ಅಕ್ಟೋಬರ್ಒಂದರಂದುಕಾಗೆಮೊಟ್ಟೆ
ನವರಸನಾಯಕಜಗ್ಗೇಶ್‌ಅವರು ಪುತ್ರನಚಿತ್ರ ‘ಕಾಗೆ ಮೊಟ್ಟೆ’ಗೆ ಶುಭ ಹಾರೈಸಲು ಸ್ವಪತ್ನಿ ಸಮೇತ ಆಗಮಿಸಿದ್ದರು.ನಂತರ ಮಾತನಾಡುತ್ತಾಕರೋನಾ ಬರುವುದಕ್ಕೂ ಮುನ್ನವೇ ಸಿನಿಮಾ ನೋಡಿದ್ದೇನೆ. ಎರಡು ದಿನ ಆದರೂ ನನ್ನ ಮೈಂಡ್‌ನಿಂದ ದೃಶ್ಯಗಳು ಹೋಗಿರಲಿಲ್ಲ. ನಿಜಕ್ಕೂಇಂಥಚಿತ್ರತೆಗೆಯುವುದು ನನ್ನಿಂದ ಸಾಧ್ಯವಿಲ್ಲ. ನಿರ್ದೇಶನ, ನಿರ್ಮಾಪಕ ಹಾಗೂ ವಿತರಕನಾಗಿಅನುಭವ ಹೊಂದಿದ್ದೇನೆ. ಕತೆಯಲ್ಲಿಕುತೂಹಲಕಾರಿ ಅಂಶಗಳು ತುಂಬಿಕೊಂಡಿದೆ.ಚಿತ್ರರಂಗದಲ್ಲಿಯಶಸ್ಸು ಸುಲಭವಲ್ಲ. ತಾಳ್ಮೆ ಬಹಳ ಮುಖ್ಯ ನನಗೆ ಈಗಲೇ ಯಶಸ್ಸು ಸಿಗಬೇಕು. ಮುಂದಿನ ಗಳಿಗೆಗೆ ದಕ್ಕಬೇಕುಎನ್ನುವುದುತಪ್ಪು.೮೦ರಲ್ಲಿ ನಾನು ಚಿತ್ರರಂಗಕ್ಕೆ ಬಂದೆ.ಆಗ ಪತ್ರಿಕೆಯಲ್ಲಿ ನನ್ನ ಹೆಸರು ಬಂದಿತು.ಅದೇಹೆಸರು ಸಿನಿಮಾ ಪರದೆಯ ಮೇಲೆ ಬರಬೇಕೆಂದರೆಎಂಟು ವರ್ಷವಾಯಿತು.ಕಾಯಬೇಕು.ಕಾದವ ಮೇಧಾವಿ.ನುಗ್ಗಿದವ ಮೂರ್ಖ.ಮಾಡುವ ಕೆಲಸದಲ್ಲಿ ಶ್ರದ್ದೆಇದ್ದರೆ, ಒಂದಲ್ಲಒಂದು ದಿನ ಯಶಸ್ಸುಎನ್ನುವುದು ಬಂದೆ ಬರುತ್ತದೆಅದೇರೀತಿ ನನ್ನ ಮಗ, ತಪಸ್ವಿ ತರಹ ಕೆಲಸ ಮಾಡುತ್ತಿದ್ದಾನೆ. ಇಡೀತಂಡಕ್ಕೆ ಒಳ್ಳೆಯದಾಗಲೆಂದು ಮಾತಿಗೆ ವಿರಾಮ ಹಾಕಿದರು.
ಸ್ನೇಹಕ್ಕೆ ಸಂಬಂದಿಸಿದ ಕತೆಯಾಗಿದೆ.ಸ್ನೇಹಯಾವತ್ತಿದ್ದರೂ ಸ್ನೇಹವೇ.ಅದುಔಟ್‌ಡೇಟ್ ಆಗುವುದಿಲ್ಲ. ನಾಲ್ಕು ವರ್ಷಗಳ ಹಿಂದೆ ಸಿದ್ದಗೊಂಡಿತ್ತು.ಸ್ನೇಹಕ್ಕೆ ಸಂಬಂಧಿಸಿದ ಹತ್ತಾರು ಹಳೆಯ ಚಿತ್ರಗಳು, ಆಗಿನ ಬ್ಲಾಕ್‌ಅಂಡ್ ವೈಟ್ ಚಿತ್ರಗಳೇ ಇರಲಿ. ಅದನ್ನುಖುಷಿಯಿಂದ ಈಗಲೂ ನೋಡುತ್ತೇವೆ. ಅದೇರೀತಿ ನಮ್ಮಚಿತ್ರ.ಎಲ್ಲಾ ಕಾಲಕ್ಕೂ ಸಲ್ಲುತ್ತದೆಂದು ನಾಯಕಗುರುರಾಜ್ ಹೇಳಿದರು.ಚಂದ್ರಹಾಸ್ ನಿರ್ದೇಶನದಲ್ಲಿ ಸುಬ್ಬರಾಯುಡು.ಹೆಚ್. ಮತ್ತು ಎನ್.ಶ್ರೀನಿವಾಸಯ್ಯ ನಿರ್ಮಾಣ ಮಾಡಿರುವುದು ಹೊಸ ಅನುಭವ. ನಾಯಕಿಯಾಗಿತನುಜಾ. ಇವರೊಂದಿಗೆ ಶರತ್‌ಲೋಹಿತಾಶ್ವ, ಸತ್ಯಜಿತ್, ಸೂಪರ್ ಸ್ಟಾರ್‌ರಜನಿಕಾಂತ್ ಆಪ್ತ ರಾಜ್ ಬಹದ್ದೂರ್ ಮುಸ್ಲಿಂ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.ಚಿತ್ರವುಇದೇ ಶುಕ್ರವಾರದಂದುರಾಜ್ಯಾದ್ಯಂತ ಬಿಡುಗಡೆಆಗಲಿದೆ.