ವಿಜಯಾನಂದನಿಗೆಅದ್ದೂರಿ ಮಹೂರ್ತ
ಖ್ಯಾತಉದ್ಯಮಿ ವಿಜಯ್‌ಸಂಕೇಶ್ವರಜೀವನಕತೆ ಆಧರಿಸಿದ ‘ವಿಜಯಾನಂದ’ ಚಿತ್ರದ ಮಹೂರ್ತ ಸಮಾರಂಭವುಅದ್ದೂರಿಯಾಗಿ ಹುಬ್ಬಳ್ಳಿಯ ವರೂರಿನಲ್ಲಿರುವ ವಿಆರ್‌ಎಲ್ ಪ್ರಧಾನಕಾರ್ಯಾಲಯದಲ್ಲಿ ನಡೆಯಿತು.ಸಮಾರಂಭದಲ್ಲಿ ವಿಜಯ್‌ಸಂಕೇಶ್ವರ, ಆನಂದ್‌ಸಂಕೇಶ್ವರ ಮುಂತಾದವರು ಭಾಗವಹಿಸಿದ್ದರು.ಅನಂತ್‌ನಾಗ್ ಮತ್ತು ನಾಯಕ ನಿಹಾಲ್‌ಅಭಿನಯದ ಮೊದಲ ದೃಶ್ಯಕ್ಕೆ ನಟಗಣೇಶ್‌ಕ್ಲಾಪ್ ಮಾಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿರಿಷಿಕಾಶರ್ಮಒಂಬತ್ತು ವರ್ಷದಅನುಭವದಲ್ಲಿಇದುಎರಡನೆ ಪ್ರಯತ್ನ.೧೯೫೦ ರಿಂದ ೨೦೧೮ರ ವರೆಗಿನ ವಿಜಯ್ ಸಂಕೇಶ್ವರಅವರ ಪಯಣವನ್ನುತೋರಿಸಲಾಗುವುದು.ಒಂದುಅದ್ಬುತ ಬದುಕನ್ನುತೆರೆದಿಡಲಾಗುತ್ತಿದೆ.ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಬರಲಿದೆಎಂದರು.
ರಿಷಿಕಾ, ನಿಹಾಲ್ ನನ್ನ ಬಳಿಗೆ ಬಂದು ವಿಜಯ್ ಸಂಕೇಶ್ವರಅವರತಂದೆಯ ಪಾತ್ರ ಮಾಡಬೇಕೆಂದುಅಪೇಕ್ಷೆಪಟ್ಟರು.ಸ್ಕ್ರಿಪ್ಟ್ ನೋಡಿ ನಿರ್ಧಾರ ಮಾಡುವುದಾಗಿ ತಿಳಿಸಿದ್ದೆ.ಆಮೇಲೆ ಚೆನ್ನಾಗಿದೆ ಅನಿಸಿತು.ನಟಿಸಲು ಖುಷಿ ಇದೆಎಂದುಅನಂತ್‌ನಾಗ್ ಹೇಳಿದರು.
ನನ್ನಜೀವನದಲ್ಲಿಇಂದುದೊಡ್ಡ ದಿನವಾಗಿದೆ. ಬಯೋಪಿಕ್‌ಕುರಿತುಯೋಚಿಸುವಾಗ ನಮ್ಮಲ್ಲಿ ಬಯೋಪಿಕ್‌ಯಾಕಿಲ್ಲಅಂತ ಮಾತು ಬಂತು. ಆಗ ನೆನಪಾಗಿದ್ದೇ ವಿಜಯ್ ಸರ್.ಸಿನಿಮಾ ಪ್ರಕ್ರಿಯೆಯಲ್ಲಿ ನಾನು ಬದಲಾಗುತ್ತಾ ಹೋಗಿದ್ದೇನೆ. ಎಲ್ಲರ ಪ್ರೋತ್ಸಾಹ ಸಿಗಲಿ ಎಂಬುದು ನಾಯಕ ನಿಹಾಲ್ ನುಡಿ.
ಮನೆತನದ ಬ್ಯುಸಿನೆಸ್ ಬಿಟ್ಟು ಬೇರೆಏನಾದರೂ ಮಾಡೋಣಅಂತ ಹೊರಬಂದಾಗ ೧೭ ವರ್ಷ.ಒಂದುಟ್ರಕ್ ನಿಂದಐದುಆದಾಗಟಾರ್ಗೆಟ್‌ಇಡಬಾರದೆಂದು ನಿರ್ಣಯತೆಗೆದುಕೊಂಡಿದ್ದೇ ೫೦೩೧ ವಾಹನಗಳು, ೧೯೦೦೦ ಸಿಬ್ಬಂದಿ ಇರುವಂತೆಆಗಿದೆ.ಮಗನ ಮೇಲೆ ಒಂದೊಂದೆ ಭಾರಹಾಕುತ್ತಾ ಹೋದೆ.ನಿರ್ದೇಶಕಿಛಲವಂತೆ, ಬುದ್ದಿವಂತೆ ಅನಿಸಿತು ಅದಕ್ಕಾಗಿಒಪ್ಪಿಕೊಂಡೆ.ನನ್ನಜೀವನವನ್ನುಯಾರಾದರೂ ಸ್ಪೂರ್ತಿ ಪಡೆದರೆಅದು ಸಾರ್ಥಕಎಂದರು ವಿಜಯ್‌ಸಂಕೇಶ್ವರ.
ಇದೇ ಸಂದರ್ಭದಲ್ಲಿ ವಿಆರ್‌ಎಲ್ ಫಿಲ್ಮ್ ಪ್ರೊಡಕ್ಷನ್ ಸಂಸ್ಥೆಯ ಲೋಗೋ ಅನಾವರಣಗೊಳಿಸಲಾಯಿತು.ನಿರ್ಮಾಪಕಆನಂದ್‌ಸಂಕೇಶ್ವರ, ಅನಂತ್‌ನಾಗ್‌ಜೋಡಿಯಾಗಿ ವಿನಯಪ್ರಸಾದ್, ಮತ್ತೋಂದು ಪ್ರಮುಖ ಪಾತ್ರದಲ್ಲಿರವಿಚಂದ್ರನ್, ಆನಂದ್‌ಸಂಕೇಶ್ವರ್ ಪಾತ್ರದಲ್ಲಿ ಭರತ್‌ಭೋಪಣ್ಣ. ಲಲಿತಾವಿಜಯ್‌ಸಂಕೇಶ್ವರಳಾಗಿ ಸಿರಿಪ್ರಹ್ಲಾದ್, ಆನಂದ್‌ಸಂಕೇಶ್ವರ ಪತ್ನಿಯಾಗಿಅರ್ಚನಾಕೊಟ್ಟಿಗೆ, ಖಳನಾಗಿ ಶೈನ್‌ಶೆಟ್ಟಿಕಾರ್ಯಕ್ರಮದಲ್ಲಿ ಹಾಜರಿದ್ದರು.