ಬಿಡುಗಡೆ ಸನಿಹದಲ್ಲಿ ನಿನ್ನ ಸನಿಹಕೆ
‘ನಿನ್ನ ಸನಿಹಕೆ’ ಚಿತ್ರವುಇದೇಎಂಟರಂದುತೆರೆಕಾಣುತ್ತಿದೆ.ಆ ಉದ್ದೇಶದಿಂದಲೇಇತ್ತೀಚೆಗಷ್ಟೇನಿರ್ಮಾಪಕರುಸುದ್ದಿಗೋಷ್ಟಿ ಕರೆದಿದ್ದರು.ನಾಯಕ ಮತ್ತು ನಿರ್ದೇಶನದ ಹೊಣೆಯನ್ನು ಹೊತ್ತಿರುವ ಸೂರಜ್‌ಗೌಡ ಮಾತನಾಡಿ, ಬೇರೆರೀತಿ ನೋಡಬೇಕು,ಅಂದುಕೊಂಡಂತೆಅದೇತರಹಮೂಡಿಬಂದಿದೆ.ಈಗಿನ ಕಾಲದಲ್ಲಿ ಪ್ರೀತಿಯನ್ನು ಹೇಗೆ ಕಾಣ್ತಾರೆ.ಸಹಮತ ಬಾಳ್ವೆಯನ್ನು ಸರ್ಕಾರವು ಅಂಗೀಕರಿಸಿದ್ದರೂ, ಸಮಾಜವುಒಪ್ಪಿಕೊಂಡಿಲ್ಲ. ಆ ವಿಚಾರವಾಗಿಕಾಮಿಕ್‌ರೀತಿಯಲ್ಲಿ ಹೇಳಲಾಗಿದೆ.ನಮ್ಮ ಸಿನಿಮಾಗೆಓಟಿಟಿದಿಂದ ಬೇಡಿಕೆ ಬಂದರೂ ನಿರ್ಮಾಪಕರೂಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕೆಂದು
ನಿರ್ಣಯತೆಗೆದುಕೊಂಡಿದ್ದಾರೆ.ಇನ್ನುಪ್ರೇಕ್ಷಕರುಇಷ್ಟಪಟ್ಟರೆತಂಡದ ಶ್ರಮ ಸಾರ್ಥಕವಾದಂತೆ.ರಘುದೀಕ್ಷಿತ್ ಬೆನ್ನಲುಬಾಗಿ ನಿಂತುಕೊಂಡಿದ್ದರಿಂದ ಹಾಡುಗಳು ಹಿಟ್‌ಆಗಿದೆ. ಕನ್ನಡ ಚಿತ್ರಗಳನ್ನು ಉಳಿಸಿ.ಚಿತ್ರಮಂದಿರಕ್ಕೆ ಬಂದು ಸಿನಿಮಾನೋಡಿರಿಎಂದುಅವಲತ್ತು ಮಾಡಿಕೊಂಡರು.
ದಂತವೈದ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸ್ವಾವಲಂಬಿಯಾಗಿರುತ್ತೇನೆ. ಅನಿಸಿದ್ದನ್ನು ಹಾಗೆ ಹೇಳುತ್ತೇನೆ. ಬೇಜಾರುಆದರೆ ತೋರಿಸಿಕೊಳ್ತೇನೆ. ಜೋರುಜೋರಾಗಿ ಬೈಯ್ತೆನೆ. ಒಂದುರೀತಿಯಲ್ಲಿ ನಿಜ ಜೀವನದಲ್ಲಿಇರುವಂತ ಪಾತ್ರ ಸಿಕ್ಕಿದ್ದು ಖುಷಿ ಕೊಟ್ಟಿದೆ.ಸುಂದರ ಪ್ರೇಮಕತೆಯಲ್ಲಿ ಸ್ವಾಭಾವಿಕರೋಮಾಂಟಿಕ್ ಅನುಭವಗಳು ಬರುತ್ತದೆಂದು ನವ ನಾಯಕಿಧನ್ಯರಾಮ್‌ಕುಮಾರ್ ಮಾಹಿತಿ ಹಂಚಿಕೊಂಡರು.
ಗೀತೆಗಳು ಯಶಸ್ವಿಯಾಗಿರುವುದಕ್ಕೆ ಸಾಹಿತಿ ವಾಸುಕಿ ವೈಭವ್‌ಕಾರಣರಾಗಿರುತ್ತಾರೆ. ಹಿನ್ನಲೆ ಸಂಗೀತ ಕೆಲಸ ಮಾಡುವ ಸಂದರ್ಭದಲ್ಲಿ ನಿರ್ದೇಶಕರೊಂದಿಗೆ ಪ್ರೇಮ ಕಲಹ ಆಡಿದ್ದೇವೆ. ಖಂಡಿತಚಿತ್ರವನ್ನುಜನರು ಸ್ವೀಕರಿಸುತ್ತಾರೆ ಎನ್ನುವ ಲಕ್ಷಣಗಳು ಗೋಚರಿಸುತ್ತಿವೆಎಂದು ಸಂಗೀತ ಸಂಯೋಜಕರಘುದೀಕ್ಷಿತ್ ಭವಿಷ್ಯ ನುಡಿದರು.ತಾರಾಗಣದಲ್ಲಿಮಂಜುನಾಥ್‌ಹೆಗ್ಡೆ,ಅರುಣಾಬಾಲರಾಜ್, ಕರಿಸುಬ್ಬು, ಚಿತ್ಕಲಾಬಿರಾದರ್,ರಜನಿಕಾಂತ್, ಸೌಮ್ಯಭಟ್‌ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಅಭಿಲಾಷ್‌ಕಳತ್ತಿ, ಸಂಕಲನ ಸುರೇಶ್‌ಆರ್ಮುಗಂ, ಕಲೆ ವರದರಾಜ್‌ಕಾಮತ್, ಸಂಭಾಷಣೆ ಪ್ರವೀಣ್‌ಕುಮಾರ್.ಜೆ. ಅವರದು.ಮೈಸೂರಿನ ಗೆಳೆಯರಾಗಿರುವ ಅಕ್ಷಯ್‌ರಾಜಶೇಖರ್ ಮತ್ತುರಂಗನಾಥ್‌ಕುಡ್ಲಿ ಸಿನಿಮಾ ಕೃಷಿಗೆ ಬಂಡವಾಳ ಹೂಡಿರುವುದು ಹೊಸ ಅನುಭವ.