Kunthi Puthra.Film Press Meet

Monday, September 13, 2021

271

ನೈಜಘಟನೆಯಕುಂತಿಪುತ್ರ

೧೯೯೦ರ ಕಲಬುರ್ಗಿ ಭಾಗದಲ್ಲಿ ನಡೆದಂತಒಂದುಘಟನೆಯು ಈಗ ‘ಕುಂತಿಪುತ್ರ’ ಚಿತ್ರವಾಗಿ ಬರುತ್ತಿದೆ.ಸದ್ದಿಲ್ಲದೆ ಪಾಂಡವಪುರ ಸುತ್ತಮುತ್ತಚಿತ್ರೀಕರಣ ಮುಗಿಸಿದೆ.ಟಾಲಿವುಡ್‌ದಲ್ಲಿ ವಿಜುಯಲ್‌ಎಫೆಕ್ಟ್ ಕೆಲಸ ಮಾಡಿಕೊಂಡಿರುವರಾಜು ಬೋನಗಾನಿ ಸಿನಿಮಾಕ್ಕೆಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಮೊದಲ ಅನುಭವ. ಕತೆಯಲ್ಲಿತಾನಾಯಿತು, ತನ್ನ ಕೆಲಸವಾಯಿತುಎನ್ನುವಂತಿದ್ದ ಹುಡುಗ, ಕೆಟ್ಟದ್ದನ್ನುಎಂದೂ ಸಹಿಸಲಾರ ಹಾಗೂ ಅಲ್ಲಿಅನ್ಯಾಯಕಂಡುಬಂದರೆ, ನೇರವಾಗಿ ಹೇಳುತ್ತಿದ್ದ. ಈತನಗುಣದಿಂದ ಹಳ್ಳಿಜನರುಆತನನ್ನುತಪ್ಪಾಗಿ ತಿಳಿದುಕೊಂಡಿರುತ್ತಾರೆ.ಅವನ ಗುಣಕಂಡ ಅವಳು ಆತನ ಬದುಕಿಗೆ ಪ್ರವೇಶ ಮಾಡಿ ಸರಿದಾರಿಗೆತರಲು ಪ್ರಯತ್ನಿಸುತ್ತಾಳೆ ಎನ್ನುವುದು ಸಿನಿಮಾದ ಸಾರಾಂಶವಾಗಿದೆ.ನಿರ್ದೇಶಕರಕತೆಯನ್ನು ಮೆಚ್ಚಿಕೊಂಡಿರುವ ಶಶಾಂಕ್‌ಗೌಡ ಮತ್ತುದೇವೆಂದ್ರಗೌಡಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

ಅನಾಥನಾಗಿ, ದೊಡ್ಡವನಾದ ಮೇಲೆ ತಿಳಿದುಕೊಳ್ಳುವ, ಒಂಥರಾಆಧುನಿಕಕುಂತಿಪುತ್ರನ ಪಾತ್ರಕ್ಕೆ ಬಣ್ಣ ಹಚ್ಚಿರುವ ಗೋಷಿಕೃಷ್ಣ ನಾಯಕ.ಪ್ರಿಯಾಂಕಚೌದರಿ ನಾಯಕಿ. ಉಳಿದಂತೆ ಆರತಿರಾಜ್, ಜಯಪ್ರಕಾಶ್, ಜಸ್ಮಿತ  ಮುಂತಾದವರು ನಟಿಸಿದ್ದಾರೆ. ನಾಲ್ಕು ಹಾಡುಗಳಿಗೆ ದಿಲೀಪ್‌ಬಂಡಾರಿ ಸಂಗೀತ, ಈಶ್ವರ್‌ಛಾಯಾಗ್ರಹಣ, ಎಲ್.ಎನ್.ಸೂರ್ಯ ಸಾಹಿತ್ಯ-ಸಂಭಾಷಣೆಇರಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,