By 1 Get 1 Free.Film Press Meet

Thursday, November 04, 2021

321

 

ಈವಾರ ತೆರೆಮೇಲೆ ಬೈ ಒನ್ ಗೆಟ್ ಒನ್ ಫ್ರೀ

 

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ವಿಭಿನ್ನ ಶೈಲಿಯ ಚಿತ್ರಗಳು, ಬಗೆಬಗೆಯ ಶೀರ್ಷಿಕೆಯೊಂದಿಗೆ ನಿರ್ಮಾಣವಾಗುತ್ತಿವೆ. ಅಂಥಾ ಚಿತ್ರಗಳ ಸಾಲಿಗೆ ಸೇರಿದ ಮತ್ತೊಂದು ಚಿತ್ರ ಬೈಒನ್ ಗೆಟ್‌ಒನ್ ಫ್ರೀ. ಚಿತ್ರದ ಶೀರ್ಷಿಕೆ ಹೇಗೆ ಆಕರ್ಷಣೆಯೋ ಹಾಗೆ ಈ ಚಿತ್ರದ ಮತ್ತೊಂದು ಆಕರ್ಷಣೆ ಅಂದರೆ ಅವಳಿ ಸಹೋದರರು. ಮೂಲತಃ ಮೈಸೂರಿನವರಾದ ಮಧುರಾಜ್ ಹಾಗೂ ಮನುರಾಜ್ ಎಂಬ ಅವಳಿ ಸಹೋದರರು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹುಭಾಷಾ ನಟ ಕಿಶೋರ್ ಇಲ್ಲಿ ಮನ್ಮಥ ಎಂಬ ಪೋಸ್ಟ್  ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಹರೀಶ್ ಅನಿಲ್‌ಗಾಡ್ ಅವರ ನಿರ್ದೇಶನದ ಈ ಚಿತ್ರದಲ್ಲಿ  ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೆ ಹಾರರ್ ಶೇಡ್ ಕಥೆಯಿದ್ದು ಇದೇ ನವೆಂಬರ್ ೧೨ರ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಕಥೆಯಲ್ಲಿ  ಅವಳಿ ಹುಡುಗರ ನಡವಳಿಕೆಗಳು ಒಂದೇ ಆಗಿದ್ದರೂ ಒಬ್ಬ ಸ್ಲೋ ಮತ್ತೊಬ್ಬ ಫಾಸ್ಟ್.

  ಕಳೆದವಾರ ನಡೆದ ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ಚಿತ್ರತಂಡ ಅಗಲಿದ ಪುನೀತ್‌ರನ್ನು ನೆನದು ಭಾವುಕವಾಯಿತು. ಆರಂಭದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶೋರ್ ಈ ಒಂದೂವರೆ ವರ್ಷದಲ್ಲಿ ನಾವೆಲ್ಲ ಸುಮಾರು ಜನ ನಮ್ಮ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ, ಹೇಗೋ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಮತ್ತೊಂದು ದೊಡ್ಡ ಆಘಾತ ಬಂದೆರಗಿದೆ, ಇಡೀ ಇಂಡಸ್ಟ್ರಿಗೆ ದೊಡ್ಡ ನಷ್ಟವಾಗಿದೆ, ಸುಮಾರು ಜನರಿಗೆ ನಮಗೇ ಆಥರ ಆಗಿ ಅವರು ಉಳಿದುಕೊಳ್ಳಬಾರದಿತ್ತೇ ಅನಿಸಿದೆ, ಇದನ್ನು ಸಾಕಷ್ಟು ಜನರ ಬಾಯಲ್ಲಿ ಕೇಳಿದ್ದೇನೆ.  

.  ಇನ್ನು ಬೈಒನ್ ಗೆಟ್‌ಒನ್ ಫ್ರೀ ಚಿತ್ರದ ಕುರಿತು ಹೇಳುವುದಾದರೆ ಇವರು ಮಾಡಿಕೊಂಡಿದ್ದ ಕಥೆಯೇ ತುಂಬಾ ಚೆನ್ನಾಗಿತ್ತು, ಅದರಲ್ಲಿ ಒಂದು ಪರಿಚಯದ ಮುಖ ಬೇಕಾಗಿತ್ತು, ಅದನ್ನು ನನ್ನ ಕೈಲಿ ಮಾಡಿಸಿದ್ದಾರೆ. ಮನ್ಮಥ ಎಂಬ ಪೋಸ್ಟ್ಮ್ಯಾನ್ ಪಾತ್ರ. ಅವಳಿ ಜವಳಿ ಹುಡುಗರು ತಮ್ಮ ಹಿಂದಿನ ಕಥೆಯನ್ನು ಹುಡುಕುತ್ತಾ ಹೋದಾಗ ಅಲ್ಲೊದು ಪ್ರೀತಿ ಹುಟ್ಟಿಕೊಳ್ಳುತ್ತೆ, ಈಚೆಗೆ ಸಾವು ನೋವುಗಳ ಮಧ್ಯೆಯೂ ನಮ್ಮಲ್ಲಿ ದ್ವೇಷ ಹುಟ್ಟಿಕೊಳ್ಳುತ್ತಿದೆ, ಈ ಥರದ ದ್ವೇಷದ ವಾತಾವರಣದಲ್ಲಿ ಇದೊಂದು ಪ್ರೀತಿಯಕಥೆ. ಇಲ್ಲಿ ಪತ್ರಗಳನ್ನು ಸಾಗಿಸುವವನದ್ದೇ ಒಂದು ಪ್ರೇಮಕಥೆಯಿದೆ. ಒಂದು ಹೊಸತಂಡ, ಕಮರ್ಷಿಯಲ್ ಸಿನಿಮಾ ಮಾಡಿ ಬಿಡುಗಡೆ ಮಾಡುತ್ತಿದೆ, ಅದಕ್ಕ ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೇಳಿದರು.

    ನಂತರ ನಿರ್ಮಾಪಕ ಹಾಗೂ ನಾಯಕನಟ ಮಧು ಮಾತನಾಡುತ್ತ ಸಾಮಾನ್ಯವಾಗಿ ಟ್ವಿನ್ಸ್ ಕಥೆಗಳನ್ನು ಕಾಮಿಕ್ ಆಗಿ ತೋರಿಸುತ್ತಾರೆ, ನಾವು ಅವರು ರಿಯಲ್ಲಾಗಿ ಹೇಗಿರ‍್ತಾರೋ ಅದೇರೀತಿ ಪ್ರೆಸೆಂಟ್ ಮಾಡಿದ್ದೇವೆ. ಅವರ ಜೊತೆ ಒಂದು ಪಾತ್ರ ಬ್ಲೆಂಡ್ ಆಗಿ ಸಾಗುತ್ತದೆ. ನಾವು ಚಿಕ್ಕವರಿದ್ದಾಗಿಂದಲೂ ಆಕ್ಟ್  ಮಾಡುತ್ತಾ ಬಂದಿದ್ದೇವೆ. ಇದೊಂದು ಟ್ರಾವೆಲ್ ಕಥೆ, ಮನ್ಮಥನ ಪಾತ್ರದ ಮೇಲೆ ಕಥೆ ಸಾಗುತ್ತದೆ ಎಂದು ಹೇಳಿದರು.

ನಂತರ ನಟ ಮನು ಮಾತನಾಡಿ ಚಿತ್ರದಲ್ಲಿ ಕಿಶೋರ್ ಅವರದ್ದು ಒಬ್ಬ ಪೋಸ್ಟ್ಮಾನ್ ಪಾತ್ರ. ಚಿತ್ರಕಥೆಯಲ್ಲಿ ಅವರ ಪಾತ್ರವೇ ಪ್ರಮುಖವಾಗಿದೆ ಎಂದರು, ಪ್ರಥಮಾರ್ಧದಲ್ಲಿ ಸಿಟಿಯಲ್ಲಿ ಶುರುವಾಗುವ ಕಥೆ, ವಿಭಿನ್ನ ತಿರುವುಗಳನ್ನು ಪಡೆದುಕೊಂಡು ನಂತರ ಕರಾವಳಿ ಪ್ರಕೃತಿಯ ಮಡಿಲಲ್ಲಿ ಮುಕ್ತಾಯಗೊಳ್ಳುತ್ತದೆ, ಬೆಂಗಳೂರು ಹಾಗೂ ಮುರುಡೇಶ್ವರದಲ್ಲಿ  ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಕಮರ್ಷಿಯಲ್ ಎಲಿಮೆಂಟ್ ಹೊಂದಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದೆ. ಹುಡುಗಾಟದಲ್ಲಿ ಶುರುವಾಗುವ ಅವಳಿ ಜವಳಿಯ ಆಟಗಳು ದ್ವಿತೀಯಾರ್ಧದಲ್ಲಿ ಗಂಭೀರ ಸ್ವರೂಪ ಪಡೆಯುತ್ತಾ, ಒಂದು ಹುಡುಕಾಟದಲ್ಲಿ ಕೊನೆಯಾಗುತ್ತದೆ ಎಂದು ಹೇಳಿದರು. ಚಿತ್ರದ ನಾಯಕಿ ರೋಷನಿ ತೇಲ್ಕರ್ ಮಾತನಾಡುತ್ತ ನನ್ನ ಪ್ರೊಫೆಷನ್ನೇ ಬೇರೆ, ಅನಿರೀಕ್ಷಿತವಾಗಿ ಈ ತಂಡದಲ್ಲಿ ಸೇರಿಕೊಂಡೆ. ಸೀರಿಯಲ್‌ಗಳಲ್ಲಿ ನೆಗೆಟಿವ್ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದ ನನಗೆ ಈ ಚಿತ್ರದಲ್ಲಿ ನಾಯಕಿ  ಆಫರ್ ಬಂತು ಎಂದು ಹೇಳಿದರು, ಮತ್ತೊಬ್ಬ ನಟಿ ರಿಶಿತಾ ಮಲ್ನಾಡ್ ಮಾತನಾಡುತ್ತ ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಲವ್ ಎಲ್ಲಾ ಇದೆ. ಎಂದು ಹೇಳಿದರು. ಈ ಚಿತ್ರಕ್ಕೆ  ದಿನೇಶ್‌ಕುಮಾರ್ ಸಂಗೀತ ನಿರ್ದೇಶಕರಾಗಿದ್ದು, ಅನಿಲ್ ಸಿಜೆ ಹಿನ್ನೆಲೆ ಸಂಗೀತ ನಿರ್ವಹಿಸಿದ್ದಾರೆ. ಅಭಿಷೇಕ್ ಮೃತ್ಯುಂಜಯಪಾಂಡೆ ಮತ್ತು ವಿಶ್ವಜಿತ್‌ರಾವ್ ಕ್ಯಾಮೆರಾವರ್ಕ್ ಮಾಡಿದ್ದಾರೆ. ಥ್ರಿಲ್ಲರ್ ಮಂಜು, ವೈಲೆಂಟ್ ವೇಲು ಹಾಗೂ ರಮೇಶ್ ಸಾಹಸ ದೃಷ್ಯಗಳನ್ನು ಸೆರೆಹಿಡಿದಿದ್ದಾರೆ. ಈ ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಇರೋ ಪಾತ್ರದಲ್ಲಿ ಉಷಾ ಭಂಡಾರಿ ಕಾಣಿಸಿಕೊಂಡಿದ್ದಾರೆ. ಬಲರಾಜವಾಡಿ, ಗೌರೀಶ್‌ಅಕ್ಕಿ, ಪ್ರಶಾಂತ್‌ರಾಯ್ ಹಾಗೂ ಇತರರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,