Miss Nandini.Film Press Meet

Sunday, October 10, 2021

250

ಶಿಕ್ಷಕಿಯಾಗಿ ಪ್ರಿಯಾಂಕಉಪೇಂದ್ರ

ಭಾನುವಾರದಂದು ‘ಮಿಸ್ ನಂದಿನಿ’ ಚಿತ್ರದ ಮಹೂರ್ತ ಸಮಾರಂಭ ನಡೆಯಿತು.ಮೊದಲ ದೃಶ್ಯಕ್ಕೆರವಿಚಂದ್ರನ್‌ಕ್ಲಾಪ್ ಮಾಡಿ ಶುಭಹಾರೈಸಿದರು.ಗೃಹಿಣಿ, ಪೇದೆ, ಇನ್ಸ್‌ಪೆಕ್ಟರ್‌ಆಗಿದ್ದ ಪ್ರಿಯಾಂಕಉಪೇಂದ್ರ ಮೊದಲ ಬಾರಿಶಿಕ್ಷಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತಇವರಿಗೆ ಹೊಸದೇನುಆಗಿಲ್ಲ. ಚಿತ್ರರಂಗಕ್ಕೆ ಬರುವ ಮುನ್ನಕಾಲೇಜು ದಿನಗಳ ನಂತರಆರು ತಿಂಗಳು ಟೀಚರ್ ಆಗಿ ಸೇವೆ ಸಲ್ಲಿಸಿದ್ದಾರೆ.ತಮ್ಮ ಮಕ್ಕಳಿಗೆ ಹೇಳುವ ಪಾಠಇಲ್ಲಿ ನೆರೆವಾಗಲಿದೆಯಂತೆ.ಗ್ರಾಮೀಣ ಪ್ರದೇಶದ ಮಕ್ಕಳೊಂದಿಗೆ ಒಡನಾಡುವ, ಅವರ ಸಂತಸ ನೋವಿನಲ್ಲಿಒಂದಾಗುವ ಶಿಕ್ಷಕಿಯಾಗಿ ಒಂದಷ್ಟು ಸಮಯವನ್ನು ಮಕ್ಕಳೊಂದಿಗೆ ಬೆರೆಯಲು ಅವಕಾಶ ಸಿಗುತ್ತಿರುವುದು ಸಂತಸತರುತ್ತಿದೆಎನ್ನುತ್ತಾರೆ.ಸಾಮಾಜಿಕ ಸಂದೇಶ ಸಾರುವಕತೆಇರಲಿದ್ದು, ಸರ್ಕಾರಿ ಶಾಲೆಯ ಸುತ್ತಚಿತ್ರವು ಸಾಗುತ್ತದೆ.ಸರ್ಕಾರಿ ಶಾಲೆ ಅಥವಾಗ್ರಾಮೀಣ ಪರಿಸರಅಂದರೆತಾತ್ಸಾರ ಮನೋಭಾವಇರುತ್ತದೆ.ಸರಕಾರಿ ಶಾಲೆ ಕೂಡಯಾವುದಕ್ಕೂಕಡಿಮೆಇಲ್ಲ. 

ಇಲ್ಲಿ ವ್ಯಾಸಾಂಗ ಮಾಡಿರುವ ಮಕ್ಕಳು ಒಳ್ಳೋಳ್ಳೆಯ ಉದ್ಯೋಗಗಳನ್ನು ಮಾಡುತ್ತಿದ್ದಾರೆ.ಕೆಲಸಕ್ಕೆ ಸೇರುವ ಹಂತದಲ್ಲಿ ಭಾಷೆ, ಕೌಶಲ ಸೇರಿದಂತೆ ಹಲವು ಸಂಗತಿಗಳಲ್ಲಿ ಕಷ್ಟಪಡುವುದುಂಟು.

ಹಾಗಾಗಿ ಆರಂಭಿಕ ಹಂತದಲ್ಲಿ ಮಕ್ಕಳಿಗೆ ಸೂಕ್ತ ತರಭೇತಿ ನೀಡಬೇಕು. ಮೂಲ ಸೌಕರ್ಯ ಕಲ್ಪಸಿ, ಚಿಣ್ಣರುಕಲಿಕೆಯತ್ತ ಹೆಚ್ಚು ಆಸಕ್ತರಾಗುವಂತೆ ನೋಡಿಕೊಂಡರೆ ಭವಿಷ್ಯದಲ್ಲಿಇಂತಹ ತೊಂದರೆಗಳನ್ನು ಅನುಭವಿಸುವುದಿಲ್ಲವೆಂದು ಹೇಳಲಾಗುತ್ತಿದೆ. ‘ಸೈಕೋ ಪಾತ್’ ನಿರ್ದೇಶನ ಮಾಡಿರುವಎಸ್.ಆರ್.ಗುರುದತ್ತಆಕ್ಷನ್‌ಕಟ್ ಹೇಳುತ್ತಿದ್ದಾರೆ.ನಾಲ್ಕು ಹಾಡುಗಳು ಇರಲಿದ್ದು, ಮಕ್ಕಳಿಗೂ ಒಂದುಗೀತೆಇದೆಯಂತೆ.ಆ.ಕೆ.ಫಿಲಿಂಸ್ ಮೂಲಕ ರಾಮ್‌ಕುಮಾರ್‌ಕತ್ತಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಸಾಯಿ ಸರ್ವೇಶ್ ಸಂಗೀತ, ರಮೇಶ್‌ಛಾಯಾಗ್ರಹಣವಿದೆ.ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಮತ್ತು ಬೆಂಗಾಲಿ ಭಾಷೆಗಳಲ್ಲಿ ಚಿತ್ರವು ಸಿದ್ದಗೊಳ್ಳುತ್ತಿರುವುದು ವಿಶೇಷ. ತಾರಗಣದಲ್ಲಿರತನ್, ಅನ್‌ಮೋಲ್, ಮಹೇಂದ್ರ, ಅಪರ್ಣ, ಸೂರಜ್, ರಾಕೇಶ್, ಮಲ್ಲಿಕ, ಶಶಿಧರ ಮುಂತಾದವರು ನಟಿಸುತ್ತಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,