Anthyavalla Aaramba.News

Monday, January 03, 2022

293

ಪ್ರತಿಯೊಬ್ಬರಿಗೂಅಂತ್ಯವಿರುವಂತೆಆರಂಭವುಇರುತ್ತದೆ

ಸುಂದರ ಸಾಮಾಜಿಕ, ಸಾಂಸರಿಕ, ಸದಭಿರುಚಿಯ,ಸಂದೇಶಸಹಿತ, ಕುತೂಹಲಕಾರಿ ಪ್ರೇಮಕಥಾನಕಚಿತ್ರ‘ಅಂತ್ಯವಲ್ಲಆರಂಭ’. ಅಗರ್ಭ ಶ್ರೀಮಂತ, ಹಾಗೆಯೇ ಮಹಾ ಜಿಪುಣನಾಗಿ ಸಂಚಾರಿವಿಜಯ್ ನಾಯಕ.ಪತ್ನಿಯಾಗಿ ಶೃತಿಹರಿಹರನ್ ನಾಯಕಿ.ತಾರಗಣದಲ್ಲಿ ನರಸಿಂಹರಾಜು ಮೊಮ್ಮಗ ವೆಂಕಟರಾಜು, ಶಿಶರ್, ಹರ್ಷ, ನಚಿಕೇತನ್, ದೀಪಕ್ ಮತ್ತು ಹಲವು ಮಂಗಳೂರು ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.  ಶೇಕಡ ೮೦ರಷ್ಟು ಚಿತ್ರೀಕರಣ ಸಾಗರ, ಉಳಿದಂತೆ ಬೆಂಗಳೂರು ಸುತ್ತಮುತ್ತ ಸ್ಥಳಗಳನ್ನು ಸೆರೆಹಿಡಿಯಲಾಗಿದೆ. 

ವಸುಮತಿಉಡುಪ ಸಂಭಾಷಣೆ ಮತ್ತು ಸಾಹಿತ್ಯದಐದು ಹಾಡುಗಳಿಗೆ ಸುಹಾಸ್ ಸಂಗೀತ ಸಂಯೋಜಿಸಿದ್ದಾರೆ. ಹಿನ್ನಲೆ ಶಬ್ದ ಶೇಡ್ರ್ಯಾಕ್‌ಸಾಲೋಮನ್, ಸಂಕಲನ ಸುರೇಶ್‌ಅರಸ್, ಛಾಯಾಗ್ರಹಣ ನಾಗೇಶ್‌ಆಚಾರ್ಯ-ಮಲ್ಲಿಕಾರ್ಜುನ, ನೃತ್ಯ ಮದನ್-ಹರಿಣಿ, ಕತೆಗೆಟಿ.ಕೆ.ಜಯರಾಂ ಪೆನ್ನು ಕೆಲಸ ಮಾಡಿದೆ.

ಕತೆಯಲ್ಲಿದಂಪತಿಗಳ ಸಂಬಂದಚೆನ್ನಾಗಿರುತ್ತದೆ.ಆದರೆ ಪ್ರೀತಿ, ಪ್ರೇಮಇರುವುದಿಲ್ಲ. ಮುಂದೆಇಬ್ಬರಿಗೂತೊಂದರೆ  ಶುರುವಾಗುತ್ತದೆ. ಕುಟುಂಬದಲ್ಲಿಎಲ್ಲರಿಗೂಇರುವಂತಹಜ್ವಲಂತ ಸಮಸ್ಯೆಇಬ್ಬರನ್ನುಕಾಡುತ್ತಾ ಹೋಗುತ್ತದೆ, ಕೊನೆಗೆ ಅದುಎಲ್ಲಿಗೆ ಹೋಗಿ ತಲುಪುತ್ತದೆಎಂಬುದಕ್ಕೆಉತ್ತರ ಸಿನಿಮಾ ನೋಡಿದರೆ ತಿಳಿಯುತ್ತದಂತೆ. ಯಾವುದಕ್ಕೂ ಕೊನೆ ಎಂಬುದುಇರುವುದಿಲ್ಲ. ಎಲ್ಲದಕ್ಕೂಒಂದು ಪ್ರಾರಂಭವಿರುತ್ತದೆಎಂಬುದನ್ನು ಸನ್ನಿವೇಶಗಳ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.

ನಡಹಳ್ಳಿಶ್ರೀಪಾದರಾವ್ ಮತ್ತುಡಾ.ಎನ್.ಜಿ.ಜಯಪ್ರಕಾಶ್‌ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಶಿವನಗೌಡ.ಎಸ್.ನಾಗನಗೌಡರ್‌ಹಾಗೂ ಆರ್.ಗಣೇಶ್‌ಕುಮಾರ್‌ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಡಾ.ಮಹೇಶ್‌ಜೋಶಿ, ನೇತ್ರತಜ್ಘಡಾ.ಭುಜಂಗಶೆಟ್ಟಿ, ಹಿರಿಯ ಪತ್ರಕರ್ತ ಮತ್ತು ಸಾಹಿತಿಜೋಗಿ,  ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಡಿ.ಆರ್.ಜೈರಾಜ್ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘದಅಧ್ಯಕ್ಷಡಿ.ಕೆ.ರಾಮಕೃಷ್ಣ ಆಗಮಿಸಿ ಸಂಸ್ಥೆಯು ಮುಂದೆ ನಿರ್ಮಾಣ ಮಾಡಲಿರುವ ‘ಬದುಕುಜಟಕಾ ಬಂಡಿ’ ‘ಹೆಣ್ಣು’’ನೇತ್ರದಾನ’ ‘ಮಣ್ಣು’ ‘ಸಂತಕವಿ ಕನಕದಾಸ’ ಚಿತ್ರದ ಶೀರ್ಷಿಕೆಗಳನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,