ವಿಭಿನ್ನ ಶೀರ್ಷಿಕೆ ದಕಲರ್ಆಫ್ಟೊಮೆಟೋ
ನಮ್ಮ ನೆಲದ ಸೊಗಡು, ಭಾಷೆಕುರಿತಂತೆ ಚಿತ್ರಗಳು ತೆರೆಕಂಡಿರುವುದು ವಿರಳ.ಈ ಬಾರಿಕೋಲಾರ ಮಣ್ಣಿನ ಸೊಗಡಿನ ‘ದಿ ಕಲರ್‌ಆಫ್‌ಟೊಮೆಟೋ’ ಚಿತ್ರವೊಂದು ಹೊಸದೊಂದು ವ್ಯಾಖ್ಯಾನ ಬರೆಯಲು ಮುಂದಾಗಿದೆ.ಇದರ ವಿಷಯವನ್ನು ತಿಳಿಸಲು ತಂಡವು ಜಿ.ಟಿ.ಮಾಲ್‌ದಲ್ಲಿಕಾರ್ಯಕ್ರಮವನ್ನುಏರ್ಪಾಟು ಮಾಡಿತ್ತು.ಪೊಗರುಖ್ಯಾತಿಯಧ್ರುವಸರ್ಜಾಟೈಟಲ್ ಪೋಸ್ಟರ್‌ನ್ನು ಲಾಂಚ್ ಮಾಡಿ ಶುಭ ಹಾರೈಸಿದ್ದನ್ನು ದೊಡ್ಡ ಪರದೆಯ ಮೇಲೆ ತೋರಿಸಲಾಯಿತು.ಚಿತ್ರವನ್ನು ೧ ಟು ೧೦೦ ಡ್ರೀಮ್ಸ್ ಮೂವೀಸ್ ಬ್ಯಾನರ್‌ಅಡಿಯಲ್ಲಿ ಸ್ವಾತಿಕುಮಾರ್ ನಿರ್ಮಾಣ ಮಾಡುತ್ತಿರುವುದುಎರಡನೆಅನುಭವ. ಸದಭಿರುಚಿಯ ಚಿತ್ರಗಳನ್ನು ನೀಡುವ ಸಲುವಾಗಿ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ.ಶೀರ್ಷಿಕೆ ಕ್ಯಾಚಿಆಗಿರುವುದರಿಂದ ಬಂಡವಾಳ ಹೂಡಲು ಮನಸ್ಸು ಮಾಡಲಾಯಿತು.ಮಾದ್ಯಮದ ಸಹಕಾರಬೇಕೆಂದುಕೋರಿದರು.
ಕತೆಯಲ್ಲಿ ಹಿಂಸೆ ಅಲ್ಲದೆ ಪ್ರೀತಿ, ಸ್ನೇಹ ಸೇರಿದಂತೆ ಹಲವು ಅಂಶಗಳು ಒಳಗೊಂಡಿದೆ.ಅಲ್ಲಿನ ಭಾಗದಲ್ಲಿ ಬೆಳೆಯುವ ಟೊಮೊಟೊ ಪ್ರಪಂಚದ ನಾನಾ ಕಡೆ ಸಾಗಾಟವಾಗುತ್ತದೆ.ಇಲ್ಲಿನ ಮಾದರಿ ಸ್ಥಳ ಜೊತೆಗೆ ಏಳು ಊರುಗಳ ಸುತ್ತಇರುವ ಸಂಸ್ಕ್ರತಿ ಬದುಕನ್ನು ಮನರಂಜನೆ ಮೂಲಕ ತೆರೆದಿಡುವ ಪ್ರಯತ್ನ ಮಾಡಲಾಗುವುದೆಂದುಪ್ರಥಮಬಾರಿ ನಿರ್ದೇಶನ ಮಾಡುತ್ತಿರುವತಾಯಿಲೋಕೇಶ್‌ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡರು. ನಾಯಕ ಪ್ರತಾಪ್‌ನಾರಾಯಣ್ ಮತ್ತೋಂದು ಪ್ರಮುಖ ಪಾತ್ರದಲ್ಲಿ ಬಿ.ಸುರೇಶ್, ಗಾಯಕಿಉಮಾ ನಟಿಸಲಿದ್ದಾರೆ.ಅಲ್ಲದೆಕೋಲಾರ ಭಾಗದ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುವುದು.ಅರ್ಜುನ್‌ರಾಮು ಸಂಗೀತ, ಪ್ರಶಾಂತ್‌ಸಾಗರ್‌ಛಾಯಾಗ್ರಹಣ, ವಲ್ಲಿಕುಲ್ಯಸ್ ಸಂಕಲನವಿದೆ. ಹಾಗೆಯೇಹಿಂಸೆಯ ಹೊಸ ವ್ಯಾಖ್ಯಾನವನ್ನು ಸೃಷ್ಟಿಸಲಿರುವಕತೆಯನ್ನು ಕೋಟಿಗಾನಹಳ್ಳಿ ರಾಮಯ್ಯ ಬರೆದಿದ್ದಾರೆ.