December 24.Film Audio Rel

Friday, December 24, 2021

509

ನೈಜ ಘಟನೆಯ ಡಿಸೆಂಬರ್ ೨೪

      ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಚಿತ್ರತಂಡವು ಆಕರ್ಷಕವಾದ ಶೀರ್ಷಿಕೆಯನ್ನು ಬಳಸಿಕೊಳ್ಳುತ್ತಾರೆ. ಇಲ್ಲೊಂದು ತಂಡವು ಕ್ಯಾಲೆಂಡರ್‌ದಲ್ಲಿ ಬರುವ ‘ಡಿಸೆಂಬರ್ ೨೪’ ಎನ್ನುವ ದಿನಾಂಕವನ್ನೇ ಟೈಟಲ್ ಆಗಿ ಇಟ್ಟುಕೊಂಡಿದೆ. ಇದೇ ಹೆಸರನ್ನು ಇಡೋದಕ್ಕೂ ಒಂದು ಬಲವಾದ ಕಾರಣವಿರುತ್ತದೆ. ಅದು ಏನೆಂಬುದನ್ನು ಚಿತ್ರ ನೋಡಿದರೆ ತಿಳಿಯುತ್ತದಂತೆ. ಈಗಾಗಲೇ ನಿರ್ಮಾಣೋತ್ತರ ಕೆಲಸಗಳನ್ನು ಪೂರ್ಣಗೊಳಿಸಿದೆ. ಪ್ರಚಾರದ ಸಲುವಾಗಿ ಚಿತ್ರದ ಮೋಶನ್ ಪೋಸ್ಟರ್ ಹಾಗೂ ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಿಕೊಂಡಿದೆ. ನಾಗರಾಜ್.ಎಂ.ಜಿ.ಗೌಡ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಎಂಜಿಎನ್ ಪ್ರೊಡಕ್ಷನ್ ಬ್ಯಾನರ್‌ದಲ್ಲಿ ದೇವುಹಾಸನ್, ಮಂಜು.ಡಿಟಿ ಮತ್ತು ವಿ.ಬೆಟ್ಟೆಗೌಡ ಜಂಟಿಯಾಗಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಹುಲಿಯೂರುದುರ್ಗದಲ್ಲಿ ೨೦೧೫ ರಿಂದ ೨೦೧೯ರ ವರೆಗೆ ನಡೆದ ಕೆಲ ನೈಜ ಘಟನೆಯನ್ನು ಆಧರಿಸಿದೆ.

      ತಾರಗಣದಲ್ಲಿ ಅಪ್ಪುಬಡಿಗೇರ, ರವಿ.ಕೆ.ಆರ್.ಪೇಟೆ, ರಘುಶೆಟ್ಟಿ, ಜಗದೀಶ್.ಹೆಚ್.ದೊಡ್ಡಿ, ಸಾಗರ್, ಭೂಮಿಕಾರಮೇಶ್, ಮಿಲನಾರಮೇಶ್, ದಿವ್ಯಾಆಚಾರ್ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಸಕಲೇಶಪುರ, ಹುಲಿಯೂರುದುರ್ಗ ಹಾಗೂ ದಾಂಡೇಲಿ ಸುತ್ತಮುತ್ತ ೬೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಡಾ.ವಿ.ನಾಗೇಂದ್ರಪ್ರಸಾದ್, ವಿಶಾಲ್ ಆಲಾಪ್-ಗೀತಾಆನಂದ್‌ಪಟೇಲ್ ಸಾಹಿತ್ಯದ ಗೀತೆಗಳಿಗೆ ಪ್ರವೀಣ್‌ನಿಕೇತನ್-ವಿಶಾಲ್‌ಆಲಾಪ್ ಸಂಗೀತ ಸಂಯೋಜಿಸಿದ್ದಾರೆ. ತಂಡಕ್ಕೆ ಶುಭಹಾರೈಸಲು ನಟ ಶ್ರೀನಗರಕಿಟ್ಟಿ, ಬಾ.ಮಾ.ಹರೀಶ್, ಕೋಡಿಹಳ್ಳಿಚಂದ್ರಶೇಖರ್, ಆರ್ಯಶಂಕರಮಠದ ಸಿದ್ದರಾಮ ಚೈತನ್ಯ ಸ್ವಾಮಿಗಳು ಮುಂತಾದವರು ಆಗಮಿಸಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,