O SHOW.Film Press Meet

Tuesday, August 31, 2021

438

 

ಚಿತ್ರರಂಗದ ಕತೆ ಹೇಳಲಿದೆ ’ಓಶೋ’ ಚಿತ್ರ

 

ಇದು ಓಶೋ ರಜನೀಶ್ ಕತೆಯಲ್ಲ. ಆದರೆ ಓಶೋ ಎನ್ನುವ ವ್ಯಕ್ತಿಯ ಬದುಕಿಮ ಫಿಲಾಸಫಿ ಹೇಳುವ ಕತೆಯಾದ ಕಾರಣ ’ಓಶೋ’ ಎಂದು ಹೆಸರಿಟ್ಟಿದ್ದೇನೆ ಎಂದರು ನಿರ್ದೇಶಕ ಜಿಯಾ ಉಲ್ಲಾ ಖಾನ್.

 

ಚಿತ್ರದಲ್ಲಿ ಕಥಾನಾಯಕ ಓಶೋ ಒಬ್ಬ ಸಿನಿಮಾ ಸಹಾಯಕ ನಿರ್ದೇಶಕ. ಅವನು ನಿರ್ದೇಶನದ ಅವಕಾಶಕ್ಕಾಗಿ ಎಲ್ಲಾ ಕಡೆ ಕೇಳಿಕೊಂಡು ಅಲೆಯುವಾಗ ಯಾರು ಕೂಡ ಅವಕಾಶ ನೀಡುವುದಿಲ್ಲ. ಆಗ ಅವನು ಟ್ರೇಲರ್‌ ಒಂದನ್ನು ಶೂಟ್ ಮಾಡುತ್ತಾನೆ. ಅದನ್ನು ನೋಡಿದ ನಿರ್ಮಾಪಕರೊಬ್ಬರು ಅವನಿಗೆ ಸಿನಿಮಾ ಮಾಡಲು ಅವಕಾಶ ನೀಡುತ್ತಾರೆ. ಓಶೋ ಸಿನಿಮಾ ಮಾಡಲು ಹೊರಡುತ್ತಾನೆ. ಅವನು ಮಾಡೋ ಸಿನಿಮಾದಲ್ಲಿ ಸಮಾಜದ ಹತ್ತು ಹಲವು ವಿಷಯಗಳಿಗೆ ಬೆಳಕು ಚೆಲ್ಲುತ್ತಾನೆ. ಜೀವನ ಪ್ರೀತಿ, ಸಂಬಂಧಗಳನ್ನು ಯಾವ ರೀತಿ ನಿಭಾಯಿಸುತ್ತಾ ಹೋಗಬೇಕೆಂದು ಮನದಟ್ಟು ಮಾಡಿಸುವ ಸಂಭಾಷಣೆ, ಹಲವಾರು ತಿರುವುಗಳಿಂದ ಕೂಡಿರುವ ಸಿನಿಮಾವೇ ಓಶೋ.

ಎ.ಆರ್. ಮೋಷನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ರಮೇಶ್ ಗ್ಯಾನಗೌಡರ್, ಅನಂತ, ಇಟಗಿ ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವವರು ಜಿಯಾಉಲ್ಲಾ ಖಾನ್. ಅವರು ಈ ಹಿಂದೆ ನಿರ್ದೇಶಕ ಜೋಗಿ ಪ್ರೇಮ್ ಅವರೊಂದಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ ಅನುಭವ ಇರುವುದಾಗಿ ತಿಳಿಸಿದರು. ಸ್ವತಂತ್ರ ನಿರ್ದೇಶಕರಾಗಿ ಇದು ಅವರಿಗೆ ಪ್ರಥಮ ಚಿತ್ರ.

 

ಚಿತ್ರದ ನಾಯಕ ಆನಂದ್ ಇಟಗಿಯವರಿಗೂ ಇದು ಪ್ರಥಮ ಸಿನಿಮಾ. ಆದರೆ ರಂಗಭೂಮಿಯಲ್ಲಿ ನಟಿಸಿರುವ ಅನುಭವ ಅವರಿಗೆ ಇದೆ. ಚಿತ್ರದಲ್ಲಿ ಆನಂದ್ ಜೋಡಿಯಾಗಿ ಕಾಣಿಸಿರುವ ದೀಪಶ್ರೀ ಗೌಡ ಅವರಿಗೂ ಇದು ಪ್ರಥಮ ಸಿನಿಮಾ.

 

ಚಿತ್ರದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಖ್ಯಾತ ನಿರ್ದೇಶಕ ಬಿ.ಎಮ್ ಗಿರಿರಾಜ್ ಅವರು ಕೂಡ ಚಿತ್ರದಲ್ಲಿ ತಾವು ಒಂದು ದೃಶ್ಯದಲ್ಲಿ ಕಾಣಿಸಿಕೊಳ್ಳಲಿರುವುದಾಗಿ ಹೇಳಿದರು. ಆದರೆ ಅದು ಸೆನ್ಸಾರ್ ಆಫೀಸರ್ ಪಾತ್ರವಾಗಿರುವ ಕಾರಣ ಚಿತ್ರದಲ್ಲಿ ಪ್ರಧಾನ ಸ್ಥಾನ ಪಡೆಯುತ್ತದೆ ಎಂದು ತಿಳಿದು ಬಂದಿದೆ. ಉಳಿದಂತೆ ಕರಿಸುಬ್ಬು,  ಮಧುಗಿರಿ ಪ್ರಕಾಶ್ ಮೊದಲಾದವರು ಚಿತ್ರದಲ್ಲಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಚಿತ್ರದ ಹಾಡು ಮತ್ತು ಟ್ರೇಲರ್ ಪ್ರದರ್ಶನ ಮಾಡಲಾಯಿತು.

Copyright@2018 Chitralahari | All Rights Reserved. Photo Journalist K.S. Mokshendra,