ಸ್ವಯಂಕಲ್ಪನೆಯಿಂದ ಆಗುವ ಘಟನೆಗಳು
ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ ‘ಕಪೋ ಕಲ್ಪಿತ’ ಸೆನ್ಸಾರ್‌ಮಂಡಳಿಯು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣಪತ್ರ ನೀಡಿದೆ. ನಾಯಕಿ ಮತ್ತು ನಿರ್ದೇಶಕಿ ಸುಮಿತ್ರಾರಮೇಶ್‌ಗೌಡ ಸಿನಿಮಾದಕುರಿತಂತೆ ಮಾಹಿತಿಯನ್ನು ಸುದ್ದಿಗೋಷ್ಟಿಯಲ್ಲಿ ಹಂಚಿಕೊಂಡರು.ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ.ಸ್ವಯಂಕಲ್ಪನೆಎಂಬುದುಅರ್ಥಕೊಡುತ್ತದೆ.ಅಂದರೆಒಂದು ವಿಷಯವುಒಬ್ಬರಿಂದ ಮತ್ತೋಬ್ಬರಿಗೆತಲುಪುವಾಗ ಹೆಚ್ಚಿಗೆ ಸೇರಿಕೊಂಡು ಸಂಶಯಕ್ಕೆ ನಾಂದಿಯಾಗುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಅಂಗಾಯ್ತು, ಇಂಗಾಯ್ತುಎಂಬಂತೆ ಬಿಂಬಿತವಾಗುತ್ತದೆ.ಅದರಂತೆಕುತೂಹಲ ಹಾರರ್‌ಕತೆಯಲ್ಲಿಯುವಕರತಂಡವೊಂದುದೂರದ ಮನೆಗೆ ಹೋಗುತ್ತಾರೆ.ಅಲ್ಲಿ ಭೂತವಿದೆಅಂತ ತಿಳಿದು ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾರೆಎನ್ನುವುದುಚಿತ್ರದ ಸಾರಾಂಶವಾಗಿದೆ.
ಮಂಡ್ಯಾ ಜಿಲ್ಲೆ, ಕೆ.ಆರ್.ಪೇಟೆ ಮೂಲದ ಸುಮಿತ್ರಾರಮೇಶ್‌ಗೌಡ ಈ ಹಿಂದೆ ‘ಜಿಷ್ಣು’ ಸಿನಿಮಾದಲ್ಲಿ ಪಾತ್ರ ಮಾಡುವಜೊತೆಗೆ ಸಹಾಯಕ ನಿರ್ದೇಶಕಿಯಾಗಿಅನುಭವ ಪಡೆದುಕೊಂಡಿದ್ದಾರೆ. ಹಿತೈಷಿಗಳ ಸಲಹೆಯಂತೆತಾನೇಕೆ ನಿರ್ದೇಶಕಿಯಾಗಬಾರದುಅಂತ ಯೋಚಿಸಿದ ಪ್ರತಿಫಲ ಇಲ್ಲಿಯವರೆಗೂತಂದು ನಿಲ್ಲಿಸಿದೆ.ಕಿರುತೆರೆ ನಟ ಮತ್ತು ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಪ್ರೀತಂಮಕ್ಕಿಹಾಲಿ ನಾಯಕ.ನಿವೃತ್ತ ಪೋಲೀಸ್‌ಅಧಿಕಾರಿಯಾಗಿ ಸಂದೀಪ್‌ಮಲಾನಿ, ನಿರೂಪಕರಾಗಿಗೌರೀಶ್‌ಅಕ್ಕಿ.ಉಳಿದಂತೆ ಶಿವರಾಜ್‌ಕರ್ಕೆರ, ರಾಜೇಶ್‌ಕಣ್ಣೂರ್, ವಿನೀತ್, ವಿಶಾಲ್, ಅಮೋಘ್, ಚೈತ್ರಾ ದೀಕ್ಷಿತ್‌ಗೌಡ ಮುಂತಾದವರತಾರಗಣವಿದೆ.
ರಚನೆ,ಚಿತ್ರಕತೆ, ಸಂಭಾಷಣೆ,ಎರಡು ಹಾಡುಗಳಿಗೆ ಸಾಹಿತ್ಯ, ಸಂಗೀತ ಮತ್ತು ನಿರ್ಮಾಣದಲ್ಲಿ ಪಾಲುದಾರಾಗಿರುವುದು ಮಂಗಳೂರಿನ ಗಣಿದೇವ್‌ಕಾರ್ಕಳ. ಛಾಯಾಗ್ರಹಣ-ಸಂಕಲನ ಬಾತುಕುಲಾಲ್‌ಅವರದು. ಪದಕ್ಷಿಣಕನ್ನಡ, ಉಡುಪಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಗಳ ಸಾಧನೆಗೆರಮೇಶ್‌ಚಿಕ್ಕೆಗೌಡ ಸವ್ಯಾಚಿಕ್ರಿಯೇಶನ್ಸ್ ಮೂಲಕ ಅಕ್ಷರ ಪ್ರೊಡಕ್ಷನ್ ಸಹಯೋಗದೊಂದಿಗೆಬಂಡವಾಳ ಹೂಡಿದ್ದಾರೆ. ಇವರೊಂದಿಗೆಕವಿತಾಕನ್ನಿಕಾಪೂಜಾರಿ ಸೇರಿಕೊಂಡಿದ್ದಾರೆ.