**ಪ್ರಯೋಗ್ ಸ್ಟುಡಿಯೋದ ಹೊಸ ಪ್ರಯೋಗ "ಓನ್ಲಿ ಕನ್ನಡ ಓಟಿಟಿ"*
ನಾಲ್ಕು ವರ್ಷಗಳ ಹಿಂದೆ ಪ್ರದೀಪ್ ಅವರು ಪ್ರಯೋಗ್ ಸ್ಟುಡಿಯೋ ಆರಂಭಿಸಿದ್ದರು .
ಆ ಸ್ಟುಡಿಯೋದಲ್ಲಿ ಹಲವು ಕಾರ್ಯಕ್ರಮಗಳು ನಡೆದಿದೆ.
ಈಗ ಮುಂದಿನ ಹೆಜ್ಜೆಯಾಗಿ ಓಟಿಟಿ ಯೊಂದನ್ನು ಆರಂಭಿಸುತ್ತಿದ್ದೇವೆ. ಇದು ಬರೀ ಕನ್ನಡಕ್ಕೆ ಮಾತ್ರ ಸೀಮಿತ.
ಆದರೆ ಕರ್ನಾಟಕದ ಪ್ರಾದೇಶಿಕ ಭಾಷೆಗಳಾದ ಕೊಡವ, ತುಳು, ಕೊಂಕಣಿ, ಬ್ಯಾರಿ ಭಾಷೆಗಳಿಗೂ ಈ ಓಟಿಟಿ ಲಭ್ಯವಿದೆ.
ಇದು ನಾನು ಹಾಗೂ ನಿರ್ಮಾಪಕ ಮಂಜುನಾಥ್ ತುಂಬಾ ದಿನಗಳ ಹಿಂದೆ ಇದರ ಬಗ್ಗೆ ಯೋಚನೆ ಮಾಡಿದ್ದೆವು. ನಂತರ ಇದರ ಬಗ್ಗೆ ತಲೆ ಕೆಡೆಸಿಕೊಳ್ಳಲಿಲ್ಲ. ಈಗ ಕಾರ್ಯರೂಪಕ್ಕೆ ತಂದಿದ್ದೀನಿ. ಇದಕ್ಕೆ ಹಲವರ ಸಹಕಾರವಿದೆ. ಇದರಲ್ಲಿ ಬರೀ ಸಿನಿಮಾವಷ್ಟೇ ಅಲ್ಲದೇ ಯಕ್ಷಗಾನ, ಸಂಗೀತ, ನಾಟಕ, ನೃತ್ಯ ಮುಂತಾದ ಕಾರ್ಯಕ್ರಮಗಳನ್ನು ಓಟಿಟಿ ಮೂಲಕ ಬಿತ್ತರಿಸಲಾಗುವುದು.
ಈ ಸಂಬಂಧ ನವೆಂಬರ್ ನಲ್ಲಿ ರಾಜ್ಯಪ್ರವಾಸ ಕೈಗೊಳ್ಳುತ್ತೇವೆ.
ಎಲ್ಲಾ ಜಿಲ್ಲೆಗಳಲ್ಲೂ ಇದರ ಬಗ್ಗೆ ತಿಳಿಸಲಾಗುವುದು.
ನಮ್ಮ ಓಟಿಟಿಯಲ್ಲಿ ಯಾವುದೇ ಅಶ್ಲೀಲ ಸಂಭಾಷಣೆಯ ಸಿನಿಮಾಗಳನ್ನಾಗಲಿ ಅಥವಾ ಕಾರ್ಯಕ್ರಮಗಳನ್ನಾಗಲಿ ಪ್ರಸಾರ ಮಾಡುವುದಿಲ್ಲ. ಡಬ್ಬಿಂಗ್ ಸಿನಿಮಾಗಳು ಕೂಡ ಪ್ರಸಾರವಾಗುವುದಿಲ್ಲ ಎಂದು ಪ್ರದೀಪ್ ಮಾಹಿತಿ ನೀಡಿದರು.
ಅಪ್ಲಿಕೇಷನ್ ಡೆವಲಪರ್ ತೇಜ್ ಪಾಂಡೆ ಓಟಿಟಿ ಬಗ್ಗೆ ಮಾಹಿತಿ ನೀಡಿದರು
ಓಟಿಟಿ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಿ.ಮನೋಹರ್ ಈ ಬಗ್ಗೆ ಮಾತನಾಡಿದರು.
ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡುವುದೇ ಚೆಂದ..ಆದರೆ ಲಾಕ್ ಡೌನ್ ಸಮಯದಿಂದ ಜನ ಈ ರೀತಿ ಬದಲಾಗಿದ್ದಾರೆ. ಕಾಲ ಬದಲಂತೆ ಎಲ್ಲರೂ ಬದಲಾಗಬೇಕು. ಓನ್ಲಿ ಕನ್ನಡ ಓಟಿಟಿಗೆ ಒಳ್ಳೆಯದಾಗಲಿ. ಪ್ರದೀಪ್ ಅವರನ್ನು ಬಹಳ ದಿನಗಳಿಂದ ಬಲ್ಲೆ. ಅವರ ಬಳಿ ಹಣ ಅಷ್ಟಿಲ್ಲದಿದ್ದರೂ, ಇಂತಹ ಕಾರ್ಯಗಳಿಗೆ ಕೈ ಹಾಕುತ್ತಾರೆ . ಅವರ ಧೈರ್ಯ ಮೆಚ್ಚುವಂತದು ಎಂದರು ವಿ.ಮನೋಹರ್.
ಸಮಾಜ ಸೇವಕಿ ಹಾಗೂ ಉದ್ಯಮಿ ರೇವತಿ ಕಾಮತ್, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್ ಮುಂಡಾಡಿ, ನಿರ್ದೇಶಕ ಸುಧೀರ್ ಶ್ಯಾನಭೋಗ್, ನಿರ್ದೇಶಕ ವರುಣ್ ಕಟ್ಡಮನಿ, ನಿರ್ದೇಶಕ ಜಗದೀಶ್, ಹೊಂಬಾಳೆ ಸ್ಟುಡಿಯೋ ಮಾಲೀಕರಾದ ಪರಮೇಶ್ ಹಾಗೂ ನಿರ್ಮಾಪಕ ಮಂಜುನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಓನ್ಲಿ ಕನ್ನಡ ಓಟಿಟಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು.