ಮಕ್ಕಳ ಈಗಿನ ವಿದ್ಯಾಭ್ಯಾಸದ ಬಗ್ಗೆ ಹೇಳಲಿದೆ "ಆನ್ ಲೈನ್ ಕ್ಲಾಸ್".
RAP SONG ಮೂಲಕ ಹೇಳುತ್ತಿದ್ದಾರೆ RAPER ಗಜೇಂದ್ರ ಗುರು.
ಪ್ರಖ್ಯಾತ ಡಿಸೈನರ್ ಲಕ್ಷ್ಮೀಕೃಷ್ಣ ಪುತ್ರ ವಿಯಾನ್ ಕೃಷ್ಣ ಪ್ರಮುಖಪಾತ್ರದಲ್ಲಿ ನಟನೆ.
ಕೊರೋನ ಬಂದ ಮೇಲೆ ಹೆಚ್ಚಿನ ಪರಿಣಾಮ ಬೀರಿರುವುದು ಮಕ್ಕಳ ವಿದ್ಯಾಭ್ಯಾಸದ ಮೇಲೆ. ಮಕ್ಕಳು ಶಾಲೆ ಮುಖ ನೋಡಿ ವರ್ಷಗಳೇ ಕಳೆದಿದೆ. ಆನಲೈನ್ ಕ್ಲಾಸ್ ಗೆ ಮಕ್ಕಳು ಮೊರೆ ಹೋಗಿದ್ದಾರೆ. ಅದರಿಂದ ಆಗುವ ಪರಿಣಾಮವನ್ನು ಹಾಡಿನ ಮೂಲಕ ಹೇಳ ಹೊರಟಿದ್ದಾರೆ Raper ಗಜೇಂದ್ರ ಗುರು.
ಈ ಹಿಂದೆ ಗಜೇಂದ್ರ ಗುರು ಅವರು ಮೈಸೂರಿನ ಬಗ್ಗೆ ಮಾಡಿದ್ದ rap song ಕೂಡ ಭಾರೀ ಹಿಟ್ ಆಗಿತ್ತು.
ಪ್ರಸ್ತುತ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕುರಿತಾಗಿರುವ " ಆನ್ ಲೈನ್ ಕ್ಲಾಸ್" ಹೆಸರಿನ ಈ rap song, "ಏನಪ್ಪ ಗತಿ ಬಂತು ವಿದ್ಯಾರ್ಥಿಗಳಿಗೆ" ಎಂದು ಆರಂಭವಾಗುತ್ತದೆ.
ರಂಗನಾಯಕಿ, ಅಮೃತಮತಿ, ಗಿಫ್ಟ್ ಬಾಕ್ಸ್ ಸೇರಿದಂತೆ ಕನ್ನಡದ 70ಕ್ಕೂ ಅಧಿಕ ಚಲನಚಿತ್ರಗಳಿಗೆ ಪ್ರಚಾರಕಲೆ(ಡಿಸೈನರ್) ನೀಡಿರುವ ಲಕ್ಷ್ಮೀ ಕೃಷ್ಣ ಪುತ್ರ ವಿಯಾನ್ ಕೃಷ್ಣ ಈ ಸಾಂಗ್ ನ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಲಕ್ಷ್ಮೀ ಕೃಷ್ಣ ಹಾಗೂ ಅವರ ಪತಿ ಕೃಷ್ಣಕಾಂತ್ ರವಿ ಕೂಡ ಮಗನ ಜೊತೆ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ದಿಶಾ ರವಿ, ರೋಹನ್, ಸಿಂಚನ ಮುಂತಾದವರ ಅಭಿನಯ ಕೂಡ ಈ ಹಾಡಿನಲ್ಲಿದೆ.
ಶಶಿಕುಮಾರ್ ಮಂಡ್ಯ ನೋಡಬಹುದು ಈ ಸಾಂಗ್ ಅನ್ನು ಮುದಸೀರ್ ಅಹ್ಮದ್ ನಿರ್ಮಿಸಿದ್ದಾರೆ. ಶ್ರೀಮೂರ್ತಿ ಛಾಯಾಗ್ರಹಣವಿದ್ದು, ಮನು ರಾವ್ ಸಂಗೀತ ನೀಡಿದ್ದಾರೆ.