ನಾಯಕ ವರ್ಸಸ್ ಖಳನಾಯಕ
ಹಿರಿಯ ನಿರ್ದೇಶಕಆರ್.ಅನಂತರಾಜು ಹನ್ನೊಂದನೇಚಿತ್ರ ‘ಕ್ಯಾಪಿಟಲ್ ಸಿಟಿ’ಗೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದುಆಕ್ಷನ್‌ಕಟ್ ಹೇಳುತ್ತಿರುವ ಸಿನಿಮಾದ ಮಹೂರ್ತ ಸಮಾರಂಭವು‘ಏಲಾ ಎಸ್ಟೇಟ್’ದಲ್ಲಿ ಸರಳವಾಗಿ ನಡೆಯಿತು. ಮೊದಲ ದೃಶ್ಯಕ್ಕೆ ಹಿರಿಯ ನಿರ್ಮಾಪಕ ಕೆ.ಮಂಜುಕ್ಲಾಪ್ ಮಾಡಿದರೆ, ಐಎಂಎಫ್‌ಎ ಸಂಸ್ಥೆಯದಿಲೀಪ್‌ಕ್ಯಾಮಾರಾ ಸ್ವಿಚ್ ಆನ್ ಮಾಡಿಚಿತ್ರಕ್ಕೆ ಶುಭ ಹಾರೈಸಿದರು.ಇನ್‌ಫಿನಿಟಿಕ್ರಿಯೇಷನ್ಸ್‌ಅಡಿಯಲ್ಲಿ ೨೩ ಸಿನಿಮಾ ಮೋಹಿಗಳು ಬಂಡವಾಳ ಹೂಡುತ್ತಿದ್ದು, ಇದರಲ್ಲಿಎಂಟು ಮಂದಿ ಬಣ್ಣ ಹಚ್ಚುತ್ತಿದ್ದಾರೆ.ಕರ್ನಾಟಕದರಾಜಧಾನಿ ಬೆಂಗಳೂರು.ಇಲ್ಲಿ ನಡೆಯುವಭೂಗತ ಲೋಕದ ಚಟುವಟಿಕೆಗಳು, ನಾಯಕಮತ್ತು ಖಳನಾಯಕನ ದ್ವೇಷದಕಥೆಯಾಗಿರುತ್ತದೆ.
ಜತೆಗೆ ಹಾಸ್ಯ, ಭಾವನೆಗಳು, ಸುಂದರ ಲವ್ ಟ್ರ್ಯಾಕ್‌ಇರಲಿದೆ. ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇ ಬೇಕು. ಕರ್ಮಣ್ಯೆ ವಾದಿಕಾರಸ್ತುಎನ್ನುವ ಹಾಗೆ ಮಹಾಭಾರತದಲ್ಲಿತಪ್ಪು ನಡೆಯುತ್ರಿರುವಾಗ ಕೃಷ್ಣ ಬರುವಂತೆ, ಆಧುನಿಕಯುಗದಲ್ಲಿ ತಪ್ಪುಗಳು ನಡೆಯುವಾಗ ನಾಯಕನಎಂಟ್ರಿಯಾಗುತ್ತದೆ.ಅದುಏನೆಂಬುದನ್ನು ಸಿನಿಮಾ ನೋಡಬೇಕಂತೆ.ಇದಕ್ಕೆತಕ್ಕಂತೆ ‘ಕರ್ಮಯಾಸ್ ನೋ ಡೆಡ್‌ಲೈನ್’ ಎಂದುಅಡಿಬರಹದಲ್ಲಿದೆ.
ಮೂರು ಚಿತ್ರಗಳಲ್ಲಿ ನಟಿಸಿರುವ ನಾಯಕರಾಜೀವ್‌ಅವರಿಗೆ ನಿರ್ದೇಶಕರುರಗಡ್ ಸ್ಟಾರ್‌ಎಂದು ಬಿರುದು ನೀಡಿದ್ದಾರೆ.ಇವರ ಪಾತ್ರಏನೆಂಬುದು ವಿರಾಮದ ನಂತರ ತಿಳಿಯುತ್ತದೆ.ಮುಗ್ದ ಹುಡುಗಿಯಾಗಿಕೃತಿಕಾ ನಾಯಕಿ.ಖದರ್‌ಡಾನ್ ಆಗಿ ರವಿಶಂಕರ್, ಎಸಿಪಿಯಾಗಿ ಶರತ್‌ಲೋಹಿತಾಶ್ವ, ಉತ್ತರಕರ್ನಾಟಕ ಶಾಸಕರಾಗಿ ಶ್ರೀಧರ್, ನಗಿಸಲು ಮುನಿರಾಜು-ರಿತೇಶ್‌ಇನ್ನು ಮುಂತಾದವರು ನಟಿಸುತ್ತಿದ್ದಾರೆ.
ಸಾಹಿತಿರಾಮ್‌ನಾರಾಯಣ್ ಬರೆದಿರುವ ನಾಲ್ಕು ಹಾಡುಗಳಿಗೆ ನಾಗು.ಎಸ್ ಸಂಗೀತ ಸಂಯೋಜಿಸುತ್ತಿದ್ದಾರೆ.ಛಾಯಾಗ್ರಹಣ ದೀಪು.ಎಸ್, ನೃತ್ಯಕಿಶೋರ್, ಸಾಹಸ ಡಿಫರೆಂಟ್‌ಡ್ಯಾನಿ, ಸಂಕಲನ ಈಶ್ವರ್, ಕಲೆ ರಮೇಶ್‌ದೇಸಾಯಿಅವರದಾಗಿದೆ. ಬೆಂಗಳೂರು ಸುತ್ತಮುತ್ತಚಿತ್ರೀಕರಣ ನಡೆಯಲಿದ್ದು, ಎರಡು ಹಾಡುಗಳಿಗೆ ಹೊರಗಡೆ ಹೋಗುವ ಇರಾದೆಇದೆ.