ನೀರೆಯರಿಗೆಆತ್ಮವಿಶ್ವಾಸತುಂಬುವಫ್ಯಾಶನ್ ಷೋ
ಫ್ಯಾಶನ್ ಷೋ ಅಂದರೆಅಲ್ಲಿಅಂದ,ಚಂದ,ಶೇಪ್, ವಯಸ್ಸು ಮುಂತಾದವುಇರುವವರನ್ನುರ‍್ಯಾಂಪ್ ವಾಕ್‌ದಲ್ಲಿ ಭಾಗವಹಿಸಲು ಅರ್ಹತೆಕೊಡುವುದು ಸಾಮಾನ್ಯವಾಗಿದೆ. ಆದರೆಜ್ಯೋತ್ಸಾವೆಂಕಟೇಶ್ ಮತ್ತು ಸಬರೇಷ್‌ಬಾಲಕೃಷ್ಣನಾಯ್ಡು ಸಾರಥ್ಯದಜಾಸ್ ಸ್ಟುಡಿಯೋದವರುಇದೆಲ್ಲಾವನ್ನು ಪರಿಗಣಿಸದೆ, ‘ಮಿಸ್‌ಅಂಡ್ ಮಿಸಸ್‌ಕರ್ನಾಟಕ ೨೦೨೧’ ಅಡಿಷನ್‌ಸ್ಪರ್ಧೆಯಲ್ಲಿ ಪಾಲ್ಗೋಳಲು ಅವಕಾಶ ಮಾಡಿಕೊಟ್ಟಿದ್ದರು.ಇದಕ್ಕೆಯಾವುದೇರೀತಿಯ ನೊಂದಣಿ ಶುಲ್ಕವಿರುವುದಿಲ್ಲ. ಪ್ರಸಕ್ತ ಪಿಡುಗು ಬಂದಿರುವಸಂದರ್ಭದಲ್ಲಿ ಇವರುಗಳಿಗೆ ಬದುಕಿನಲ್ಲಿಆತ್ಮವಿಶ್ವಾಸ, ಪ್ರೋತ್ಸಾಹ ಹಾಗೆಯೇಯಾವರೀತಿ ಪ್ರತಿನಿಧಿಸಬೇಕುಎಂಬುದರಧೈರ್ಯತುಂಬಲು ಇಂತಹ ಸ್ಪರ್ಧೆಯನ್ನುಏರ್ಪಡಿಸಲಾಗಿದೆ.ಹಾಗೆಯೇ ಇವರುಗಳನ್ನು ಮಾಲೀಶ್ ಮಾಡಿ ಹೇಗೆ ಎದುರಿಸಬೇಕೆಂಬ ಮಾರ್ಗಗಳನ್ನು ತೋರಿಸಿ, ಜೂಮ್ ಲೈಟ್‌ಗೆತರುವಂತೆಮಾಡುವುದೇ ಸಂಸ್ಥೆಯಗುರಿಯಾಗಿದೆ.
ಫ್ಯಾಶನ್ ಅಂಗಳದಲ್ಲಿ ಹೆಸರು ಮಾಡಿರುವ ಹತ್ತು ಮಂದಿ ಜ್ಯೂರಿಗಳಾಗಿದ್ದು, ಈ ಪೈಕಿ ಇಬ್ಬರು ಮಂಗಳಮುಖಿಯರುಗಳಾದ ನೀತೂ.ಆರ್.ಎಸ್ ಹಾಗೂ ಅಮಿತ್‌ಪಾಂಡ್ಯತೀರ್ಪುಗಾರರಾಗಿರುವುದು ಮತ್ತೋಂದು ಹಿರಿಮೆಎನ್ನಬಹುದು. ಬೆಂಗಳೂರು, ಮೈಸೂರು, ಮೂಡಬಿದಿರೆ, ತಿರುಪತಿ, ತ್ರಿಪುರ, ಶಿಲಾಂಗ್ ಇನ್ನು ಮುಂತಾದ ಸ್ಥಳಗಳಿಂದ ೧೧೫ ಸ್ಪರ್ಧಿಗಳು ಆಗಮಿಸಿದ್ದರು.೬೦ ಮಿಸ್ ಸುಂದರಿಯರು, ೫೫ ಮಿಸಸ್ ನೀರೆಯರು ಭಾಗವಹಿಸಿದ್ದರು.ಒಟ್ಟು ೧೨ ರಂತೆಎರಡು ವಿಭಾಗಗಳಿಂದ ಆಯ್ಕಯಾಗಲಿರುವರು. ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವಗ್ರ್ಯಾಂಡ್‌ರ‍್ಯಾಂಪ್ ವಾಕ್‌ದಲ್ಲಿಹಾಜರಾಗಲು ಸೌಲಭ್ಯಕಲ್ಪಿಸಲಾಗುವುದು. ನಟಅಭಯ್‌ವೀರ್, ಗಾಯಕಿ,ಮಜಾಭಾರತ್‌ಖ್ಯಾತಿಯರೆಮೋ ಮುಂತಾದ ಗಣ್ಯರಗಳು ಅತಿಥಿಗಳಾಗಿ ಆಗಮಿಸಿ ಸ್ಪರ್ಧಿಗಳಿಗೆ ಉತ್ತೇಜನತುಂಬಿದರು.