ್ ಸಲಾಂ* , *ರಮೇಶ್* ಆಗಮಿಸಿದ್ದರು.
ಈ ಹಾಡಿನ ಸಾಹಿತ್ಯ, ಚಿತ್ರೀಕರಣವಾದ ಶೈಲಿ, ಅದಕ್ಕೆ ಆಯ್ಕೆ ಮಾಡಿಕೊಂಡ ಸುಂದರ ಸ್ಥಳಗಳು, ಖರ್ಚು ಮಾಡಿರುವ ರೀತಿ ನೋಡಿದರೆ *ನಿನದೇ ನೆನೆಪು* ಆಲ್ಬಂ ಸಾಂಗ್ ಕನ್ನಡದಲ್ಲಿ ನಂ. ಒನ್ ಸ್ಥಾನದಲ್ಲಿ ನಿಲ್ಲಬಹುದು, ಅಷ್ಟು ಸುಂದರ ಮತ್ತು ಮಧುರವಾಗಿದೆ.