ಮನಸ್ಸಿನಲ್ಲಿ ಪ್ರೀತಿ ಹುಟ್ಟಿಕೊಳ್ತದೆ
ಪ್ರೀತಿಕುರಿತಂತೆ ಸಾಕಷ್ಟು ಸಿನಿಮಾಗಳು ಬಂದಿವೆ. ಆ ಸಾಲಿಗೆ ‘ಮನಸಾಗಿದೆ’ ಚಿತ್ರವು ಸೇರಿಕೊಳ್ಳುತ್ತದೆ.ಹಾಗಂತಇದುಅದೇರೀತಿಇರುತ್ತದೆಂದು ಹೇಳಲಾಗದು.ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ಶ್ರೀನಿವಾಸ್‌ಶಿಡ್ಲಘಟ್ಟ ಹೇಳುವಂತೆ ಹೆಸರಿಗೆತಕ್ಕಂತೆಇದರಲ್ಲಿ ಲವ್ ಜೊತೆಗೆ ಸೆಸ್ಪನ್ಸ್, ಥ್ರಿಲ್ಲರ್ ಮತ್ತುಅಕ್ಷನ್‌ಇರಲಿದ್ದು ವಿನೂತನವಾಗಿತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರೀತಿ ಮತ್ತು ಮನುಷ್ಯತ್ವದ ಸಂಘರ್ಷಒಂದು ಏಳೆಯ ಕತೆಯಾಗಿದೆ.ಇವರೆಡರನ್ನುತಕ್ಕಡಿಯಲ್ಲಿ ಹಾಕಿ ತೂಗಿದಾಗಯಾವುದು ಮೇಲಕ್ಕೆ ಹೋಗುತ್ತದೆ.
ಆತಯಾವುದನ್ನುಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದನ್ನುತೋರಿಸಲಾಗುತ್ತಿದೆ.ಕಾಲೇಜು ವಿದ್ಯಾರ್ಥಿಯಾಗಿಅಭಯ್ ನಾಯಕನಾಗಿ ಹೊಸ ಅನುಭವ. ಮೇಘಶ್ರೀ ಹಾಗೂ ಟಿಕ್‌ಟಾಕ್‌ಖ್ಯಾತಿಯಅತಿರ ನಾಯಕಿಯರು.ಕಾಮಿಡಿ ಪಾತ್ರದಲ್ಲಿತೇಜಸ್. ರಿಯಲ್‌ದಲ್ಲಿ ಸತಿ ಪತಿ ಗಳಾಗಿರುವ ಸುರೇಶ್‌ರೈ-ಭವ್ಯಶ್ರೀರೈರೀಲ್‌ದಲ್ಲೂಅದೇ ಪಾತ್ರದಲ್ಲಿ ನಟಿಸಿದ್ದಾರೆ.ಉಳಿದಂತೆ ಶಂಖನಾದಅರವಿಂದ್, ಕಾಮಡಿ ಕಿಲಾಡಿಗಳು ಕಲಾವಿದರಅಭಿನಯವಿದೆ.
ಬೆಂಗಳೂರು ಮತ್ತು ಚಿಕ್ಕಮಗಳೂರು ೪೦ ದಿನಗಳ ಕಾಲ ಚಿತ್ರೀಕರಣ ನಡೆದಿದೆ.ಡಾ.ನಾಗೇಂದ್ರಪ್ರಸಾದ್, ಕವಿರಾಜ್, ಅರಸುಅಂತಾರೆ, ಮಜಾಟಾಕೀಸ್‌ಖ್ಯಾತಿಯರೆಮೋ ಸಾಹಿತ್ಯದ ಗೀತೆಗಳಿಗೆ ಮಾನಸಹೊಳ್ಳ ಸಂಗೀತ, ಸಂಭಾಷಣೆರಘುನಿಡುವಳ್ಳಿ, ಛಾಯಾಗ್ರಹಣ ಶಂಕರ್, ಸಂಕಲನ ಶಿವಪ್ರಸಾದ್‌ರೆಡ್ಡಿ, ಸಾಹಸ ಡಾ.ಥ್ರಿಲ್ಲರ್‌ಮಂಜು, ನೃತ್ಯಗಂಗಂರಾಜುಅವರದಾಗಿದೆ. ಇಬ್ಬರು ಪುತ್ರರನ್ನುಚಿತ್ರರಂಗಕ್ಕೆ ಪರಿಚಯಿಸುವ ಸಲುವಾಗಿ ತೇಜಸ್‌ಕ್ರಿಯೇಶನ್ಸ್ ಮೂಲಕ ನಿರ್ಮಾಣ ಮಾಡುತ್ತಿರುವಉದ್ಯಮಿಎಸ್.ಚಂದ್ರಶೇಖರ್‌ಕತೆ ಬರೆದು ಮಹತ್ವದಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸರ್ಕಾರವು ಶೇಕಡ ೧೦೦ ಆಸನ ಅನುಮತಿ ನೀಡಿದಾಗ ಬಿಡುಗಡೆ ಮಾಡುಲಾಗುವುದುಎಂದುತಂಡವು ಹೇಳಿಕೊಂಡಿದೆ.