ನವೆಂಬರ್ಎರಡನೇ ವಾರದಲ್ಲಿ ಪ್ರೇಮಂಪೂಜ್ಯಂ
‘ಪ್ರೇಮಂಪೂಜ್ಯಂ’ ಚಿತ್ರವು ಬಿಡುಗಡೆ ದಿನಾಂಕವನ್ನು ಮುಂದೂಡಿರುವಕಾರಣ ವಿಷಯವನ್ನು ಹೇಳಿಕೊಳ್ಳಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ನಿರ್ದೇಶಕಡಾ.ರಾಘವೇಂದ್ರ ಹೇಳುವಂತೆ ಕರೋನ ಮೂರನೆ ಅಲೆ ಬಂದರೂ ನಮ್ಮಚಿತ್ರವುಗಟ್ಟಿಯಾಗಿ ನಿಲ್ಲುತ್ತದೆಎನ್ನುವ ನಂಬಿಕೆ ಇದೆ. ಓಟಿಟಿಯಿಂದ ಬೇಡಿಕೆ ಬಂದರೂಚಿತ್ರಮಂದಿರದಲ್ಲಿಜನರಿಗೆತೋರಿಸೋಣವೆಂದು ನಿರ್ಣಯ ತೆಗೆದುಕೊಳ್ಳಲಾಗಿದೆ.ಉತ್ತಮತಂಡಇಲ್ಲದಿದ್ರೆ ಸಿನಿಮಾ ಮಾಡಲಿಕ್ಕೆಆಗುತ್ತಿರಲಿಲ್ಲ.
ನಾಯಕನನ್ನು ಏಳು ಗೆಟಪ್‌ಗಳಲ್ಲಿ ತೋರಿಸಲಾಗಿದೆ.ಕತೆಯಜೊತೆಗೆ ಸಂಗೀತ, ಕ್ಯಾಮಾರ ಕೆಲಸ ಸಿನಿಮಾಕ್ಕೆಆಧಾರ ಸ್ತಂಭಗಳು.ಮಂಡ್ಯಾದಿಂದ ವಿಯಟ್ನಾಂವರೆಗೂಚಿತ್ರೀಕರಣ ನಡೆಸಲಾಗಿದೆ.ಸಿನಿಮಾದ ಮೂಲಕ ಸ್ನೇಹಿತರು, ತಂದೆತಾಯಿ ಹೀಗೆ ಎಲ್ಲಾ ಸಂಬಂದಗಳಿಗೂ ಪೂಜನೀಯ ಭಾವನೆಇರಬೇಕೆಂದು ಹೇಳ ಹೊರಟಿದ್ದೇವೆ. ಸಿನಿಮಾದಅವಧಿ ಕೊಂಚ ಜಾಸ್ತಿ ಇದ್ದರೂ ನೋಡುತ್ತಿದ್ದರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲವೆಂದು ವಾಖ್ಯಾನ ನೀಡಿದರು.
ಪ್ರೇಮ್ ಮಾತನಾಡಿಇಡೀಚಿತ್ರದಲ್ಲಿ ನಾಯಕಿಯನ್ನುಟಚ್ ಮಾಡುವುದಿಲ್ಲ. ಇದು ಪ್ರೇಮಂ ಪೂಜ್ಯಂನ ವಿಶೇಷ. ನನ್ನ ೨೫ ಚಿತ್ರಗಲ್ಲಿ ಇಂಥಕತೆ ಮಾಡಿರುವುದುಇದೇ ಮೊದಲುಎನ್ನಬಹುದು.ಪ್ರೀತಿಎನ್ನುವ ಪದಕ್ಕೆದೈವಿಕ ಭಾವನೆ, ಹೊಸ ವ್ಯಾಖ್ಯಾನಕೊಡುವ ಸಿನಿಮಾವಿದು.ಇಲ್ಲಿಯವರೆಗೂ ನಮ್ಮಚಿತ್ರದ ಬಗ್ಗೆ ಒಂದೇಒಂದು ನಕರಾತ್ಮಕ ಮಾತುಗಳು ಕೇಳಿಬಂದಿಲ್ಲ. ಟ್ರೈಲರ್ ಜಾಸ್ತಿ ಸೌಂಡ್ ಮಾಡಿದೆ.ಅದಕ್ಕೆಕಾರಣ ಮಾದ್ಯಮಗಳು ನೀಡಿದ ಸಹಕಾರಎನ್ನಬಹುದು. ವಿತರಕರು, ಸ್ನೇಹಿತರ ಸಲಹೆಯ ಮೇರೆಗೆ ನವೆಂಬರ್೧೨ರಂದು ಬರಲಿದ್ದೇವೆಎಂದರು. ನಾಯಕಿ ಬೃಂದಾಆಚಾರ್ಯ, ನಿರ್ಮಾಪಕರು ಉಪಸ್ತಿತರಿದ್ದರು.