Film DNA.Film Trailer Rel

Tuesday, January 04, 2022

309

 

*ಸಂಬಂಧಗಳ ಸುತ್ತಲಿನ ಕಥೆ ಹೇಳಲಿದೆ* *ಡಿ.ಎನ್.ಎ* .

 

 *ಹಾಡುಗಳನ್ನು ಬಿಡುಗಡೆ ‌ಮಾಡಿ ಶುಭಕೋರಿದ ಪದ್ಮಶ್ರೀ ತುಳಸಿಗೌಡ.*

 

 

ದೇವನೂರು ಮಹಾದೇವ ಅವರು ಹೇಳಿರುವ "ಸಂಬಂಜ ಅನ್ನೋದು ದೊಡ್ದು ಕನಾ" ಎಂಬ ವಾಕ್ಯದ ಆಧಾರದ ಮೇಲೆ ನಿರ್ಮಾಣವಾಗಿರುವ ಚಿತ್ರ "ಡಿ.ಎನ್.ಎ".

 

ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಪದ್ಮಶ್ರೀ ತುಳಸಿಗೌಡ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು.

ವಿಡಿಯೋ ಸಾಂಗ್ ಒಂದನ್ನು ಮಾಸ್ಟರ್ ಆನಂದ್ ಲೋಕಾರ್ಪಣೆ ಮಾಡಿದರು.

 

ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೀನಿ. "ಜನುಮದ ಜೋಡಿ" ಚಿತ್ರಕ್ಕೆ ನಾಗಾಭರಣ ಅವರೊಡನೆ ಕೆಲಸ‌ ಮಾಡಿದ್ದೀನಿ. ಸಂಭಾಷಣೆಯನ್ನು ಬರೆದಿದ್ದೀನಿ. ಆದರೂ ಇದು ಕೆಲವರಿಗೆ ಬಿಟ್ಟು ಹೆಚ್ಚಿನ ಜನರಿಗೆ ತಿಳಿದಲ್ಲ. ಈಗ ಬಹಳ ವರ್ಷಗಳ ನಂತರ ಚಿತ್ರವೊಂದನ್ನು ನಿರ್ದೇಶಿಸಿದ್ದೇನೆ. ದೇವನೂರು ಮಹದೇವ ಅವರ "ಸಂಬಂಜ ಅನ್ನೋದು ದೊಡ್ದು ಕಾನ"  ಎಂಬ ಮಾತೇ ಈ ಚಿತ್ರಕ್ಕೆ ಸ್ಪೂರ್ತಿ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ದೇಶಕ ಪ್ರಕಾಶ್ ರಾಜ್ ಮೇಹು.

ನಾನು ಚಿಕ್ಕಂದಿನಿಂದಲೂ ಅಣ್ಣವ್ರ ಅಭಿಮಾನಿ. ಕುಟುಂಬ ಸಮೇತ ಕುಳಿತು ನೋಡಬಹುದಾದ ‌ಸಿನಿಮಾ‌‌ ಮಾಡುವ ಆಸೆಯಿತ್ತು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣ ಮಾಡಿದ್ದೀನಿ. ಇದು ನನ್ನ ಮೊದಲ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ಮಾಪಕ ಮೈಲಾರಿ.

 

ನಾನು ಹಾಗೂ ನಿರ್ದೇಶಕರು ಬಹುಕಾಲದ ಗೆಳೆಯರು. ಪ್ರಕಾಶ್ ಅವರು ಈ‌ ರೀತಿಯ ಕಥೆಯಿದೆ ಎಂದು ಹೇಳಿದ ತಕ್ಷಣ ನಟಿಸಲು ಒಪ್ಪಿಕೊಂಡೆ. ಕೊರೋನದಿಂದ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ. ನೀವೆಲ್ಲಾ ನೋಡಿ ಹರಿಸಿ ಎಂದರು ಅಚ್ಯುತ‌ ಕುಮಾರ್.

 

ಕೆಲವು ಸಿನಿಮಾಗಳು ಹೃದಯಕ್ಕೆ ಹತ್ತಿರವಾಗುತ್ತದೆ.‌ ಅಂತಹ ಒಂದು ಸಿನಿಮಾ "ಡಿ.ಎನ್.ಎ". ಇಂತಹ ಚಿತ್ರದಲ್ಲಿ ಅಭಿನಯಿಸಿದ ಖುಷಿಯಿದೆ ಎಂದರು ನಟಿ ಎಸ್ತರ್ ನರೋನ.‌

 

ಸಂಬಂಧಗಳ ಸುತ್ತ ಹೆಣೆದಿರುವ ಈ ಕಥೆ ತುಂಬಾ ಚೆನ್ನಾಗಿದೆ. ಉತ್ತಮ ಪಾತ್ರಕೊಟ್ಟ ನಿರ್ದೇಶಕರಿಗೆ ಧನ್ಯವಾದ ಎಂದರು ಅನಿತಾಭಟ್.

 

ನನ್ನ ಮಗ ಕೃಷ್ಣ ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ. ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಡಿ.ಎನ್.ಎ ಅಂದರೆ ಧ್ರುವ, ನಕ್ಷತ್ರ ಹಾಗೂ ಆಕಾಶ ಎಂದು. ಇದು ತಂದೆ , ತಾಯಿ ಹಾಗೂ ಮಗನ ಹೆಸರು ಎಂಬ ವಿಷಯವನ್ನು ತಿಳಿಸಿದ ಮಾಸ್ಟರ್ ಆನಂದ್ ಚಿತ್ರತಂಡಕ್ಕೆ ಶುಭ ಕೋರಿದರು.  

.

ಚೇತನ್ ರಾಜ್ ಸಂಗೀತದ ಬಗ್ಗೆ ಮಾತನಾಡಿದರು. ನಟಿ ಭವಾನಿ ಪ್ರಕಾಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

 

ಕೊರೋನ ಹೆಚ್ಚಾಗುತ್ತಿರುವುದರಿಂದ ಸರ್ಕಾರ ವೀಕೇಂಡ್ ಕರ್ಫ್ಯು ಮುಂತಾದ ನಿಯಮಗಳನ್ನು ಜಾರಿ‌ ಮಾಡಿದೆ. ಹಾಗಾಗಿ ಜನವರಿ 7 ರಂದು ಆಗಬೇಕಿದ್ದ ಚಿತ್ರ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ.

 

ರೋಜರ್ ನಾರಾಯಣ್, ಎಸ್ತರ್ ನರೋನ, ಅಚ್ಯುತ ಕುಮಾರ್, ಯಮುನ, ಅನಿತಾಭಟ್, ಮಾಸ್ಟರ್ ಕೃಷ್ಣ ಚೈತನ್ಯ, ಮಾಸ್ಟತ ಧ್ರುವ ಮೇಹು, ನಿಹಾರಿಕ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌‌.

Copyright@2018 Chitralahari | All Rights Reserved. Photo Journalist K.S. Mokshendra,