ಹಾಡಿನೊಂದಿಗೆ ಪುರುಷೋತ್ತಮ ಕುಂಬಳಕಾಯಿ
ನೂರ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಜಿಮ್.ಎ.ವಿ.ರವಿ ಮೊದಲ ಬಾರಿ ’ಪುರುಷೋತ್ತಮ’ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೈಸೂರು ಮಹಾರಾಜ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಶೂಟಿಂಗ್‌ಗೆ ಮಾದ್ಯಮದವರನ್ನು ಆಹ್ವಾನಿಸಿತ್ತು. ’ನೂರಾರು ಟೆನ್ಷನ್ ಇದ್ದರೆ ಇರಲಿ ಲೈಫಲ್ಲಿ, ಎಲ್ಲ ಮರೆಸೋ ತಾಕತ್ತು ಐತೆ ಹೆಂಡ್ತಿ ಸಮ್ಲೈಲಲ್ಲಿ’ ಎನ್ನುವ ಹಾಡಿನ ಸಾಲಿನೊಂದಿಗೆ ಚಿತ್ರೀಕರಣಕ್ಕೆ ವಿದಾಯ ಹೇಳಲಾಗಿದೆ. ಎರಡು ಟೇಕ್ ನಂತರ ದೃಶ್ಯವು ಸರಿಯಾಗಿ ಬಂದ ಕಾರಣ ನಿರ್ದೇಶಕರು ಬ್ರೇಕ್ ಅಂದಾಗ ತಂಡವು ಮಾದ್ಯಮದ ಬಳಿ ಬಂದಿತು.
ಕತೆಯ ಸಾರವನ್ನು ಬಿಟ್ಟುಕೊಡದೆ, ಉಳಿದ ಮಾಹಿತಿಗಳನ್ನು ಹಂಚಿಕೊಂಡಿತು. ಕುಟುಂಬ ಸಮೇತ ನೋಡಬಹುದಾದ ಕುತೂಹಲಕರವಾದ ಅಂಶಗಳು ಚಿತ್ರದಲ್ಲಿದೆ. ನಲವತ್ತು ದಿನಗಳ ಕಾಲ ಮೈಸೂರು, ಮಂಗಳೂರು ಮತ್ತು ಉಡುಪಿ ಕಡೆಗಳಲ್ಲಿ ಶೂಟಿಂಗ್ ನಡೆಸಲಾಗಿದೆ.
ರವಿಚಂದ್ರನ್ ಅಭಿನಯದ ’ಅಪೂರ್ವ’ದ ನಾಯಕಿ ಅಪೂರ್ವ ಪತ್ನಿಯಾಗಿ ನಟಿಸಿದ್ದಾರೆ. ಸುಂದರ ಸಂಸಾರ ಹೇಗಿರುತ್ತದೆಂದು ತಿಳಿಸಲು ಸಂಗೀತ ನಿರ್ದೇಶಕ ಶ್ರೀಧರ್‌ಸಂಭ್ರಮ್ ಅವರೊಂದಿಗೆ ಸೇರಿಕೊಂಡು ಸಾಹಿತ್ಯ ರಚಿಸಲಾಗಿದೆ. ವಿಜಯ್‌ರಾಮೇಗೌಡ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ. ರವಿಸ್ ಜಿಮ್ ಪ್ರೊಡಕ್ಷನ್ ಅಡಿಯಲ್ಲಿ ಸಿದ್ದಗೊಂಡಿದೆ. ತಾರಗಣದಲ್ಲಿ ಕ್ರಿಸ್ಟಿಇಮ್ಮಾನುವೇಲ್, ಎ.ವಿ.ಹರೀಶ್, ಮೈಸೂರುಪ್ರಭು ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಕುಮಾರ್.ಎಂ, ಸಂಕಲನ ಅರ್ಜುನ್‌ಕಿಟ್ಟು , ನೃತ್ಯ ಕಲೈ ಅವರದಾಗಿದೆ. ದೀಪಾವಳಿಗೆ ತೆರೆಗೆ ಬರುವ ಸಾದ್ಯತೆ ಇದೆ.