ಹೊಸ ಪ್ರತಿಭೆಗಳ ಮಾಸ್ಟರ್ ಮೈಂಡ್
ಹೊಸ ಪ್ರತಿಭೆಗಳೇ ಸೇರಿಕೊಂಡು ‘ಮಾಸ್ಟರ್ ಮೈಂಡ್’ ಎನ್ನುವ ಮೂವತ್ತೆರಡು ನಿಮಿಷದಚಿತ್ರವೊಂದನ್ನು ಸಿದ್ದಪಡಿಸಿದ್ದಾರೆ.ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿರುವುದು ವಿಶೇಷ. ಬುದುವಾರದಂದು ಮಾದ್ಯಮದವರಿಗೆಚಿತ್ರವನ್ನುತೋರಿಸಲಾಯಿತು. ಕತೆ,ಚಿತ್ರಕತೆ,ಸಂಭಾಷಣೆ,ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವ ಎ.ವಿ.ಸುರೇಶ್ ಮಾತನಾಡಿಚಿತ್ರರಂಗದಲ್ಲಿ ಮೊದಲಬಾರಿಗೆ ವಿನೂತನ ಪ್ರಯತ್ನ ಎ.ವಿ.ಸುರೇಶ್‌ಡೈರಕ್ಟರ್‌ಪಿಪಿಎಂ (ಪ್ರೊಡ್ಯುಸರ್ ಪ್ರಮೋ ಮೂವೀ) ಜಾನರ್‌ಶುರು ಮಾಡಲಾಗಿದೆ. ಹೊಸಬರುಚಿತ್ರ ಮಾಡಿದ ನಂತರ ಏನು ಮಾಡಬೇಕು, ಯಾರಿಗೆತೋರಿಸಬೇಕುಇತ್ಯಾದಿ ಗೊಂದಲದಲ್ಲಿಇರುತ್ತಾರೆ.
ಅಂತಹವರುಸಿನಿಮಾವನ್ನುಆನಂದ್‌ಆಡಿಯೋಸಂಸ್ಥೆಗೆ ಕೊಡುವಾಗ ಪಿಪಿಎಂ ಜಾನರ್‌ಅಡಿಯಲ್ಲಿ ಪ್ರಸಾರ ಮಾಡಲು ಕೋರಿಕೊಳ್ಳಬೇಕಾಗುತ್ತದೆ.ಅವರುಅದೇ ವಿಭಾಗದಯೂಟ್ಯೂಬ್‌ದಲ್ಲಿಅಳವಡಿಸುತ್ತಾರೆ. ಇದನ್ನು ನೋಡಿದ ನಿರ್ಮಾಪಕರುಚಿತ್ರಕ್ಕೆ ಬಂಡವಾಳವೂಡಲು ಮುಂದೆ ಬರುವರೆಂಬ ಇದನ್ನು ಮಾಡಲಾಗಿದೆ. ಮುಂದೆ ಬರುವತಂತ್ರಜ್ಘರು, ಕಲಾವಿದರುಗಳಿಗೆ ಅವಕಾಶ ಸಿಕ್ಕಂತೆ ಆಗುತ್ತದೆಂದುಮಾಹಿತಿ ನೀಡಿದರು.
ಅತಿಥಿಯಾಗಿ ಆಗಮಿಸಿದ್ದ ಉಮೇಶ್‌ಬಣಕಾರ್ ಹೇಳುವಂತೆ ಪಿಪಿಎಂ ಯೋಜನೆಯನ್ನುಯಾರುಇಲ್ಲಿಯವರೆಗೂ ಮಾಡಿಲ್ಲ. ತಾವು ಹೊಸದಾಗಿ ಬರುವವರಿಗೆ ಮಾರ್ಗದರ್ಶನವನ್ನುಇದರ ಮೂಲಕ ಕೊಡುತ್ತಿರುವುದು ಸಂತಸದ ವಿಷಯ.ಮುಂದೆಕನಿಷ್ಟ ೯೧ ನಿಮಿಷದ ವರೆಗೆಚಿತ್ರ ಮಾಡಿರಿಎಂದು ಸಲಹೆ ನೀಡಿದರು.
ಸಿಂಹಬಲ ಮತ್ತುಮಾಸ್ಟರ್ ಮೈಂಡ್‌ಎನ್ನುವಇಬ್ಬರು ರೌಡಿಗಳ ರಾಜಕೀಯದೊಂಬರಾಟಜೊತೆಗೆ ಮಹಿಳಾ ಪ್ರಧಾನ ಅಂಶಗಳು ಮಿಶ್ರಣಗೊಂಡಿದೆ.ಕ್ಲೈಮಾಕ್ಸ್‌ದಲ್ಲಿ ಭಾಗ-೨ ಬರುವಂತೆಚಿತ್ರಕತೆಯನ್ನುಹಣೆಯಲಾಗಿದೆ.ತಾರಗಣದಲ್ಲಿಅನಂತುವಾಸುದೇವ್, ಹಿಮಾಮೋಹನ್, ಬಲರಾಂ, ಎ.ವಿ.ಸುರೇಶ್, ನಿಹಾಲ್‌ಗೌಡ, ಸದಾನಂದಗೌಡ, ಕುಶಾಲ್ ಮುಂತಾದವರು ನಟಿಸಿದ್ದಾರೆ. ಸಂಗೀತ ಲಲಿತ್‌ಕ್ರಿಷ್, ಛಾಯಾಗ್ರಹಣ ಸಾವದ್.ಎಂ, ಸಂಕಲನ ಹರೀಶ್-ಕೃಷ್ಣಅವರದು.ಬೆಂಗಳೂರು, ದೇವನಹಳ್ಳಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಅಶೋಕ್.ಎನ್.ಶಿಂದೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.