ಆಕಾಶವಾಣಿ ನಿಲಯಇದುಚಿತ್ರದ ಹೆಸರು
ಜನರನ್ನುಚಿತ್ರಮಂದಿರಕ್ಕೆ ಸೆಳೆಯಲು ವಿನೂತನ ಶೀರ್ಷಿಕೆಗನ್ನು ಇಡುವುದು ಸದ್ಯ ವಾಡಿಕೆಯಾಗಿದೆ. ಅದರಂತೆ ಹಾರರ್‌ಕತೆ ಹೊಂದಿರುವ ‘ಇದುಆಕಾಶವಾಣಿ ಬೆಂಗಳೂರು ನಿಲಯ’ ಎಂಬ ಚಿತ್ರವೊಂದುತೆರೆಗೆ ಬರಲು ಸನ್ನಿಹಿತವಾಗಿದೆ. ಈ ಹಿಂದೆ ‘ನಾವೇ ಭಾಗ್ಯವಂತರು’ ನಿರ್ದೇಶನ ಮಾಡಿರುವ ಎಂ.ಹರಿಕೃಷ್ಣಅವರಿಗೆಎರಡನೇ ಅವಕಾಶ. ಋಷಿ ಸಂಸ್ಕ್ರತಿ ವಿದ್ಯಾಕೇಂದ್ರದ ಶಿಕ್ಷಕರಾದಗುರೂಜಿ ಶಿವಾನಂದಪ್ಪ ಬಳ್ಳಾರಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಅನಾಥ ಹುಡುಗಿಯೊಬ್ಬಳು ಹಳ್ಳಿಯಲ್ಲಿ ತನಗಾದಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಟ್ಟಣಕ್ಕೆ ಬಂದುಯಾವರೀತಿರೆಗ್ರೇಟ್ ಆಗ್ರಾಳೆ. ಒಬ್ಬ ಹುಡುಗಿಗೆಯಾರೂಇಲ್ಲಎಂದಾಗಆಕೆಯನ್ನುಜನ ಹೇಗೆಲ್ಲಾ ನೋಡುತ್ತಾರೆ.ಮ್ಯಾಟ್ರಿಮೋನಿಯಿಂದ ಹೇಗೆ ಮೋಸ ಹೋಗ್ತಾರೆಎಂಬುದನ್ನು ಹೇಳಲಾಗಿದೆ.ಮೂರು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತ ಸಂಯೋಜಿಸಿದ್ದಾರೆ.
ಮೂರು ಶೇಡ್‌ಗಳಲ್ಲಿ ಅದರಲ್ಲೊಂದುಡೆವಿಲ್ ಕ್ಯಾರಕ್ಟರ್ ಆಗಿ ನಟಿಸಿರುವ ರಣವೀರ್ ಪಾಟೀಲ ನಾಯಕ. ಹಳ್ಳಿ ಹುಡುಗಿಯಾಗಿ ನಿಖಿತಾಸ್ವಾಮಿ ನಾಯಕಿ. ಮನೆ ಕೆಲಸದವಳಾಗಿ ಕಾಮಿಡಿ ಕಿಲಾಡಿಗಳ ಖ್ಯಾತಿಯ ದಿವ್ಯಶ್ರೀ, ಮಂಡ್ಯಾದಗ್ರಾಮೀಣ ಭಾಷೆ ಮಾತನಾಡಿದ್ದಾರಂತೆ.ಇವರೊಂದಿಗೆ ನಾರಾಯಣಸ್ವಾಮಿ ಮುಂತಾದವರು ನಟಿಸಿದ್ದಾರೆ.ಕತೆ ಬರೆದಿರುವ ವಿಜಯ್‌ಕುಮಾರ್ ಹೇಳುವಂತೆ ಟೈಟಲ್‌ಗೂಆಕಾಶವಾಣಿಕೇಂದ್ರಕ್ಕೂಯಾವುದೇ ಸಂಬಂದವಿಲ್ಲ. ಚಿತ್ರದಲ್ಲಿರೇಡಿಯೋಕೂಡಒಂದು ಪಾತ್ರವಾಗಿ ಮೂಡಿಬಂದಿದೆ.ಆಕಾಶವಾಣಿ ಸಂಸ್ಥೆ ಹಾಗೂ ಅದರ ಸಿಬ್ಬಂದಿಗೆ ಅಪಪ್ರಚಾರ ಮಾಡುವಯಾವುದೇ ಸನ್ನಿವೇಶಗಳುಇದರಲ್ಲಿಇರುವುದಿಲ್ಲ ಎನ್ನುತ್ತಾರೆ.