ಭಜರಂಗಿ-೨ ಇವೆಂಟ್ದಲ್ಲಿ ತಾರಾಮೇಳ
ಮೂವರು ಸ್ಟಾರ್ ನಟರುಗಳು ಒಂದುಕಡೆ ಸೇರಿದರೆ ಹೇಗಿರುತ್ತದೆಎಂದು ಊಹಿಸಿದರೆ ‘ಭಜರಂಗಿ-೨’ ಕಾರ್ಯಕ್ರಮ ನೆನಪಿಗೆ ಬರುತ್ತದೆ.ಯಸ್ ಪ್ರಿ ಇವೆಂಟ್ಕಲರ್ಫುಲ್ ಸಮಾರಂಭದಲ್ಲಿ ನಾಯಕ ಶಿವರಾಜ್ಕುಮಾರ್ ಅವರೊಂದಿಗೆ ಪುನೀತ್ರಾಜ್ಕುಮಾರ್ ಮತ್ತುಯಶ್ ಆಗಮಸಿದ್ದು ವಿಶೇಷವಾಗಿತ್ತು.ಯಶ್ ಮಾತನಾಡಿ ಸಿನಿಮಾಅನ್ನೋದುರಣರಂಗಅಲ್ಲ. ಅದೂಂದು ಸಮುದ್ರ.ಸಾಮರ್ಥ್ಯಇದ್ದವರುಈಜುತ್ತಾರೆ.ಇಲ್ಲದವರು ಮುಳುಗುತ್ತಾರೆ.ಎಲ್ಲರೂಚೆನ್ನಾಗಿರೋಣ.ಒಟ್ಟಿಗೆಇರೋಣ, ಪ್ರೀತಿಯಿಂದಇರೋಣ. ಇವತ್ತುಯಾರು, ಯಾರೇ ಸ್ಟಾರ್ಡಮ್ ಮೆರೆಯಲಿ. ಆದರೆ ಡಾ.ರಾಜ್ಕುಮಾರ್,ಶಿವಣ್ಣ ಎಲ್ಲರೂ ಸ್ಟಾರ್ಡಮ್ಗಳನ್ನು ನೋಡಿದ್ದಾರೆ. ಸ್ಟಾರ್ಡಮ್ ಬಂದಾಗ ನಮ್ಮ ಸುತ್ತಎಲ್ಲರೂಇರುತ್ತಾರೆ.ಆದರೆ ಏನು ಇಲ್ಲದಾಗಲೂಯಾರು ನಮ್ಮೋಂದಿಗೆಇರುತ್ತಾರೆಅದು ಮುಖ್ಯ.ಆ ವಿಷಯದಲ್ಲಿ ಶಿವಣ್ಣ, ಪುನೀತ್ಎಲ್ಲರನ್ನು ಪ್ರೀತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆಂದುರಾಕಿಂಗ್ ಸ್ಟಾರ್ ಹೇಳಿದರು.
ಸಿನಿಮಾಅದ್ಬುತವಾಗಿಮೂಡಿಬಂದಿದೆ. ನಿರ್ದೇಶಕಎ.ಹರ್ಷ ಒಂದೊಳ್ಳೆಯ ತಂಡದೊಂದಿಗೆಇಡೀ ಸಿನಿಮಾವನ್ನುಕಟ್ಟಿಕೊಟ್ಟಿದ್ದಾರೆ. ನಾನಂತೂಇದರ ಮೇಲೆ ಸಾಕಷ್ಟು ನಿರೀಕ್ಷೆಇಟ್ಟುಕೊಂಡಿದ್ದೇನೆ. ಸೆಟ್ ಸುಟ್ಟುಹೋದಾಗ ಸಹಜವಾಗಿ ಬೇಸರವಾಯಿತು.ಆದರೂಜಯಣ್ಣ, ಶಿವಣ್ಣ ನೀವು ಮನೆಗೆ ಹೋಗಿ, ನಾವು ನೋಡಿಕೊಳ್ಳುತ್ತೇವೆ ಎಂದರು.ಮನೆಗೆ ಬರುವಷ್ಟರಲ್ಲಿ ಫೋನ್ ಬಂತು.ಅದೇತರಹದ ಬೇರೆದೊಡ್ಡದಾದ ಸೆಟ್ ಹಾಕುತ್ತೇವೆ ಎಂದು. ಅದುಜಯಣ್ಣಅವರ ಸಿನಿಮಾ ಪ್ರೀತಿಎನ್ನುತ್ತಾ ಪುನೀತ್, ಯಶ್ ಬಗ್ಗೆ ಶಿವರಾಜ್ಕುಮಾರ್ ಮೆಚ್ಚುಗೆಯ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ನಾಯಕಿ ಭಾವನಾಮೆನನ್, ಶೃತಿ, ರಿಷಬ್ಶೆಟ್ಟಿ, ನಿರ್ಮಾಪಕ ಭೋಗೇಂದ್ರ, ಸಂಭಾಷಣೆಕಾರ ರಘುನಿಡುವಳ್ಳಿ, ಛಾಯಾಗ್ರಾಹಕ ಸ್ವಾಮಿ, ನಿರ್ದೇಶಕರುಗಳಾದ ದಿನಕರತೂಗದೀಪ, ಸಂತೋಷ್ಆನಂದ್ರಾಮ್ ಮುಂತಾದವರು ಹಾಜರಿದ್ದರು.