ಯಜಮಾನರು ನನಗಿಂತ ಮುಂಚೆ ಹೋದರು–ಡಾ.ಭಾರತಿವಿಷ್ಣುವರ್ಧನ್
ಯಜಮಾನರ ಮಡಿಲಲ್ಲಿ ಮಲಗಿ ನಾನು ಹೊರಟು ಹೋಗಬೇಕು ಎಂದುಯಾವಾಗಲೂ ಹೇಳುತ್ತಿದ್ದೆ.ಆದರೆಅವರು ಬುದ್ದಿವಂತರು.ನನ್ನ ತೋಳಲ್ಲಿ ಮಲಗಿಕೊಂಡುಎದ್ದು ಹೋದರುಎಂದುಡಾ.ಭಾರತಿವಿಷ್ಣುವರ್ಧನ್ ಹೇಳುತ್ತಾ ಹೋದರು. ಅಳಿಯ,ನಟ ಅನಿರುದ್ದ ನಿರ್ದೇಶನ ಮತ್ತು ನಿರ್ಮಾಣದ ‘ಬಾಳೆ ಬಂಗಾರ’ ಸಾಕ್ಷಚಿತ್ರ ಪ್ರದರ್ಶನ ನಂತರ ಮಾದ್ಯಮದಎದುರು ಅಂತರಾಳದ ವಿಷಯಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು. ನಾನು, ವಿಷ್ಣುವರ್ಧನ್ ಸ್ಟಾರ್‌ಗಳು ಆಗಿದ್ದವರು.ಆದರೆಒಂದುಕಾಲದಲ್ಲಿಗಂಜಿಕುಡಿದುಆರು ತಿಂಗಳು ಬದುಕಿದ್ದೇವೆ. ಯಜಮಾನರಿಗೆ ಅವಕಾಶಗಳು ಇಲ್ಲದ ಸಮಯದಲ್ಲಿಡ್ರೈವಿಂಗ್ ಕೆಲಸಕ್ಕೆ ಮುಂದಾಗಿದ್ದರು.ನಮ್ಮ ಬಳಿ ಇದ್ದ ಬೆಂಜ್‌ಕಾರನ್ನುಟ್ರಾವೆಲ್ಸ್‌ಗೆ ಜೋಡಿಸಿ ಕಾರುಓಡಿಸುತ್ತೇನೆಎಂದು ಹೇಳಿದ್ದು ಉಂಟು.ಅದಕ್ಕೆ ನಾನು ಇಲ್ಲವೆಂದು ಹೇಳಿರಲಿಲ್ಲ. ಮಾರನೇ ದಿನ ‘ಹೊಂಬಿಸಿಲು’ ಚಿತ್ರದ ನಿರ್ಮಾಪಕರು ಮುಂಗಡಕೊಟ್ಟರು.ದೇವರು ಕೈ ಬಿಲಿಲ್ಲ.
ಮದುವೆಗೂ ಮೊದಲುಕನ್ನಡ ಸೇರಿದಂತೆ ಹಿಂದಿ,ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಳ್ಲಿ ದಿನದ ೨೪ ಗಂಟೆ ಕೆಲಸ ಮಾಡಿದ್ದೇನೆ. ‘ನಾಗರಹಾವು’ ಬಿಡುಗಡೆ ಸಂದರ್ಭದಲ್ಲಿ ನಾನಾಗಲೇ ೧೦೦ ಚಿತ್ರದಲ್ಲಿ ನಟಿಸಿದ್ದೆ. ಆಗಒಂದ್ಸಲ ನನ್ನ ಭೇಟಿ ಮಾಡಲು ಬಂದಿದ್ದರು.ನೂರು ದಿನದಕಾರ್ಯಕ್ರಮಕ್ಕೆಆಹ್ವಾನ ನೀಡಿದ್ದರು, ಆಮೇಲೆ ಅವರಜೊತೆ ನಟಿಸುವ ಅವಕಾಶ ಒದಗಿಬಂತು.ಅವರೊಂದಿಗೆ ನಟಿಸಿದ ಮೊದಲ ಚಿತ್ರ ‘ಮನೆ ಬೆಳಗಿದ ಸೋಸೆ’.ಅಂದಿನಿಂದ ನಮ್ಮಿಬ್ಬರ ನಂಟು ಹೆಚ್ಚಾಯಿತು.
ಮದುವೆ ದಿನ ಮಾತನಾಡಿದ ಭಾರತಿ ‘ನಮ್ಮ ಮದುವೆ ದಿನ ಭಾರಿ ಅಭಿಮಾನಿಗಳು ಸೇರಿದ್ದರು.ನಮಗೆ ಊಟ ಕೂಡ ಮಾಡಲಾಗಿರಲಿಲ್ಲ. ಅಷ್ಟು ಜನ ಸೇರಿದ್ದರು.ಜನರಿಂದ ತಪ್ಪಿಸಿಕೊಳ್ಳಲು ತಾಳಿ ಕಟ್ಟಿದ ಮೇಲೆ ಹಿಂದಿನ ಬಾಗಿಲಿನಿಂದ ನಮ್ಮನ್ನು ಕಳುಹಿಸಲಾಯಿತು.ಆರತಕ್ಷತೆ ಸಂದರ್ಭದಲ್ಲಿ ಮಹಡಿಯಲ್ಲಿ ನಿಂತು ಕೈಬೀಸುತ್ತಿದ್ದ ವೇಳೆ ನಮ್ಮ ಮೇಲೆ ಕಲ್ಲುತೂರಾಟ ನಡೆದಿತ್ತು.ನಾವು ಮದುವೆಯಾದರೆಲ್ಲಅಂತ ಹೊಟ್ಟೆಕಿಚ್ಚಿಗೆಯಾರೋಕಲ್ಲು ಹೊಡೆದರು ಅನಿಸುತ್ತೆ. ಸಾಕ್ಷಚಿತ್ರ ಪ್ರದರ್ಶನದಲ್ಲಿ ನಾಗತ್ತಿಹಳ್ಳಿಚಂದ್ರಶೇಖರ್, ಟಿ.ಎಸ್.ನಾಗಭರಣ, ಎಸ್.ನಾರಯಣ್, ಕವಿತಾಲಂಕೇಶ್, ಹೇಮಾಚೌದರಿ, ಶೃತಿ, ಸುಧಾರಾಣಿ ಮುಂತಾದವರು ಹಾಜರಿದ್ದರು.