ರಾಷ್ರ್ಟೀಯ ಸಮಸ್ಯೆಗೆ ಲಗಾಮ್ ಪರಿಹಾರ
ಲಾಕ್‌ಡೌನ್ ತೆರೆವುಗೊಳಿಸಿದ ನಂತರಚಂದನವನದಲ್ಲಿ ಚಟುವಟಿಕೆಗಳು ಮರಳಿ ಹಳೇ ಹಾದಿಗೆ ಬರುತ್ತಿದೆ. ಬುದುವಾರದಂದು ‘ಲಗಾಮ್’ ಸಿನಿಮಾದಚಿತ್ರೀಕರಣದ ಸೆಟ್‌ಗೆ ಮಾದ್ಯಮದವರು ಭೇಟಿ ನೀಡಿದ್ದರು. ಬಿಡುವಿನ ವೇಳೆಯಲ್ಲಿ ಮಾತನಾಡಿದಉಪೇಂದ್ರ ಕಳೆದ ಹತ್ತು ದಿನಗಳಿಂದ ಶೂಟಿಂಗ್ ನಡೆಸಲಾಗುತ್ತಿದೆ.ಒಂದುರಾಷ್ಟ್ರೀಯ ಸಮಸ್ಯೆಯ ಬಗ್ಗೆ ಹೇಳಲು ಹೊರಟಿದ್ದೇವೆ. ಸಾಧ್ಯವಾದಷ್ಟುಅದಕ್ಕೊಂದು ಪರಿಹಾರಕೊಡುವ ಪ್ರಯತ್ನ ಮಾಡಲಾಗುತ್ತಿದೆ.ಸಮಸ್ಯೆಅಂದಾಗರಾಜಕೀಯವೆಂದುಅರ್ಥೈಸುವುದು ಬೇಡ.ಎಲ್ಲರನ್ನುಟಚ್ ಮಾಡುವ ವಿಷಯಇರಲಿದೆ.ಅದನ್ನು ಈಗಲೇ ಹೇಳಲಾಗದು.ಸದ್ಯ ಟನೆಯಲ್ಲಿ ಬ್ಯುಸಿ ಇರುವುದರಿಂದ ನಿರ್ದೇಶನ ಮುಂದೆ ನೋಡುವಎಂದರು.
ಪ್ರಮುಖ ದಾಖಲೆಗಳು ಇರುವ ಸೂಟ್‌ಕೇಸ್‌ನ್ನು ಖಳರಿಂದ ರಕ್ಷಿಸಲು ಹೋದಾಗ ಹೊಡೆದಾಟ ಶುರುವಾಗುತ್ತದೆ.ಅದರ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ.ಇದನ್ನು ಮುಗಿಸಿಕೊಂಡು ಮೈಸೂರಿಗೆ ಪ್ರಯಾಣ ಬೆಳಸಲಾಗುವುದು.ಎರಡು ಹಾಡುಗಳಿಗೆ ವಿದೇಶಕ್ಕೆ ಹೋಗುವ ಇರಾದೆಇದೆ. ಪ್ರಸೆಂಟ್ ಮತ್ತು ಫ್ಯೂಚರ್‌ಗೂರಿಲೇಟ್ ಆಗುವ ಅಂಶಗಳು ಬರುತ್ತದೆ. ಎಲ್ಲಾ ಭಾಷೆಗಳಿಗೂ ಸಲ್ಲುವಂತಕತೆಇರುವುದರಿಂದ ಬೇರೆ ಭಾಷೆಗೆಡಬ್ ಮಾಡಲುಚಿಂತನೆ ನಡೆಸಲಾಗುತ್ತಿದೆಎಂದು ನಿರ್ದೇಶಕ ಕೆ.ಮಾದೇಶ್ ಮಾಹಿತಿ ನೀಡಿದರು.
ತನಿಖಾ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಯಾವುದಕ್ಕೂಅಂಜದ ದಿಟ್ಟ ಹುಡುಗಿ. ಹೀರೋಯಾವರೀತಿ, ಕಾರಣಕ್ಕೆ ಭೇಟಿಯಾಗ್ತೇವೆ.ಉಪ್ಪಿ ಸರ್‌ಅವರೊಂದಿಗೆ ಮೊದಲಬಾರಿ ನಟಿಸುತ್ತಿರುವುದು ಸಂತಸತಂದಿದೆ.ಪತ್ರಕರ್ತರು ಹೇಗಿರುತ್ತಾರೆಎಂಬುದನ್ನು ಗಮನಿಸಿ ಅದರಂತೆಅಭಿನಯಿಸುತ್ತಿದ್ದೇನೆ. ಇದಾದ ಮೇಲೆ ಬರಗೂರುರಾಮಚಂದ್ರಪ್ಪನವರ ‘ತಾಯಿಕಸ್ತೂರ್ ಬಾ’ ಆಗಿ ಶೀರ್ಷಿಕೆ ಹೆಸರಿನ ಪಾತ್ರಎನ್ನುತ್ತಾರೆ ಹರಿಪ್ರಿಯಾ.
ಸಾಹಸ ಸಂಯೋಜಕ ಡಾ.ರವಿವರ್ಮ,ಛಾಯಾಗ್ರಾಹಕರಾಜೇಶ್‌ಕಟ್ಟ ಉಪಸ್ತಿತರಿದ್ದರು.ಜಿಜಿ ಫಿಲಿಂಸ್ ಬ್ಯಾನರ್‌ಅಡಿಯಲ್ಲಿ ಎ.ಕೇಶವ, ಎ.ನರಸಿಂಹ ಮತ್ತುಎಂ.ಆರ್.ಗೌಡಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ.