Jugalbandi.Film Pooja News

Saturday, November 20, 2021

316

 

*'ಜುಗಲ್ ಬಂದಿ’ ಶುರುವಾಗುವ ಮೊದಲೇ ಆಡಿಯೋ ರೈಟ್ಸ್ ಸೋಲ್ಡ್ ಔಟ್... ಹೊಸಬರ ಹೊಸ ಸಿನಿಮಾಕ್ಕೆ ಸಖತ್ ಡಿಮ್ಯಾಂಡ್...!*

 

ಸ್ಟಾರ್ ಹೀರೋ ಸಿನಿಮಾಗಳು ಸೆಟ್ಟೇರುವ ಮೊದ್ಲೇ ಬೇಜಾನ್ ಡಿಮ್ಯಾಂಡ್ ಕ್ರಿಯೇಟ್ ಮಾಡೋದು ಕಾಮನ್. ಆದ್ರೆ ಹೊಸಬರ ಸಿನಿಮಾಗಳು ಸಾಧ್ಯನಾ? ಖಂಡಿತ ಸಾಧ್ಯ ಅಂತಾ ಸಾಬೀತುಪಡಿಸಿದೆ ಹೊಸಬರ ಜುಗಲ್ ಬಂದಿ ಸಿನಿಮಾ.

 

ಹೌದು.. ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಲು ಸಜ್ಜಾಗಿರುವ ಜುಗಲ್ ಬಂದಿ ಸಿನಿಮಾಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಜುಗಲ್ ಬಂದಿ ಶುರುವಾಗುವ ಮೊದಲೇ ಚಿತ್ರದ ಆಡಿಯೋ ರೈಟ್ಸ್ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ.

ಒಂದ್ಕಡೆ ಆಡಿಯೋ ರೈಟ್ಸ್ ಸೇಲ್ ಆದ ಖುಷಿಯಲ್ಲಿರುವ ಚಿತ್ರತಂಡ ಇವತ್ತು ಶುಭಘಳಿಗೆಯಲ್ಲಿ ಅದ್ಧೂರಿಯಾಗಿ‌ ಮುಹೂರ್ತ ನೆರವೇರಿಸಿದೆ. ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ ನಡೆದ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ನಾಯಕ ಯಶ್ ಶೆಟ್ಟಿ, ಸಂತೋಷ್ ಅಶ್ರಯ್, ಅಶ್ವಿನ್  ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ ಮಾನಸಿ ಸುಧೀರ್, ನಿರ್ದೇಶಕ ದಿವಾಕರ್ ಡಿಂಡಿಮ ಮುಂತಾದವರು ಭಾಗಿಯಾಗಿದ್ದರು.

 

ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಜುಗಲ್ ಬಂದಿ ಸಿನಿಮಾಗೆ ಪ್ರದ್ಯೋತನ್ ಸಂಗೀತ, ಎಸ್ ಕೆ ರಾವ್ ಕ್ಯಾಮೆರಾ ಸಿನಿಮಾದಲ್ಲಿರಲಿದೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. 22ನೇ ತಾರೀಖಿನಿಂದ ಜುಗಲ್ ಬಂದಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,