ಕುತೂಹಲ ಹುಟ್ಟಿಸುವ ಶೀರ್ಷಿಕೆ
ಆಕರ್ಷಕ ಶೀರ್ಷಿಕೆಗಳಿಂದ ಚಿತ್ರವುಗೆಲ್ಲುತ್ತದೆಎಂದು ನಂಬಿರುವಚಿತ್ರತಂಡವುಅದರ ಹಿಂದೆಜೋತು ಬೀಳುತ್ತದೆ.ಇಲ್ಲೊಂದು ಹೊಸ ತಂಡವು ‘ಹರೀಶ ವಯಸ್ಸು ೩೬’ ಎನ್ನುವ ಹೆಸರಿನೊಂದಿಗೆ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ತುಳು ಭಾಷೆ ಶಿಕ್ಷಕರಾಗಿರುವ ಗುರುರಾಜಜ್ಯೋಷ್ಠ ಸಂಗೀತಜತೆಗೆ ನಿರ್ದೇಶನ ಮಾಡಿದ್ದಾರೆ. ಲಕ್ಷೀಕಾಂತ್.ಹೆಚ್.ವಿ.ರಾವ್, ತ್ರಿಲೋಕ್‌ಕುಮಾರ್.ಜಾ, ಆರ್.ದೀಪ ಮತ್ತು ಚಿಂತಕುಂಠಶ್ರೀದೇವಿಜಂಟಿಯಾಗಿ ಶಿರಡಿ ಸಾಯಿ ಬಾಲಾಜಿ ಫಿಲಿಂಸ್ ಮೂಲಕ ಬಂಡವಾಳ ಹೂಡಿದ್ದಾರೆ. ಕಥೆಯಲ್ಲಿ ಹರೀಶನ ವಯಸ್ಸು ೩೬, ಅವಿವಾಹಿತ.ಕೆಲಸ ಇಲ್ಲದೆ ಬ್ರೋಕರ್ ವ್ಯವಹಾರ ಮಾಡುತ್ತಿರುತ್ತಾನೆ. ಹುಡುಗಿಯಕಡೆಯವರು ವಿಚಾರಿಸಿ ಜೀವನದಲ್ಲಿರಕ್ಷಣೆಇಲ್ಲವೆಂದು ಮಗಳನ್ನು ಕೊಡುತ್ತಿರುವುದಿಲ್ಲ.
ನಿರ್ದೇಶಕರ ಸಂಬಂದಿಯೊಬ್ಬರಜೀವನದ ಘಟನೆಗಳನ್ನು ಆಧರಿಸಿ ಚಿತ್ರಕಥೆಯನ್ನು ಬರೆಯಲಾಗಿದೆ.ಮನೆ ಬೀದಿ ಕಲ್ಪನೆಯಂತೆ ಸನ್ನಿವೇಶಗಳು ಬರುತ್ತದೆ.ಮನೆ ಅಂದರೆ ಸಭ್ಯ, ಗಂಭೀರ ಮತ್ತು ಬೀದಿಗೆ ಹಾಸ್ಯಎಂಬುದರಅರ್ಥಕೊಡುತ್ತದೆ.
ಕಾಸರಗೂಡಿನ ಮಂಜೇಶ್ವರದ ಸೈಕಾಲಜಿಓದಿರುವಯೋಗೀಶ್‌ಶೆಟ್ಟಿ ಸದ್ಯಎನ್‌ಜಿಓ ನಡೆಸುತ್ತಿದ್ದುಚಿತ್ರದಲ್ಲಿ ಹರೀಶನ ಪಾತ್ರವನ್ನು ನಿಭಾಯಿಸಿದ್ದಾರೆ.ರಂಗಭೂಮಿ ಹಾಗೂ ನಂದಗೋಕುಲಡ್ಯಾನ್ಸ್ ಶಾಲೆ ನಡೆಸುತ್ತಿರುವ ಮಂಗಳೂರು ಮೂಲದ ಶ್ವೇತಾಅರೆಹೊಳೆ ಜವಬ್ದಾರಿ ಮಹಿಳೆಯಾಗಿ ನಾಯಕಿ.ಉಳಿದಂತೆ ಎಂ.ಎಸ್.ಉಮೇಶ್, ರೋಹಿಣಿಜಗರಾಮ್, ಪ್ರಕಾಶ್‌ತುಮ್ಮಿನಾಡು, ರಕ್ಷಣ್‌ಮಾದುರ್, ಶೋಭಶೆಟ್ಟಿ, ಉಮೇಶ್‌ಮಿಜರ್, ಮಂಜುಳಜನಾರ್ಧನ್, ರಮೇಶ್‌ರೈ ಕುಕುವಳ್ಳಿ, ಸೌಮ್ಯಸುದೀಂಧ್ರ ಮುಂತಾದವರು ನಟಸಿದ್ದಾರೆ.ಪ್ರಚಾರದ ಸಲುವಾಗಿ ‘ಜಗದ್ದೋದಾರನ’, ‘ನಗುವ ಮರುಕಳಿಸುವೆ’ ‘ಬಾನಿಗೆ ಚಂದಿರನಿಲ್ಲದರಾತ್ರಿ’ ಹಾಗೂ ಟೈಟಲ್ ಸಾಂಗ್‌ಗೆಧ್ವನಿ ನೀಡಿರುವ ಪುನೀತ್‌ರಾಜ್‌ಕುಮಾರ್ ಹಾಡುಗಳನ್ನು ತೋರಿಸಲಾಯಿತು.ಛಾಯಾಗ್ರಹಣ ಮೋಹನ್‌ಪಾದ್ರೆ, ಸಂಕಲನ ದಿಪಿನ್‌ದಿವಾಕರ್, ಕಲೆ ರಾಜೇಶ್‌ಬಂದ್‌ಯೋದ್, ನೃತ್ಯ ಸ್ಟಾರ್‌ಗಿರಿಅವರದಾಗಿದೆ. ಅಂದಹಾಗೆ ಸಿನಿಮಾವು ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾದ್ಯತೆಇದೆ.