ಪುನೀತ್ ನಿರ್ದೇಶನದಲ್ಲಿ ಶಿವಣ್ಣ ನಾಯಕ
ಖಂಡಿತವಾಗಿಯೂ ನಿರ್ದೇಶನ ಮಾಡುತ್ತೇನೆ. ಅದರಲ್ಲಿ ಶಿವಣ್ಣ ನಾಯಕಅಂತ ಪುನೀತ್‌ರಾಜ್‌ಕುಮಾರ್ ಹೇಳಿದರು.ಪಕ್ಕದಲ್ಲಿಇದ್ದ ಶ್ರೀಕಾಂತ್ ಅದಕ್ಕೆತಾನು ನಿರ್ಮಾಪಕನಾಗುತ್ತೇನೆಂದು ಪ್ರಕಟಿಸಿದರು. ಸಂದರ್ಭ: ‘ಸಲಗ’ ಚಿತ್ರದ ಪೂರ್ವ ನಿಯೋಜಿತ ಸುಂದರಕಾರ್ಯಕ್ರಮದಲ್ಲಿಚಿತ್ರರಂಗ ಮತ್ತುರಾಜಕೀಯದಿಂದ ಘಟಾನುಘಟಿಗಳು ಆಗಮಿಸಿದ್ದು ವಿಶೇಷವಾಗಿತ್ತು. ನಾಯಕದುನಿಯಾವಿಜಯ್, ನಾಯಕಿ ಸಂಜನಾಆನಂದ್ ಮುಂತಾದವರು ಹಾಜರಿದ್ದುದು ಮೆರಗುತಂದುಕೊಟ್ಟಿತು.
ನಾನು ವಿದ್ಯಾರ್ಥಿಆಗಿದ್ದಾಗ ಸಾಕಷ್ಟು ಸಿನಿಮಾಗಳನ್ನು ನೋಡುತ್ತಿದ್ದೆ. ವಿಜಿ ನನ್ನ ಸ್ನೇಹಿತ. ಮಹೂರ್ತ ಸಮಾರಂಭಕ್ಕೂ ಬಂದಿದ್ದೆ.ಆತನೇ ನಿರ್ದೇಶಿಸಿ ನಟಿಸಿದ್ದಾನೆ.
ಅವನ ಪ್ರತಿಭೆಇಲ್ಲಿಖ್ಯಾತಗೊಂಡುಚಿತ್ರವುಯಶಸ್ಸು ಆಗಲಿ.ವಿಜಯದಶಮಿ ದಿನದಂದು ಹಾಗೊಂದು ವಾತವರಣ ನಿರ್ಮಾಣವಾಗಲಿ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಮಾತಿನಲ್ಲಿ ಶ್ರೀಕಾಂತ್, ವಿಜಿ ತುಂಬ ವರ್ಷಗಳಿಂದ ಬಲ್ಲವರು.ಈಗ ನಾನು ಸಹ ಚಿತ್ರ ಪ್ರದರ್ಶಕನಾಗಿಬರುತ್ತಿದ್ದೇನೆ. ಸುಮಾರುಇಪ್ಪತ್ತೈದು ಮಲ್ಟೀಪ್ಲೆಕ್ಸ್ ಪರದೆಗಳನ್ನು ತೆರೆಯುವಯೋಜನೆ ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆಎಂದು ಸಂತಸದ ಸುದ್ದಿಯನ್ನು ನೀಡಿದರು.
ಕೊರೋನ ಬಂದುಚಿತ್ರರಂಗವನ್ನು ಸಂಕಷ್ಟಕ್ಕೆ ತಂದಿದೆ.ಸಲಗ, ಕೋಟಿಗೊಬ್ಬಚಿತ್ರ ಮುಂದಿನ ನಾಲ್ಕು ದಿನದಲ್ಲಿತೆರೆಕಾಣಲಿದೆ.ಎರಡು ಚಿತ್ರಗಳು ಹಿಟ್ ಆಗಲಿ.ಚಿತ್ರೋದ್ಯಮ ಬೆಳೆಯಲಿ ಮತ್ತು ನಿರ್ಮಾಪಕರ ಮುಖದಲ್ಲಿ ಮಂದಹಾಸತುಂಬಲಿಅಂತ ಶಿವರಾಜ್‌ಕುಮಾರ್ ಶುಭಹಾರೈಸಿದರು. ಉಪೇಂದ್ರ ಗೆಳಯನ ಚಿತ್ರವು ಯಶಸ್ವಿಯಾಗಲೆಂದರು.ಚಿತ್ರದಲ್ಲಿ ಹಾಡಿರುವ ಸಿದ್ದಿ ಗಾಯಕಿಯರಾದಗಿರಿಜಾ, ಸಿದ್ದಿ ಇದೇ ಸಮಯದಲ್ಲಿ ವೇದಿಕೆಗೆ ಬಂದುಅದೇಗೀತೆಯನ್ನು ಹಾಡಿ ರಂಜಿಸಿದರು. ಒಂದೂವರೆ ವರ್ಷಗಳ ನಂತರ ನಡೆದಅರ್ಥಪೂರ್ಣ ಸಮಾರಂಭವುಕಣ್ಣಿಗೆತಂಪುಕೊಟ್ಟಿತು.