ಡಾ.ರಾಜ್ಕುಮಾರ್ಅಕಾಡೆಮಿಯ ಲರ್ನಿಂಗ್ಆಪ್ ಲೋಕಾರ್ಪಣೆ
‘ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸ್‌ಅಕಾಡಮಿ’ಯಲ್ಲಿ ಹಲವು ವಿದ್ಯಾರ್ಥಿಗಳು ತರಭೇತಿ ಪಡೆದುಕೊಂಡುಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಇದೇಅಕಾಡೆಮಿದಿಂದ ಲರ್ನಿಂಗ್‌ಆಪ್‌ವೊಂದು ಬಿಡುಗಡೆಯಾಗಿದೆ.ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಫಾರ್ಮಲ್ ಶಿಕ್ಷಣ ಮುಖ್ಯವಾಗಿರುವುದಿಲ್ಲ. ಅದಕ್ಕಿಂತಲೂಜ್ಘಾನ ಮುಖ್ಯ.ಪುನೀತ್‌ರಾಜ್‌ಕುಮಾರ್‌ಉನ್ನತ ವ್ಯಾಸಾಂಗ ಮಾಡಿಲ್ಲದಿದ್ದರೂ, ಅವರಲ್ಲಿಅಪಾರಜ್ಘಾನವಿದೆ.ಶಿಕ್ಷಣಕ್ಕಿಂತ ಜ್ಘಾನ ಮುಖ್ಯ.ನೀವು ಐಕಾನ್‌ಎಂದು ಶ್ಲಾಘಿಸಿದರು.ಡಾ.ರಾಜ್‌ಕುಮಾರ್‌ಎಂದರೆಅದೊಂದು ಶಕ್ತಿ.ಸಾಧಕನಿಗೆ ಸಾವು ಅಂತ್ಯವಿಲ್ಲವೆಂದುಸ್ವಾಮಿ ವಿವೇಕಾನಂದ ಹೇಳಿದ್ದರು.ಸಾಧಕ ಸಾವಿನ ನಂತರ ಬದುಕಿರುತ್ತಾನೆಎಂಬುದಕ್ಕೆ ಸಾಕ್ಷಿಇವರುಆಗಿರುತ್ತಾರೆ.
ಸಾಧನೆ ಮಾಡಬೇಕು.ಆಗ ಮಾತ್ರ ನಾವುಗಳು ಸಾವಿನ ನಂತರವೂಜೀವಂತವಾಗಿರಲು ಸಾಧ್ಯ.ಡಾ.ರಾಜ್ ಕೇವಲ ಸ್ಟಾರ್ ನಟರಾಗಿರಲಿಲ್ಲ. ಅದಕ್ಕಿಂತಲೂ ಮೀರಿದಗುಣವೊಂದಿತ್ತು. ಜ್ಘಾನದಕ್ಷೇತ್ರಕ್ಕೆಡಾ.ರಾಜ್‌ಕುಮರ್ ಲರ್ನಿಂಗ್‌ಆಪ್ ಸೇರಿದೆ. ಇದುದೊಡ್ಡ ಸಾಧನೆಎಂದು ಸಿಎಂ ಹೇಳಿದರು.ಇದೇ ಸಂದರ್ಭದಲ್ಲಿರಾಘವೇಂದ್ರರಾಜ್‌ಕುಮಾರ್‌ದಂಪತಿ, ಯುವರಾಜ್‌ಕುಮಾರ್‌ಇತರರು ಉಪಸ್ತಿತರಿದ್ದರು.