ಸಂತೋಷಕೂಟದಲ್ಲಿ ಕೋಟಿಗೊಬ್ಬ-೩
ಬಿಡುಗಡೆಒಂದು ದಿನ ತಡವಾದರೂ ಹೆಸರಿಗೆತಕ್ಕಂತೆ ‘ಕೋಟಿಗೊಬ್ಬ-೩’ ಚಿತ್ರವುಒಟ್ಟಾರೆ ೪೦.೫ ಕೋಟಿ ಸಂಗ್ರಹವಾಗಿದೆಎಂಬುದಾಗಿ ಮಾಹಿತಿ ಲಭ್ಯವಾಗಿದೆ.ಅಂತೂ ಸಿನಿಮಾವು ಗೆಲುವಿನ ಸಂತಸದಲ್ಲಿದೆ.ನಿರ್ಮಾಪಕ ಸೂರಪ್ಪಬಾಬು ಮಾತನಾಡಿ ನಮ್ಮಿಬ್ಬರ ನಡುವ ವೈಮನಸ್ಸಿದೆ. ಹಾಗಾಗಿ ಬಿಡುಗಡೆ ವಿಳಂಬವಾಯಿತುಎಂದುಎಲ್ಲರೂ ಹೇಳುತ್ತಿದ್ದರು. ಪರದೆ ಮೇಲೆ ದೃಶ್ಯಗಳು ಉತ್ತಮವಾಗಿ ಬರಬೇಕೆಂದು ನಾವಿಬ್ಬರು ಜಗಳವಾಡಿದ್ದು ನಿಜ. ಅದು ಪ್ರೀತಿಯಿಂದ ಮಾತ್ರ.ತಡವಾದಾಗ ಸುದೀಪ್ ಪೋಷಕರು, ನನ್ನ ಮಗಳು ಧೈರ್ಯತುಂಬಿದರು.ಪ್ರೇಕ್ಷಕರು ಸಿನಿಮಾವನ್ನುಇಷ್ಟಪಟ್ಟು ಗೆಲುವು ತಂದುಕೊಟ್ಟಿದ್ದಾರೆ.ಅವರಿಗೆಕೃತಜ್ಘತೆಅರ್ಪಿಸುತ್ತೇನೆಂದು ಹೇಳಿದರು. ಮುಖ್ಯಅಥಿತಿಯಾಗಿಉಪೇಂದ್ರ ಆಗಮಿಸಿದ್ದು ವಿಶೇಷವಾಗಿತ್ತು.
ನನಗೆ ಇದುಆರನೇಚಿತ್ರ.ಕೊನೆಯ ಹತ್ತು ನಿಮಿಷ ಸಾಕಷ್ಟು ತಿರುವುಗಳಿಂದ ಕೂಡಿದೆ.ಸುದೀಪ್‌ಚಿತ್ರದಲ್ಲಿ ಅಭಿನಯಿಸಿದ್ದು ಖುಷಿ ತಂದಿದೆ.ಕರ್ನಾಟಕದಲ್ಲಿ ಕೆಲಸ ಮಾಡಿದರೆ ಮ್ಯಾಜಿಕ್‌ಆಗುತ್ತದೆ.ಪ್ರತಿಭಾವಂತರುಇಲ್ಲಿಂದ ಗುರುತಿಸಿಕೊಂಡಿದ್ದಾರೆಂದು ಕನ್ನಡದಲ್ಲಿ ಮಾತನಾಡಿದ್ದುಅಭಿರಾಮಿ. ನಾಯಕಿ ಮಡೋನಸೆಬಾಸ್ಟಿಯನ್ ‘ಯಾತಕ್ಕೆ ನಿನ್ನನು ಬಯಸಿದೆ ಹೃದಯ’ ಗೀತೆಯ ಸಾಲನ್ನು ಹಾಡಿದರು.
ಪೈರಸಿ ಕುರಿತಂತೆ ಹೇಳಿಕೆ ನೀಡಿದ ಸುದೀಪ್ ಕೆಲವಡೆಕೆಟ್ಟಜನಇದ್ದೇಇರುತ್ತಾರೆ.ಅವರಿಗೆ ಪೈರಸಿ ಮಾಡುವುದೇ ಕೆಲಸವಾಗಿದೆ.ಹೀಗೆ ಸಾಕಷ್ಟು ಪೈರಸಿ ಲಿಂಕ್‌ಗಳು ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿವೆ. ಅವುಗಳನ್ನು ನಮ್ಮತಂಡವುಡಿಲಿಟ್ ಮಾಡಿಸುವಲ್ಲಿ ಯಶಸ್ವಿಯಾಗಿದೆ.ಪೈರಸಿಗೆ ನಾವು ಹೆದರೊಲ್ಲ. ದೊಡ್ಡ ಪರದೆಯಲ್ಲಿ ಸಿನಿಮಾ ನೋಡುವಆನಂದವೇ ಬೇರೆಯಾಗಿರುತ್ತದೆ.ಎರಡು ವರ್ಷದಿಂದಟಿವಿಯಲ್ಲಿಯೇ ಚಿತ್ರಗಳನ್ನು ನೋಡುತ್ತಾಕಣ್ತುಂಬಿಕೊಂಡಿದ್ದೀರಿ.ಮುಂದೆಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿ ಎಂದುಕೋರುತ್ತೇನೆ. ಗಳಿಕೆಯ ಮೇಲೆ ನಟನ ಮಾನದಂಡವನ್ನು ಅಳೆಯಲಾಗುವುದಿಲ್ಲ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿಇದ್ದೇನೆ. ಯಾವತ್ತುಕಲೆಕ್ಷನ್‌ಎನ್ನುವುದು ಮಾನದಂಡವಾಗಿಲ್ಲ. ನಿರ್ಮಾಪಕರು ಶ್ರಮವಹಿಸಿ ಚಿತ್ರ ಮಾಡಿದ್ದಾರೆ.ಪ್ರೇಕ್ಷಕರುಚಿತ್ರವನ್ನು ಕೈ ಹಿಡಿದಿದ್ದಾರೆ.ನಿರ್ಮಾಪಕರು ಸೇಫ್‌ಆದರೆ ನಾವೆಲ್ಲಗೆದ್ದಂತೆಎಂದರು.
ಸಂತೋಷಕೂಟದಲ್ಲಿಡಾ.ವಿ.ನಾಗೇಂದ್ರಪ್ರಸಾದ್, ರವಿಶಂಕರ್‌ಗೌಡ, ಅರ್ಜುನ್‌ಜನ್ಯಾ, ನಿರ್ದೇಶಕ ಶಿವಕಾರ್ತಿಕ್ ಮುಂತಾದವರು ಹಾಜರಿದ್ದು ಸಂತಸವನ್ನು ಹಂಚಿಕೊಂಡರು.