ಕೌಟಂಬಿಕಕಥನ ಹಿಟ್ಲರ್
ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸುವ ‘ಹಿಟ್ಲರ್’ ಸಿನಿಮಾವುಯುಎ ಪ್ರಮಾಣ ಪತ್ರ ಪಡೆದುಕೊಂಡಿದೆ.ಗಾನಶಿವ ಮೂವೀಸ್ ಮುಖಾಂತರ ಮಮತಾಲೋಹಿತ್ ನಿರ್ಮಾಣ ಮಾಡಿರುವದು ಹೊಸ ಪ್ರಯತ್ನ.ಶನಿವಾರದಂದುಚಿತ್ರದಟ್ರೈಲರ್‌ನ್ನು ‘ಅಯೋಗ್ಯ’ ಮತ್ತು ‘ಮದಗಜ’ ನಿರ್ದೇಶಕ ಮಹೇಶ್‌ಕುಮಾರ್ ಬಿಡುಗಡೆ ಮಾಡಿ ಕಿನ್ನಾಳ್‌ರಾಜ್ ಸ್ನೇಹವನ್ನು ನೆನಪು ಮಾಡಿಕೊಂಡುತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಕಿನ್ನಾಳ್‌ರಾಜ್ ಮಾತನಾಡಿಸಿನಿಮಾಕುರಿತಂತೆ ಮಾಹಿತಿ ನೀಡಿದರು.ಕುಟುಂಬದಲ್ಲಿತನ್ನಿಂದಆದತಪ್ಪಿಗೆ, ವೈಯಕ್ತಿಕ ಕಾರಣಗಳಿಗೋಸ್ಕರ ಕುಟುಂಬ ಹಾಳಾಗಬಾರದೆಂಬ ಮಾನಸಿಕ ತಳಮಳವನ್ನು ಹೇಳಲಾಗಿದೆ.ಶೀರ್ಷಿಕೆ ಅಂದರೆ ನಾನು ಹೇಳಿದ್ದೆ ನಿಯಮ.ಅಂತಹ ಪಾತ್ರ.ಕಥಾನಾಯಕಶುರುವುನಿಂದಲೇರೌಡಿಯಾಗಿರುತ್ತಾನೆ. ಕರುಣೆಅನ್ನುವುದನ್ನು ತೋರಿಸಿಲ್ಲ. ಆತನುತೊಳಲಾಟದಲ್ಲಿ ಸಿಕ್ಕಿಹಾಕಿಕೊಂಡು, ರೌಡಿಸಂನಿಂದ ಹೊರಗಡೆ ಬಂದರೆ ಸಮಾಜ ಬಿಡುತ್ತದಾ, ಅಥವಾ ಅವನು ಬದುಕುತ್ತಾನಾ?ಅವೆಲ್ಲಾವನ್ನು ಹಂಗೆ ನಿಭಾಯಿಸುತ್ತಾನೆಎನ್ನವುದು ಸಾರಾಂಶವಾಗಿದೆಎಂದರು.
ರೌಡಿಸಂ, ಫ್ಯಾಮಿಲಿ ಸೆಂಟಿಮೆಂಟ್‌ಇದೆ.ಚಿತ್ರದಲ್ಲಿ ಪಾತ್ರಗಳು ಕೆಲವೇ ನಿಮಿಷಗಳುಇದ್ದರೂ, ಎಲ್ಲವುಜೀವಂತವಾಗಿರುತ್ತದೆ. ವಿಜಯ್‌ಚಂಡೂರು, ತಾಯಿ ಪಾತ್ರ ಮಾಡಿರುವವರು ಹೂರತುಪಡಿಸಿ ಉಳಿದಂತೆ ಎಲ್ಲರೂ ವಿಲನ್‌ಗಳು ಎಂದು ನಾಯಕ ಲೋಹಿತ್ ಬಣ್ಣಿಸಿಕೊಂಡರು.
ನಾಯಕಿ ಸಸ್ಯ,ಅಣ್ಣನ ಪಾತ್ರ ಮಾಡಿರುವ ವಿಜಯ್‌ಚೆಂಡೂರು, ಭ್ರಷ್ಟ ಪೋಲೀಸ್‌ಅಧಿಕಾರಿಗಣೇಶ್‌ರಾವ್, ಖಳನಾಗಿರುವ ವೈಭವ್‌ನಾಗರಾಜ್ ಪಾತ್ರದ ಪರಿಚಯ ಮಾಡಿಕೊಂಡರು.ತಾರಗಣದಲ್ಲಿವರ್ಧನ್‌ತೀರ್ಥಹಳ್ಳಿ,ಮನಮೋಹನ್‌ರೈ, ಬಲರಾಜವಾಡಿ, ಶಶಿಕುಮಾರ್, ವೇದಹಾಸನ್, ಗಣೇಶ್‌ರಾವ್ ಮುಂತಾದವರು ನಟಿಸಿದ್ದಾರೆ. ಸಂಗೀತಆಕಾಶ್‌ಪರ್ವ, ಛಾಯಾಗ್ರಹಣ ಜಿ.ವಿ.ನಾಗರಾಜ್‌ಕಿನ್ನಾಳ, ಸಂಕಲನ ಗಣೇಶ್‌ತೋರಗಲ್, ಸಾಹಸ ಚಂದ್ರುಬಂಡೆಅವರದಾಗಿದೆ. ಅಂದಹಾಗೆಚಿತ್ರವು ನವೆಂಬರ್ ೧೨ರಂದು ರಾಜ್ಯಾದ್ಯಂತತೆರೆಕಾಣುತ್ತಿದೆ.