ಚಂದನವನದ ಚಿತ್ರಗಳಿಗೆ ಗ್ಯಾರೇಜು ಬಂದಿದೆ
ಡಿಜಿಟಲಿಕರಣ ನಮ್ಮ ಬದುಕಿನಲ್ಲಿ ಇನ್ನು ಹಾಸು ಹೊಕ್ಕಾಗಿದೆ. ಸಿನಿಮಾ ಮಂದಿರಗಳಿಗೆ ಹೋಗಿ ಗಂಟೆಗಟ್ಟಲೆ ವ್ಯಯಿಸುವ ಮನಸ್ಥಿತಿ ಅಥವಾ ಪರಿಸ್ಥಿತಿ ಇಲ್ಲದ ಸಂದರ್ಭಗಳಲ್ಲಿ ಸಿನಿಮಾಗಳನ್ನು ಮನೆಯಲ್ಲಿ ಕುಳಿತು ಬೇಕೆಂದಾಗ, ನಮ್ಮದೆ ಮೊಬೈಲ್‌ದಲ್ಲಿ ಅಥವಾ ಸ್ಮಾರ್ಟ್ ಟಿವಿಯಲ್ಲಿ ಹಂತ ಹಂತವಾಗಿ ನೋಡುವ ಸುಲಭೋಪಾಯ ಸದರಿ ’ಓಟಿಟಿ’ ಪ್ಲಾಟ್ ಫಾರಂಗಳು ಒದಗಿಸುತ್ತಿವೆ. ಯಕ್ಷಗಾನ, ಭರತನಾಟ್ಯ, ನಾಟಕ ಪಪ್ಪೆಟ್ ಶೋ ಮತ್ತಿತ್ತರ ಪ್ರಮುಖ ಕಲೆಗಳಿಗೆ ಪ್ರೋತ್ಸಾಹಿಸಲು ವೇದಿಕೆಯಾಗಿದೆ ಕನ್ನಡದೇ ಆದ ಓಟಿಟಿ ಪ್ಲಾಟ್‌ಫ್ಲಾರ್ಮ್ ’ಮೂವಿ ಗ್ಯಾರೇಜು’.
ಗೌರಿ ಹಬ್ಬದ ದಿನದಂದು ಸುಜಾತಾ ಕಾಮತ್ ಅವರ ಆರ್.ಪಿ.ಕೆ ಎಂಟರ್‌ಪ್ರೈಸಸ್ ಮೊದಲ ಕಂಪೆನಿಯಾದ ’ಮೂವಿ ಗ್ಯಾರೇಜ್’ ಆಪ್ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಕಾರ್ಯದರ್ಶಿ ಎನ್.ಎಂ.ಸುರೇಶ್, ಹಿರಿಯ ನಿರ್ದೇಶಕ ದಿನೇಶ್‌ಬಾಬು, ನುರಿತ ಛಾಯಾಗ್ರಹಕರಾದ ಜೆ.ಜಿ.ಕೃಷ್ಣ, ಬಾಮಾ.ಹರೀಶ್ ಮತ್ತು ಫ್ಯಾಷನ್ ಡಿಸೈನರ್ ರಾಜೇಶ್‌ಶೆಟ್ಟಿ ಅವರಿಂದ ಲೋಕಾರ್ಪಣೆ ಮಾಡಲಾಯಿತು.
ಕನ್ನಡಕ್ಕೆ ಉತ್ತಮವಾದ ಓಟಿಟಿ ಇಲ್ಲ ಅಥವಾ ನಿರ್ಮಾಪಕರ ಸಹಕಾರಕ್ಕೆ ಯಾವ ಡಿಜಿಟಲ್ ಪ್ಲಾಟ್‌ಫಾರ್ಮ್ ಇಲ್ಲ ಎಂಬ ಕೊರಗನ್ನು ಈ ಹೊಸ ತಂಡವು ನೀಗಿಸುವುದು ಎಂದು ಭರವಸೆ ಕೊಟ್ಟಿದೆ. ಅದರಂತೆ ಬೆಂಗಳೂರಿನ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಆಪ್‌ದಲ್ಲಿ ಇದನ್ನು ಮಾಡಲಾಗಿತ್ತು. ತಂಡದ ಮತ್ತೋಂದು ಉದ್ದೇಶ ಆಯ್ದ ಉತ್ತಮ ಚಿತ್ರಗಳನ್ನು ಮಾತ್ರ ಕನ್ನಡದ ವೀಕ್ಷಕರಿಗೆ ಕೊಡುವುದು. ಮೊದಲ ಚಿತ್ರವಾಗಿ ’ಬಿಂಬ’ ಮೂವಿ ಗ್ಯಾರೇಜ್‌ನ ಪ್ರಥಮ ಚಿತ್ರವೆಂದು ಹೆಮ್ಮೆಯಿಂದ ಘೋಷಿಸಿಕೊಂಡಿತು. ಇದಕ್ಕೂ ಮುನ್ನ ’ಬಿಂಬ’ದ ನಾಯಕ ಶ್ರೀನಿವಾಸಪ್ರಭು ಒಬ್ಬರೆ ನಟಿಸಿರುವ ಕುರಿತಂತೆ ಅನುಭವಗಳನ್ನು ಹಂಚಿಕೊಂಡರು.
ನಿರ್ಮಾಪಕರ ಹಿತದೃಷ್ಟಿ, ಪಾರದರ್ಶಕವಾದ ವ್ಯಾಪಾರ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿತ್ರಗಳ ಮಾರ್ಕೆಟಿಂಗ್, ಚಲನಚಿತ್ರೋತ್ಸವಗಳಲ್ಲಿ ಭಾಗಿ. ಐಓಎಸ್/ಆಂಡ್ರಾಯ್ಡ್ ಟಿವಿ, ಮೊಬೈಲ್ ಹಾಗೂ ಇನ್ನಿತರ ಡಿವೈಸ್‌ಗಳಲ್ಲಿ ಲಭ್ಯವಿದೆ. ಉಚಿತ ವೀಕ್ಷಣೆ, ಸೃಜನಾತ್ಮಕ ಆಲೋಚನೆಗಳಿಗೆ ಬೆಲೆ. ಇವೆಲ್ಲ ಸೌಲಭ್ಯಗಳು ಇದರಲ್ಲಿ ಸಿಗಲಿದೆ. ನೀವು ಸಿನಿಮಾಸಕ್ತರಾಗಿದ್ದರೆ ಅಥವಾ ಸಿನಿಮಾ ನಾಟಕ, ವೆಬ್ ಸೀರಿಸ್, ಇನ್ಯಾವುದೇ ಕಲೆಯನ್ನು ಕನ್ನಡದಲ್ಲಿ ಮಾಡಿದರೆ ಸದರಿ ಆಪ್ ಡೌನ್‌ಲೋಡ್ ಮಾಡಿ ಹಾಗೆ ಸದರಿಯವನ್ನು ಸಂಪರ್ಕಿಸಬಹುದಾಗಿದೆ.