Hedaradiru O Manase.Video Song

Monday, June 28, 2021

242

 

"ಹೆದರದಿರು ಓ ಮನಸೇ..."

 

"ಕೊರೋನಾ ಮೆಟ್ಟು ನಿಲ್ಲೋಣ ಕೊರೋನಾ ಸುಟ್ಟು ಸಾಗೋಣ"

 

ಕರೋನ ದಿಂದಾಗಿ ಲಾಕ್ ಡೌನ್ ಆಗಿ ಚಿತ್ರರಂಗ ಸಂಪೂರ್ಣ ಸ್ಥಗಿತಗೊಂಡು ಹೆಚ್ಚು ಕಮ್ಮಿ ಎರಡುವರೆ ತಿಂಗಳಗಿತ್ತು. ಈಗ ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಂಡು ಒಂದೊಂದೆ ಉದ್ಯಮಗಳು ಬಾಗಿಲು ತೆಗೆದು ಧೂಳು ಕೊಡವಿಕೊಂಡು ನಿತ್ಯ ಜೀವನಕ್ಕೆ ಸಿದ್ಧವಾಗುತ್ತಿವೆ.

ಇಂತಹ ಸಂಧರ್ಭದಲ್ಲಿ ಸಿನಿಮಾ ಮಾಧ್ಯಮ  ಕೂಡ ಹೊರತೇನಲ್ಲ .

ಇಂದು ಎರಡು ಮಾಧ್ಯಮಗೋಷ್ಠಿ ಶುರುವಾಗಿದ್ದು  ಬಹಳ ದಿನಗಳ ನಂತರ ಮಾಧ್ಯಮ ಮಿತ್ರರು ಒಟ್ಟಿಗೆ ಸೇರಿದ್ದು ಒಂದು ಸಂತಸದ ವಿಷಯ.

ಇಂದು ನಡೆದ ಮಾಧ್ಯಮಗೋಷ್ಠಿ ಯಲ್ಲಿ

ನಟ, ನಿರ್ಮಾಪಕ, ಗೋಪ್ರೇಮಿ ಉದ್ಯಮಿ ಮಹೇಂದ್ರ ಮುನ್ನೋತ್ ರವರು 

ಎರಡು ಹಾಡುಗಳನ್ನು ಬಿಡುಗಡೆ ಮಾಡಿದರು.

 

ಮಹೇಂದ್ರ ಮುನ್ನೋತ್

ಬಹಳ ಹಿಂದಿನಿಂದಲೂ ಸಮಾಜ ಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.

ಬಡವರಿಗೆ ಔಷಧಿ, ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಆಟೋ ಚಾಲಕರಿಗೆ ಸಮವಸ್ತ್ರ ಹಾಗೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ಕಳೆದ ವರ್ಷದಿಂದ ಕರೋನ ಸಂಕಷ್ಟಕ್ಕೆ ಸಿಲುಕಿ  ನಲುಗಿದ ಸಾವಿರಾರು ಕುಟುಂಬಗಳಿಗೆ ನಿತ್ಯ ಅನ್ನ ದಾಸೋಹ ಮಾಡುವುದರ ಜೊತೆಗೆ ಗೋಶಾಲೆ ಗಳಿಗೆ ಲಕ್ಷಾಂತರ ರೂಪಾಯಿಗಳ ದೇಣಿಗೆ ನೀಡಿದ್ದಾರೆ.

 

ಹಾಗೆಯೇ ಕರೋನ ದಿಂದಾಗಿ ಸೃಷ್ಟಿಯಾಗಿರುವ ಸಂಕಷ್ಟಕ್ಕೆ ಸಿಲುಕಿದ ಮಾನವ ಸಂಕುಲಕ್ಕೆ ಧೈರ್ಯ ಹೇಳಿ ಸಾಂತ್ವಾನ ಹೇಳುವಂತ ಗೀತೆಯೊಂದನ್ನು ಇಂದು ಲೋಕಾರ್ಪಣೆ ಮಾಡಿದರು.  "ಹೆದರದಿರು ಓ ಮನಸೇ" ಎನ್ನುವ ಈ ಹಾಡಿಗೆ

ನಿರ್ದೇಶಕ ಹರಿಹರನ್ ಆಕ್ಷನ್ ಕಟ್ ಹೇಳಿದರೆ ಎ.ಟಿ. ರವೀಶ್ ರವರ ಸಂಗೀತಕ್ಕೆ  ರೇವಣ್ಣ ನಾಯಕ್ ಸಾಹಿತ್ಯ ಬರೆದಿದ್ದಾರೆ.

ವಿನಾಯಕ  ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹಾಡಿದವರು ಸಚಿನ್ ಎಸ್ ನಗರ್ತ

ಸಂಕಲನ ಸಂಯುಕ್ತ ಸ್ಟುಡಿಯೋ ಮುತ್ತುರಾಜ್

ವಿನ್ಯಾಸ ದೇವು

ವರ್ಣಾಲಂಕಾರ ಚೇತನ್ ಲಗ್ಗೆರೆ ಇವರೆಲ್ಲರ ಶ್ರಮದಿಂದಾಗಿ

ಆನಂದ್ ಸಿನೆಮಾಸ್ ರವರ ಪೂರಿಕಾಮೃತ ಕ್ರಿಯೇಷನ್ಸ್ ಅರ್ಪಿಸುವ ಹೆದರದಿರು ಓ ಮನಸೆ ಕೊರೊನಾ ಆಲ್ಬಂ ಸಾಂಗ್  ಅನ್ನು ಕರ್ನಾಟಕ ಚಲನ ಚಿತ್ರ ಅಧ್ಯಕ್ಷರಾದ ಜಯರಾಜ್ ಹಾಗೂ ಮಾಜೀ ಕಾರ್ಯದರ್ಶಿಗಳಾದ ಭಾಮಾ ಹರೀಶ್ ರವರ ಜೊತೆಗೂಡಿ ಈ ಹಾಡು ಲೋಕಾರ್ಪಣೆ ಮಾಡಿದರು.

ಇದು ನಟ, ನಿರ್ಮಾಪಕ ಮಹೇಂದ್ರ ಮುನ್ನೋತ್ ರವರ ನಿತ್ಯ ಜೀವನದ ಸಮಾಜ ಮುಖಿ ಕಾರ್ಯವನ್ನು ಬಿಂಬಿಸಿದೆ ಹಾಗೂ ಮುನ್ನೋತ್ ರವರು ನೈಜವಾಗಿ ಅಭಿನಯಿಸಿದ್ದಾರೆ.

 

 ಹಾಗೇ ಇದೇ ಸಂಧರ್ಭದಲ್ಲಿ ಕಳೆದ ವರ್ಷ ನಿರ್ಮಿಸಿದ ಆತ್ಮ‌ನಿರ್ಭರ ಭಾರತ ಎನ್ನುವ ಗೀತೆಯನ್ನು ಸಿದ್ದಪಡಿಸಿದ್ದು ಅದನ್ನೂ ಕೂಡ  ಈ ಸಂಧರ್ಭದಲ್ಲಿ ಬಿಡುಗಡೆ ಗೊಳಿಸಿದರು.

 

ಗಜೇಂದ್ರ ನಿರ್ದೇಶನದಲ್ಲಿ ಹಾಗೂ ವಿಜಯಕೃಷ್ಣ ರವರ ಸಂಗೀತದಲ್ಲಿ

ಮೂರು ರಾಯರ ಗಂಡ ರವರ ಸಾಹಿತ್ಯದಲ್ಲಿ ಈ ಗೀತೆ ಮೂಡಿ ಬಂದಿದೆ.

ಹಾಡಿರುವವರು ತೇಜಸ್ವಿ ಹರಿ ಪ್ರಸಾದ್ ಸಂಕಲನ   ಶ್ರೀ ಜವಳಿ ಯವರದ್ದು.

 

ಕೊರೋನಾ ಸಮಯದಲ್ಲಿ ಜನರಿಗಾಗಿ ಜೀವ ಪಣವಿಟ್ಟು ದುಡಿದವರ ಬಗ್ಗೆ ಹಾಗೂ ಅವರಿಗೆ ಗೌರವ ಸಲ್ಲಿಸುವಂತ

ಈ ಗೀತೆಯನ್ನು ಕೊರೋನ ವಾರಿಯರ್ಸ್ ಗಳಿಗೆ ಅರ್ಪಣೆ ಮಾಡಿದ್ದಾರೆ.

 

ಈ ಹಾಡಿನಲ್ಲಿ ಮಹೇಂದ್ರ ಮುನ್ನೋತ್ ಹಲವಾರು ರೀತಿಯ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,